*ಹೇಮಾವತಿ ಮರಿ ಸಾವಿಗೆ ಹಾಲಿನ ಕೊರತೆ ಕಾರಣವೋ?* *ಕಾಡಾನೆ ಕೊಂದಿತೋ?* *ಏನಿದು ಪ್ರಕರಣ? ತನಿಖೆ ನಡೆಯುವುದೇ?* *ಅನುಮಾನಕ್ಕೆ ಕಾರಣವಾಯ್ತು ಮರಿ ಆನೆ ಸಾವು?*
*ಹೇಮಾವತಿ ಮರಿ ಸಾವಿಗೆ ಹಾಲಿನ ಕೊರತೆ ಕಾರಣವೋ?*
*ಕಾಡಾನೆ ಕೊಂದಿತೋ?*
*ಏನಿದು ಪ್ರಕರಣ? ತನಿಖೆ ನಡೆಯುವುದೇ?*
*ಅನುಮಾನಕ್ಕೆ ಕಾರಣವಾಯ್ತು ಮರಿ ಆನೆ ಸಾವು?*
ಹೇಮಾವತಿ ಕೊನೆಗೂ ತನ್ನ ಚೊಚ್ಚಲ ಮಗು ಕಳೆದುಕೊಂಡಿದೆ.
ಹತ್ತೂವರೆ ವರ್ಷದ ಹೇಮಾವತಿ ಕಾಡಿನ ಜೀವದ ಸಹವಾಸ ಮಾಡಿ, ಗರ್ಭಿಣಿಯಾಗಿದ್ದಲ್ಲದೇ, ಅವಧಿ ಪೂರ್ವವೇ ಮಗುವಿಗೆ ಜನ್ಮ ನೀಡಿದ್ದರಿಂದ ಪರಿಸರಕ್ಕೆ ಹೊಂದಿಕೊಳ್ಳದ ಕಂದ ಹಾಲು ಕುಡಿಯಲಾರದೇ ಅಸುನೀಗಿದೆ!
ಶಿವಮೊಗ್ಗದಿಂದ 12 ಕಿ.ಮೀ.ದೂರದಲ್ಲಿರುವ ಸಕ್ಕರೆಬೈಲಿನ ಆನೆ ಕ್ಯಾಂಪಿನಲ್ಲಿರುವ ಹತ್ತೂವರೆ ವರ್ಷದ ಹೇಮಾವತಿ ಎಂಬ ಸಾಕಾನೆ(2023ರ ಶಿವಮೊಗ್ಗ ದಸರಾದಲ್ಲಿ ಪಾಲ್ಗೊಂಡಿದ್ದ ಹೆಣ್ಣಾನೆ) ಕಾಡಾನೆಯ ಸಹವಾಸಕ್ಕೆ ಬಿದ್ದು ಗರ್ಭಿಣಿಯಾಗಿತ್ತು. ಅವಧಿಗಿಂತ ಮುಂಚೆಯೇ ಗರ್ಭ ಧರಿಸಿದ್ದ ಹೇಮಾವತಿ, ಮರಿ ಹೆತ್ತಿತ್ತು.
ಕಳೆದ ಐದು ದಿನಗಳ ಹಿಂದಷ್ಟೇ ಮರಿಗೆ ಜನ್ಮ ನೀಡಿದ್ದ ಹೇಮಾವತಿ, ಕಾಡಾನೆಯ ಕಾವಲಿನಲ್ಲಿಯೇ ಇತ್ತು. ಮರಿ ಹಾಕಿದ ಹೇಮಾವತಿಯನ್ನು ಊರಿಗೆ ಕರೆತರಲು ಕಷ್ಟಸಾಧ್ಯವಾದಾಗ ಮಾವುತ- ಕವಾಡಿಗಳು ಕಾಡಲ್ಲಿಯೇ ಆರೈಕೆ ಮಾಡುತ್ತಿದ್ದರೆಂದು ಅಧಿಕೃತ ಮೂಲಗಳು ತಿಳಿಸಿವೆ.
ವನ್ಯಜೀವಿ ವೈದ್ಯ ವಿನಯ್ ನೇತೃತ್ವದ ತಂಡದ ಕಣ್ಗಾವಲಲ್ಲೇ ಇದ್ದ ತಾಯಿ, ಮರಿಯಾನೆ ಆರೋಗ್ಯದ ದೃಷ್ಟಿಯಿಂದ ಪಟಾಕಿ ಸಿಡಿಸಿ ಜೊತೆಗಿದ್ದ ಕಾಡಾನೆ ಓಡಿಸುವ ಪ್ರಯತ್ನ ಕೂಡ ಮಾಡಿದರು. ಮರಿಯಾನೆಗೆ ಹಾಲುಣಿಸಲು ಪ್ರಯತ್ನ ಮಾಡಿದರು.
ಹಾಲುಣಿಸುವ ಮನೋಸ್ಥಿತಿಯಲ್ಲೇ ಇರದಿದ್ದ ಹೇಮಾವತಿ, ಹಾಲು ಕುಡಿಯಲಾರದ ಸ್ಥಿತಿಯಲ್ಲಿದ್ದ ಮರಿಯಾನೆಯ ನಡುವೆ ದೊಡ್ಡ ಸಮಸ್ಯೆಯಾಗಿ ಕಾಡಿದ್ದು ಕಾಡಾನೆ!
ಮರಿಯಾನೆ ಆರೈಕೆಯಲ್ಲಿದ್ದವರ ಮೇಲೆಯೇ ಕಾಡಾನೆ ದಾಂಧಲೆ ಮಾಡಲು ಒಳಗಾಗಿದೆ. ಮಾವುತ ಹೇಗೋ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾನೆ ಎಂದು ಶಿವಮೊಗ್ಗ ವನ್ಯಜೀವಿ ಡಿಸಿಎಫ್ ಪಟಕಾರ್ ಪ್ರಸನ್ನ ಹೇಳುತ್ತಿದ್ದಾರೆ.
ಹಾಲಿನ ಕೊರತೆಯಿಂದ ಹೇಮಾವತಿಯ ಮರಿ ತೀರಿ ಕೊಂಡಿತೋ? ಕಾಡಾನೆ ತಿವಿತದಿಂದ ಸಾವು ಕಂಡಿತೋ? ಅನುಮಾನಗಳು ಹಾಗೇ ಉಳಿದಿವೆ.