ಡಾ. ಅಶೋಕ್ ಪೈ- ರಜನಿ ಪೈ ಯವರ ಮಾನಸ ಆಸ್ಪತ್ರೆಯಿಂದ ಪ್ರತಿಕ್ಷಣ ಸಾರ್ವಜನಿಕರಿಗೆ ಮಾನಸಿಕ ಕಿರಿಕಿರಿ!* *ಅಹಂಕಾರ ತಲೆಗೇರಿಸಿಕೊಂಡ ಮಾನಸ ಆಸ್ಪತ್ರೆಯವರ ತಲೆಗೆ ಟ್ರೀಟ್ ಮೆಂಟ್ ಕೊಡುತ್ತಾ ಪೊಲೀಸ್ ಇಲಾಖೆ?* *ಟ್ರಾಫಿಕ್ ಪೊಲೀಸರು ಸಮಸ್ಯೆ ಬಗೆಹರಿಸದಿದ್ದರೆ ಜನರೇ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧರಿಲ್ಲಿ!!*
*ಡಾ. ಅಶೋಕ್ ಪೈ- ರಜನಿ ಪೈ ಯವರ ಮಾನಸ ಆಸ್ಪತ್ರೆಯಿಂದ ಪ್ರತಿಕ್ಷಣ ಸಾರ್ವಜನಿಕರಿಗೆ ಮಾನಸಿಕ ಕಿರಿಕಿರಿ!*
*ಅಹಂಕಾರ ತಲೆಗೇರಿಸಿಕೊಂಡ ಮಾನಸ ಆಸ್ಪತ್ರೆಯವರ ತಲೆಗೆ ಟ್ರೀಟ್ ಮೆಂಟ್ ಕೊಡುತ್ತಾ ಪೊಲೀಸ್ ಇಲಾಖೆ?*
*ಟ್ರಾಫಿಕ್ ಪೊಲೀಸರು ಸಮಸ್ಯೆ ಬಗೆಹರಿಸದಿದ್ದರೆ ಜನರೇ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧರಿಲ್ಲಿ!!*
ಶಿವಮೊಗ್ಗದಲ್ಲಿ ಜಗತ್ ಪ್ರಸಿದ್ಧ ಆಸ್ಪತ್ರೆಯೊಂದಿದೆ. ಡಾ.ಕೆ.ಎ.ಅಶೋಕ್ ಪೈ ಕಟ್ಟಿದ ಈ ಮಾನಸಿಕ ಆಸ್ಪತ್ರೆ ಮಾನಸದಿಂದ ಸ್ಥಳೀಯ ಜನ ಪ್ರತಿಕ್ಷಣ ಮಾನಸಿಕ ಕಿರಿಕಿರಿ ಅನುಭವಿಸುವಂತಾಗಿದೆ!
ಶಿವಮೊಗ್ಗದ ಸವಾರ್ ಲೈನ್ ರಸ್ತೆಗೆ ತಾಕಿಕೊಂಡೇ ಕಿರು ದಾರಿಯಲ್ಲಿರುವ ಮಾನಸ ಆಸ್ಪತ್ರೆ ದಿನನಿತ್ಯ ಸಮಸ್ಯೆಯ ಕೇಂದ್ರವಾಗಿದೆ. ಇಲ್ಲಿಗೆ ಬರುವ ರೋಗಿಗಳು, ರೋಗಿಗಳ ಸಂಬಂಧಿಕರು ನೂರಾರು, ಸಾವಿರಾರು. ಅವರೆಲ್ಲರ ವಾಹನಗಳಿಂದ ತುಂಬಿಕೊಳ್ಳುವ ಆಸ್ಪತ್ರೆಯ ರಸ್ತೆ ಸೇರಿದಂತೆ ಅಕ್ಕಪಕ್ಕದ ರಸ್ತೆಗಳಲ್ಲಿ ವ್ಯವಹಾರ ಮಾಡಲು ಅಂಗಡಿ ತೆರೆದಿಟ್ಟುಕೊಂಡ ಹತ್ತಾರು ಅಂಗಡಿಗಳು, ಆಫೀಸುಗಳು, ಬ್ಯಾಂಕುಗಳು ಇವೆ. ಈ ಸಿಬ್ಬಂದಿ, ಮಾಲೀಕರು ತಮ್ಮ ವಾಹನಗಳನ್ನೇ ತಮ್ಮ ಸ್ಥಳಗಳಲ್ಲಿ ನಿಲ್ಲಿಸಿಕೊಳ್ಳಲು ಪರದಾಡುವ ಸ್ಥಿತಿಯಲ್ಲಿದ್ದಾರೆ. ದಿನ ನಿತ್ಯ ಇಲ್ಲಿ ಒಂದಲ್ಲಾ ಒಂದು ರಗಳೆಗಳು ನಡೆಯುತ್ತಿವೆ.
