ಶಿವಮೊಗ್ಗದ ರಂಗಭೂಮಿ ಕಲಾವಿದನಿಂದ ನಡೆಯಿತೇ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ? ಆ ಕಲಾವಿದ ತಲೆಮರೆಸಿಕೊಂಡಿದ್ದೇಕೆ?*
*ಶಿವಮೊಗ್ಗದ ರಂಗಭೂಮಿ ಕಲಾವಿದನಿಂದ ನಡೆಯಿತೇ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ? ಆ ಕಲಾವಿದ ತಲೆಮರೆಸಿಕೊಂಡಿದ್ದೇಕೆ?*
ಶಿವಮೊಗ್ಗದ ರಂಗಭೂಮಿ ಕಲಾವಿದನೊಬ್ಬ ಸಾಕಷ್ಟು ಚರ್ಚೆಗೆ ಒಳಗಾಗಿದ್ದಾನೆ. ಹಲವು ನಾಟಕಗಳಲ್ಲಿ ಕಲಾವಿದನಾಗಿ ತೊಡಗಿಕೊಂಡಿದ್ದ ಈ ರಂಗ ಕಲಾವಿದ ಮನೆಪಾಠ ಹೇಳಿಕೊಡಲೆಂದು ಹೋಗಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಹೇಳಲಾಗುತ್ತಿದೆಯಾದರೂ ಯಾವುದೇ ದೂರು ದಾಖಲಾಗದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಯಾವುದೋ ಹಳ್ಳಿಯಿಂದ ರಾಯನಾಗಿ ಬಂದು ಆಗು ನೀ ಅನಿಕೇತನ ಅಂತ ಚೈತನ್ಯ ತುಂಬಬೇಕಿದ್ದ ಈ ಕಲಾವಿದ ಇಡೀ ರಂಗಭೂಮಿಯ ಜನ ತಲೆತಗ್ಗಿಸುವ ಕೆಲಸ ಮಾಡಿಬಿಟ್ಟನಾ?
ಖಾಸಗಿ ಶಾಲೆಯಲ್ಲೂ ಕೆಲಸ ಮಾಡುತ್ತಿರುವ ಈ ರಂಗ ಕಲಾವಿದನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹೇಳಲಾಗಿದೆ. ಆದರೂ ಈ ಕಲಾವಿದ ಪೋಕ್ಸೋ ಪ್ರಕರಣ ಭಯದಿಂದ ತಲೆ ಮರೆಸಿಕೊಂಡಿದ್ದಾನೆ ಎಂದೇ ರಂಗ ಪಡಸಾಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ.