ವೃದ್ಧೆಯ ಮಾಂಗಲ್ಯ ಸರ ಅಪಹರಿಸಿದ್ದ ಕಳ್ಳನನ್ನು 24 ಗಂಟೆಯೊಳಗೆ ಬೇಟೆಯಾಡಿದ ಸಾಗರ ಗ್ರಾಮಾಂತರ ಪೊಲೀಸರು*
*ವೃದ್ಧೆಯ ಮಾಂಗಲ್ಯ ಸರ ಅಪಹರಿಸಿದ್ದ ಕಳ್ಳನನ್ನು 24 ಗಂಟೆಯೊಳಗೆ ಬೇಟೆಯಾಡಿದ ಸಾಗರ ಗ್ರಾಮಾಂತರ ಪೊಲೀಸರು*
ವೃದ್ಧ ದಂಪತಿಗಳು ಮನೆಯೊಳಗಿದ್ದಾಗ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ವೃದ್ಧೆಯ ಮಾಂಗಲ್ಯ ಸರ ಅಪಹರಿಸಿದ್ದ ಕಳ್ಳನನ್ನು ಬಂಧಿಸಿರುವ ಸಾಗರ ಗ್ರಾಮಾಂತರ ಪೊಲೀಸರು, ಆತನಿಂದ 2.26 ಲಕ್ಷ ರೂ.,ಗಳ ಮೌಲ್ಯದ 26.400 ಗ್ರಾಂ ತೂಕದ ಮಾಂಗಲ್ಯ ಸರ ವಶಕ್ಕೆ ಪಡೆದಿದ್ದಾರೆ.
ಕಳೆದ ಮಾ.2 ರಂದು ಪ್ರಕರಣ ದಾಖಲಾದ 24 ಗಂಟೆಯೊಳಗೆ ಪೊಲೀಸರು ಸಾಗರ ತಾಲ್ಲೂಕಿನ ಶೆಡ್ತಿಕೆರೆ ಗ್ರಾಮದ ಸಿ.ರವಿಕುಮಾರ್(39) ನನ್ನು ಪೊಲೀಸರು ಬಂಧಿಸಿದ್ದಾರೆ.
ಎಸ್ ಪಿ ಮಿಥುನ್ ಕುಮಾರ್ ನಿರ್ದೇಶನದ ಮೇರೆಗೆ ಸಾಗರ ಡಿವೈಎಸ್ ಪಿ ಟಿ.ಗೋಪಾಲಕೃಷ್ಣ ನಾಯ್ಕರ ಮೇಲ್ವಿಚಾರಣೆಯಲ್ಲಿ ಪಿ ಐ ಎಸ್.ಎನ್. ಮಹಾಬಲೇಶ್ವರ ನೇತೃತ್ವದ ಪಿಎಸ್ ಐ ಸಿದ್ದರಾಮಪ್ಪ, ಹೆಚ್ ಸಿ ಶೇಖ್ ಫೈರೋಜ್ ಅಹಮದ್ , ರವಿಕುಮಾರ್, ಹನುಮಂತ ಜಂಬೂರ್, ನಂದೀಶ್, ಪ್ರವೀಣ್ ಕುಮಾರ್, ವಿಶ್ವನಾಥ ಸೇರಿದಂತೆ ಹಲವರ ತಂಡ ಈ ಸಾಧನೆ ಮಾಡಿದೆ.