ಯಡಿಯೂರಪ್ಪರ ಬರ್ತ್ ಡೇ ಗೆ ವಿಶ್ ಮಾಡಿದ್ರಾ ಈಶ್ವರಪ್ಪ? ಅವರು ನನ್ನಪ್ಪನ ಥರ…ಅಪ್ಪ- ಅಮ್ಮನಿಗೆ ವಿಶ್ ಮಾಡ್ತಾರಾ ಅಂದಿದ್ದೇಕೆ ಈಶ್ವರಪ್ಪ? ಕೆ.ಎಸ್.ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ ಮುಖ್ಯಮಂತ್ರಿಯೇ ಬಂದು ಉಳಿದ ಬಡವರಿಗೆ ಮನೆ ನೀಡಲಿ… ಚೆನ್ನಿ ಭಾಯ್ ಅಂತ ಸಚಿವ ಜಮೀರ್ ಹೊಗಳಿದ್ದೇ ಬಂತು… ಜಮೀರ್ ಬಂದಿದ್ದರಿಂದ ಬಡವರಿಗೇನೂ ಲಾಭವಾಗಿಲ್ಲ…

ಯಡಿಯೂರಪ್ಪರ ಬರ್ತ್ ಡೇ ಗೆ ವಿಶ್ ಮಾಡಿದ್ರಾ ಈಶ್ವರಪ್ಪ?

ಅವರು ನನ್ನಪ್ಪನ ಥರ…ಅಪ್ಪ- ಅಮ್ಮನಿಗೆ ವಿಶ್ ಮಾಡ್ತಾರಾ ಅಂದಿದ್ದೇಕೆ ಈಶ್ವರಪ್ಪ?

ಕೆ.ಎಸ್.ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ

ಮುಖ್ಯಮಂತ್ರಿಯೇ ಬಂದು ಉಳಿದ ಬಡವರಿಗೆ ಮನೆ ನೀಡಲಿ…
ಚೆನ್ನಿ ಭಾಯ್ ಅಂತ ಸಚಿವ ಜಮೀರ್ ಹೊಗಳಿದ್ದೇ ಬಂತು…
ಜಮೀರ್ ಬಂದಿದ್ದರಿಂದ ಬಡವರಿಗೇನೂ ಲಾಭವಾಗಿಲ್ಲ…

ಆಶ್ರಯ ಯೋಜನೆ ಬಡವರ ಪಾಲಿಗೆ ಮರೀಚಿಕೆ. ಲಕ್ಷ ಲಕ್ಷ ಮನೆ, ಸಬ್ಸಿಡಿ, ಉಚಿತ ಅಂತೆಲ್ಲ ಘೋಷಣೆ ಮಾಡ್ತಿದೆ ರಾಜ್ಯ ಸರ್ಕಾರ.
ವಸತಿ ಸಚಿವ ಜಮೀರ್ ಅಹಮದ್ ಶಿವಮೊಗ್ಗಕ್ಕೆ ಬಂದು ಏನು ಕೊಟ್ಟಿದ್ದಾರೆ? ಸಚಿವ ಮಧು ಕೂಡ 12 ಕೋಟಿ ರೂ., ಬಿಡುಗಡೆಯ ಮಾತಾಡಿದ್ರು. ಖಾಲಿ ಕೈಯಲ್ಲಿ ಬಂದು ಜಮೀರ್ ಹೋಗಿದ್ದಾರೆ.

ಮೂರು ತಿಂಗಳ ಹಿಂದೆಯೇ ಮನೆಗಳನ್ನು ಶಾಸಕರು ಕೊಡ್ತೀನಿ ಅಂದಿದ್ರು. ತಮಗೆ ಕ್ರೆಡಿಟ್ ಸಿಗಲಿ ಅಂತ ಕಾಂಗ್ರೆಸ್ ಕೆಲಸ ಮಾಡಿದೆ.

