ಸಾಗರದ ಎಂ.ಸತ್ಯನಾರಾಯಣರಿಗೆ ನಾ.ಡಿಸೋಜಾ ಸಾಹಿತ್ಯ ಪ್ರಶಸ್ತಿ ಪ್ರದಾನ
ಸಾಗರದ ಎಂ.ಸತ್ಯನಾರಾಯಣರಿಗೆ ನಾ.ಡಿಸೋಜಾ ಸಾಹಿತ್ಯ ಪ್ರಶಸ್ತಿ ಪ್ರದಾನ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಆನ್ವೇಷಣೆ ಸಾಂಸ್ಕ್ರತಿಕ ಅಕಾಡೆಮಿ(ರಿ) ಇವರ ವತಿಯಿಂದ ಸಾಗರದ ಹಿರಿಯ ಕವಿ, ಲೇಖಕ ಸಾಹಿತಿ, ಎಂ ಸತ್ಯನಾರಾಯಣ ಸಾಗರ ಇವರ ಕಳೆದ 40 ವರ್ಷಗಳ ಸಾಹಿತ್ಯ ಸೇವೆಯನ್ನು ಪರಿಗಣಿಸಿ ” ರಾಜ್ಯಮಟ್ಟದ ನಾ ಡಿಸೋಜ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಹಿರಿಯ ಸಾಹಿತಿಗಳಾದ,ಕುಂ.ವೀರಭದ್ರಪ್ಪ, ಡಾ.ಮೂಡ್ನಾಕೂಡು ಚಿನ್ನಸ್ವಾಮಿ,ಸಾಹಿತಿಗಳು, ಡಾ.ದೊಡ್ಡರಂಗೇಗೌಡ, ಚಿತ್ರನಟ ನಿರ್ದೇಶಕ, ಸುಚೇಂದ್ರ ಪ್ರಸಾದ , ಖ್ಯಾತ ಕಾದಂಬರಿಕಾರ ಕೌಂಡಿನ್ಯ ಹಾಗು ಕತೆಗಾರರಾದ ಕೆ ಶ್ರೀಧರ್ ಇನ್ನು ಮುಂತಾದವರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಸಂಸ್ಥೆಯ ಸಂಸ್ಥಾಪಕರಾದ ಭದ್ರಾವತಿ ರಾಮಾಚಾರಿ ಅವರು ಹಾಜರಿದ್ದರು.