ಈ ಮಾನಸ ಆಸ್ಪತ್ರೆಯ ಮಾಲೀಕರು, ಟ್ರಸ್ಟಿಗಳು, ಸಿಬ್ಬಂದಿಗಳ ವಾಹನಗಳಲ್ಲದೇ ಇವರದೇ ಕಾಲೇಜಿನ ಬಸ್ ಗಳು ಕೂಡ ಇಲ್ಲಿ ಬಂದು ನಿಲ್ಲುವುದರಿಂದ ಸಾರ್ವಜನಿಕರ ಬದುಕು ದುಸ್ತರವಾಗಿ ಹೋಗಿದೆ. ಕೆಲ ಸಾರ್ವಜನಿಕರ ವಾಹನಗಳನ್ನಂತೂ ನಿಲ್ಲಿಸಿದ ಜಾಗದಿಂದ ದೌರ್ಜನ್ಯದ ರೀತಿಯಲ್ಲಿ ರಸ್ತೆಯ ಮಧ್ಯಕ್ಕೆಳೆ ಎಳೆದು ಎಸೆಯುವಷ್ಟು ದರ್ಪ ತೋರಿಸುತ್ತಾರೆ ಆಸ್ಪತ್ರೆಯ ಸಿಬ್ಬಂದಿ.
ಈ ಆಸ್ಪತ್ರೆ ಕೆಲವು ಕಾರಣಗಳಿಂದ ಜಗತ್ಪ್ರಸಿದ್ಧ ಆಗಿರಬಹುದಾದರೂ ಸ್ಥಳೀಯ ಸಾರ್ವಜನಿಕರ ಪಾಲಿಗೆ ವಿಲನ್ ಕೆಲಸ ಮಾಡುತ್ತಿದೆ. ಈ ಆಸ್ಪತ್ರೆ, ಇವರ ಕಾಲೇಜು, ಇವರದೇ ಮೆಡಿಕಲ್ ಶಾಪ್ ನಿಂದಾಗಿ ಆಗುತ್ತಿರುವ ಸಂಚಾರ ತೊಂದರೆಗೆ ಮುಕ್ತಿ ಸಿಗುತ್ತಿಲ್ಲ.
ಈ ಮಾನಸ ಆಸ್ಪತ್ರೆಯ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾದರೆ ಅವರ ಮೇಲೆ ಆಡಳಿತ ಮಂಡಳಿ ತಮ್ಮ ಪ್ರಭಾವಿ ರಾಜಕಾರಣಿ, ಅಧಿಕಾರಿಗಳಿಂದ ಒತ್ತಡ ಹೇರಿಸುತ್ತಿರುವ ಹಾಗೂ ಆಸ್ಪತ್ರೆ ವಿರುದ್ಧ ಬರುವ ಜನರ ಸಾಮಾಜಿಕ ಕಳಕಳಿಯನ್ನು ಸ್ಮಶಾನಕ್ಕೆ ಸೇರಿಸುವ ಕೆಲಸವನ್ನೂ ಮಾಡುತ್ತಾರೆಂದು ಆರೋಪಗಳಿವೆ.
ನಾಲ್ಕಾರು ತಿಂಗಳ ಹಿಂದೆ ಮುಚ್ಚಲ್ಪಟ್ಟಿದ್ದ ಆನಂದ್ ಬಾರ್ ಪಕ್ಕದ ಕನ್ಸರ್ ವೆನ್ಸಿ ದಾರಿಯನ್ನು ಇದೇ ಟ್ರಾಫಿಕ್ ಪೊಲೀಸರು ಸ್ವಚ್ಛಗೊಳಿಸಿ ಮಾನಸ ಆಸ್ಪತ್ರೆಯ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಅಹಂಕಾರ ತಲೆಗೇರಿಸಿಕೊಂಡಂತೆ ವರ್ತಿಸುತ್ತಿರುವ ಮಾನಸ ಆಸ್ಪತ್ರೆಯ ಸಿಬ್ಬಂದಿ ಗೂಂಡಾಗಳಂತೆ ವರ್ತಿಸುವುದು, ಆಸ್ಪತ್ರೆ ಮುಂದಿನ ಜಾಗದಲ್ಲಿ ಸಾರ್ವಜನಿಕರ ವಾಹನಗಳು ನಿಲ್ಲದಂತೆ ಹಗ್ಗ ಕಟ್ಟುವುದು, ನಿಂತ ವಾಹನಗಳನ್ನು ರಸ್ತೆ ಮಧ್ಯೆ ಎಸೆಯುವುದು, ಬೇರೆ ವಾಹನಗಳಿಗೆ ಓಡಾಡಲು ಅವಕಾಶ ನೀಡದಂತೆ ನೋಡಿಕೊಳ್ಳುವುದು ಏನನ್ನು ಸೂಚಿಸುತ್ತದೆ?
ಒಂದಿಷ್ಟು ದಿನಗಳಲ್ಲಿ ಮಾನಸ ಆಸ್ಪತ್ರೆಯವರು ಇಡೀ ದಾರಿಗೆ ಮುಳ್ಳಿನ ಬೇಲಿ ಸುತ್ತಿಕೊಂಡರೂ ಆಶ್ಚರ್ಯ ಪಡುವಂತಿಲ್ಲ!
ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಶಿವಮೊಗ್ಗದ ಎಸ್ ಪಿ ಮಿಥುನ್ ಕುಮಾರ್, ಟ್ರಾಫಿಕ್ ಪೊಲೀಸರು ಸಾರ್ವಜನಿಕವಾಗಿ ಸಾಧಿಸಿ ತೋರಿಸುತ್ತಾರಾ? ಮಾನಸ ಆಸ್ಪತ್ರೆ ಮುಂದಿನ ಸಂಚಾರ ಸಮಸ್ಯೆ ಬಗೆಹರಿಸುತ್ತಾರಾ? ಕಾದು ನೋಡೋಣ…ಮುಂದಿನ ಹೋರಾಟ ಮತ್ತೆ ರೂಪಿಸೋಣ…