ಹೊಳೆಹೊನ್ನೂರಿನ ಹನುಮಂತಾಪುರದಲ್ಲಿ 55 ವರ್ಷದ ರಾಜಪ್ಪನ ಕೊಲೆ*

*ಹೊಳೆಹೊನ್ನೂರಿನ ಹನುಮಂತಾಪುರದಲ್ಲಿ 55 ವರ್ಷದ ರಾಜಪ್ಪನ ಕೊಲೆ*

ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಹನುಮಂತಾಪುರ ಗ್ರಾಮದಲ್ಲಿ ಕೊಲೆ ನಡೆದಿದೆ.

55 ವರ್ಷದ ರಾಜಪ್ಪ ಕೊಲೆಯಾದ ವ್ಯಕ್ತಿ. ಅವರ ತಲೆಗೆ ಮೊಂಡಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿದ್ದಾರೆ.

ಮೃತರ ಮನೆಯೊಳಗೆ ಶವ ಪತ್ತೆಯಾಗಿದೆ. ಸಾವಿಗೆ ವೈಯಕ್ತಿಕ ಕಾರಣವಿದೆ ಎಂದು ಹೇಳಲಾಗುತ್ತಿದೆ. ಶಂಕಿತನನ್ನು ಬಂಧಿಸಲಾಗಿದೆ. ಹೆಚ್ಚಿನ ವಿವರಗಳನ್ನು ನೀಡಲಾಗುವುದೆಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.