ಪಾಲಿಕೆ ದುಡ್ಡಲ್ಲಿ ಟೆಂಪರ್ವರಿ ವಿದ್ಯುತ್ ಕೊಡಿಸಲಾಗಿದೆ. 1728 ಬಾಕಿ ಮನೆಗಳನ್ನು ಯಾವಾಗ ಕೊಡ್ತೀರಿ? 24 ಕೋಟಿ ರೂ., ಗುತ್ತಿಗೆದಾರನ ಹಣ ಮಾಡಿದ ಕೆಲಸದ್ದೇ ಬಾಕಿ ಇದೆ.
ಕೇಂದ್ರದ ಹಣ, ಬಡವರ ಹಣ ಬಳಸಿಕೊಂಡಾಗಿದೆ. ರಾಜ್ತ ಸರ್ಕಾರದ ಹಣ ಬಾಕಿ ಇದೆ. ಗೋವಿಂದಾಪುರದ ಮನೆಗಳಿಗೆ ತಾತ್ಕಾಲಿಕ ವಿದ್ಯುತ್ ಬಿಲ್ ನಾಲ್ಕುಪಟ್ಟು ಹೆಚ್ಚು ಬರಲಿದೆ. ಕೂಡಲೇ 12 ಕೋಟಿ ಬಿಡುಗಡೆ ಮಾಡಲಿ.

ನಮ್ ಎಂ ಎಲ್ ಎ ಗೆ 652 ಮನೆ ಕೊಟ್ಟಿದ್ರೆ ಸಾಕಿತ್ತು. ಚೆನ್ನಿಸಾಬ್ ಅಂತ ಜಮೀರ್ ಕರೆದು ಮಾತಾಡಿದ ಕೂಡಲೇ ಎಂ ಎಲ್ ಎ ನಕ್ಕು ಸುಮ್ಮನಾಗಿದ್ದಾರೆ. ಇಬ್ಬರೂ ಪರಸ್ಪರ ಹೊಗಳಿಕೊಂಡು ಕಾರ್ಯಕ್ರಮ ಮುಗಿಸಿದ್ದಾರೆ. ಇರೋ ಮನೆಗಳ ಪತ್ರ ಕೊಡೋಕೆ ಸಚಿವ ಜಮೀರ್ ರವರೇ ಬರಬೇಕಿತ್ತಾ? ಗುಮಾಸ್ತನೂ ಆ ಕೆಲಸ ಮಾಡುತ್ತಿದ್ದ.

ಗೋಪಶೆಟ್ಟಿಕೊಪ್ಪ 1836 ಮನೆಗಳು ನಾನು ಶಾಸಕನಾಗಿದ್ದಾಗ 500ಜನ ಮನೆಗಳಿಗೆ ಪೂರ್ಣ ಹಣ ಕಟ್ಟಲಾಗಿದೆ. ಒಂದೂವರೆ ವರ್ಷದಿಂದ ಕೆಲಸ ನಡೀತಿಲ್ಲ. ಗುತ್ತಿಗೆದಾರ ಜಾಗ ಖಾಲಿ ಮಾಡಿದ್ದಾನೆ. ಯೋಗ್ಯತೆ ಇದ್ರೆ ಮನೆ ಕಟ್ಟಿ. ರಾಜೀವ್ ಗಾಂಧಿ ಯೋಜನಾ ಕಚೇರಿಯಲ್ಲಿ ಅಪ್ಪ ಅಮ್ಮ ಯಾರೂ ಇಲ್ಲ.

ಗುಮಾಸ್ತನ ಕೆಲಸ ಮಾಡಿ ಹೋಗೋಕೆ ಜಮೀರ್ ಬರಬೇಕಿತ್ತಾ? ಮುಖ್ಯಮಂತ್ರಿಗಳೇ ನೀವೇ ಬಂದು ಕೆಲಸ ಮಾಡಿಕೊಡಿ. ಜಮೀರ್ ಕೈಯಲ್ಲಿ ಇದೆಲ್ಲ ಆಗೋಲ್ಲ.

ಬ್ಯಾಂಕಿನಿಂದ 4.20 ಲಕ್ಷ ಲೋನ್ ಆಗುತ್ತೆ. ಲೋನ್ ಬೇಡ ಅಂತ ಜಮೀರ್ ಹೇಳಿ ಗೊಂದಲ ಸೃಷ್ಟಿಸಿದ್ದಾರೆ. ಜಮೀರ್ ಬಂದು ಹೋಗಿದ್ದರಿಂದ ಬಡವರಿಗೇನೂ ಪ್ರಯೋಜನವಾಗಿಲ್ಲ.

ನಾನೇನು ಮಾಡಿದ್ನೋ ಅದನ್ನು ಹೊಗಳಲು ಮಾತ್ರ ಬಂದ್ರಾ ಜಮೀರ್ ರವರೇ? ತಕ್ಷಣ ಮುಖ್ಯಮಂತ್ರಿಗಳು ಗೋವಿಂದಾಪುರ, ಗೋಪಶೆಟ್ಟಿಕೊಪ್ಪದ ಬಡವರ ಮನೆಗಳನ್ನು ಪೂರ್ಣಗೊಳಿಸಬೇಕು. ಮೊದಲೇ ಯೋಜಿಸಲಾದ ಕೆಲಸದ ದುಡ್ಡಿಗೆ ಕ್ಯಾಬಿನೇಟ್ ಒಪ್ಪಿಗೆ ಮತ್ತೇಕೆ?

ಡಿಕೆಶಿಯವರು ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ನವರಂತೆ ಮಾತಾಡಿದ್ದಾರೆ. ತಾನೊಬ್ಬ ಹಿಂದೂವಾಗಿ ಹುಟ್ಟಿದ್ದೇನೆ…ಹಿಂದೂವಾಗಿಯೇ ಬದುಕುತ್ತೇನೆ ಎಂದಿದ್ದು ಸಂತೋಷದ ಸಂಗತಿ. ರಾಷ್ಟ್ರಭಕ್ತ ಹಿಂದೂಗಳಿಗೆ ಸ್ಫೂರ್ತಿ ಕೊಡುತ್ತೆ ಇದು. ಕೆಲ ಕಾಂಗ್ರೆಸ್ ನವರು ಟೀಕಿಸುತ್ತಿರುವುದು ಸರಿಯಲ್ಲ. ಎಲ್ಲ ಕಾಂಗ್ರೆಸ್ ನವರಿಗೂ ಹಿಂದೂಗಳ ಬಗ್ಗೆ, ಗಂಗೆಯ ಬಗ್ಗೆ ಗೌರವವಿದ್ದೇಯಿದೆ. ಮಹಾತ್ಮ ಗಾಂಧಿ ಆತ್ಮಕ್ಕೂ ಡಿಕೆಶಿ ಮಾತಿಂದ ಸಿಕ್ಕಿರಬಹುದು.

ನಮಸ್ತೆ ಸದಾ ವತ್ಸಲೆ ಅಂತ ವಿಧಾನಸೌಧದಲ್ಲೇ ಡಿಕೆಶಿ ಹೇಳಿದ್ರು. ಕಾಂಗ್ರೆಸ್ಸಿಗರು ಡಿಕೆಶಿ ದಾರಿ ತುಳಿಯಬೇಕು. ಪ್ರಯಾಗ್ ರಾಜಲ್ಲಿ ಸ್ನಾನ ಮಾಡಿ ಬಂದವರೆಲ್ಲ ಆರ್ ಎಸ್ ಎಸ್ ನವರಾ? ಭಕ್ತರಷ್ಟೇ. ಆರ್ ಎಸ್ ಎಸ್ ಹಿಂದೂ ಸಂಸ್ಕೃತಿಯನ್ನು ಬೆಳೆಸುತ್ತಾ ಬಂದಿದೆ.

ಆಶ್ರಯ ಮನೆ ಹಂಚಿಕೆಗೆ ಸಂಬಂಧಿಸಿದಂತೆ ಹಣ ಪಡೆದಿದ್ದರೆ ಅವರು ಉದ್ಧಾರ ಆಗೋಲ್ಲ.

ಅಪ್ಪನಿಗೆ ಬರ್ತ್ ಡೇ ವಿಶ್ ಮಾಡೋಕಾಗುತ್ತಾ? ಅಪ್ಪ ಅಮ್ಮನ ಮರೆಯೋಕೆ ಆಗುತ್ತಾ?