ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪತ್ರಿಕಾಗೋಷ್ಠಿ; ಲವ್ ಜಿಹಾದ್ ಮುಸ್ಲೀಮರ ಜನಸಂಖ್ಯೆ ಹೆಚ್ಚಿಸಿಕೊಳ್ಳುವ ಒಂದು ಮಾರ್ಗ ವಿದ್ಯಾರ್ಥಿನಿ- ಮಹಿಳೆಯರಿಗೆ ನೂರು ಕಡೆಗೆ ತ್ರಿಶೂಲ ದೀಕ್ಷೆ ಚಕ್ರವರ್ತಿ ಸೂಲಿಬೆಲೆ ಅನ್ಯಧರ್ಮ ಹುಡುಗಿಯರನ್ನು ಪ್ರೀತಿಸುವ ಹೇಳಿಕೆಗೆ ಸಂಪೂರ್ಣ ಬೆಂಬಲ ಸೂಚಿಸಿದ ಪ್ರಮೋದ್ ಮುತಾಲಿಕ್
ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪತ್ರಿಕಾಗೋಷ್ಠಿ;
ಲವ್ ಜಿಹಾದ್ ಮುಸ್ಲೀಮರ ಜನಸಂಖ್ಯೆ ಹೆಚ್ಚಿಸಿಕೊಳ್ಳುವ ಒಂದು ಮಾರ್ಗ
ವಿದ್ಯಾರ್ಥಿನಿ- ಮಹಿಳೆಯರಿಗೆ ನೂರು ಕಡೆಗೆ ತ್ರಿಶೂಲ ದೀಕ್ಷೆ
ಚಕ್ರವರ್ತಿ ಸೂಲಿಬೆಲೆ ಅನ್ಯಧರ್ಮ ಹುಡುಗಿಯರನ್ನು ಪ್ರೀತಿಸುವ ಹೇಳಿಕೆಗೆ ಸಂಪೂರ್ಣ ಬೆಂಬಲ ಸೂಚಿಸಿದ ಪ್ರಮೋದ್ ಮುತಾಲಿಕ್
ಫೆ.28ರ ರಾತ್ರಿ ತಡದರು.ವಾದ ವಿವಾದವಾಯ್ತು. ಸಂಪೂರ್ಣ ಬೆಂಬಲಕ್ಕೆ ನಿಂತವರಿಗೆ, ಶಾಸಕರಿಗೆ ಧನ್ಯವಾದ. ಎಂಪಿಯವರು ಕೂಡ ಡಿಸಿ, ನನ್ನ ಜೊತೆ ಮಾತಾಡಿ ಖಂಡಿಸಿದರು.ಎರಡೇ ದಿನಗಳಲ್ಲಿ ಹೈಕೋರ್ಟ್ ತಡೆಯಾಜ್ಞೆ ಬಂತು. ಪುಸ್ತಕ ಬಿಡುಗಡೆಗೆ ಹಾದಿ ಸುಗಮವಾಯ್ತು.
ಲವ್ ಜಿಹಾದ್ ಪುಸ್ತಕ ದುಡುಕುತ್ತಿರುವ ಹಿಂದೂ ಹುಡುಗಿಯರಿಗೆ ಮಾರ್ಗದರ್ಶನ, ಧೈರ್ಯ ತುಂಬಲಿದೆ. ಪೋಷಕರಲ್ಲಿ ಜಾಗೃತಿ ಮೂಡಿಸಲಿದೆ. ಜನಸಂಖ್ಯೆ ಜಾಸ್ತಿ ಮಾಡಿಕೊಳ್ಳಲು ಲವ್ ಜಿಹಾದ್ ಒಂದು ಪಾರ್ಟ್. ನಿಜವಾದ ಪ್ರೀತಿ ಇಲ್ಲ. ಬೋಗಸ್. ಬುರ್ಖಾ ಹಾಕಿಸ್ತಾರೆ, ಹೆಸರು ಬದಲಿಸ್ತಾರೆ, ಮಾಂಸ ತಿನ್ನಿಸ್ತಾರೆ. ಇಸ್ಲಾಮೀಕರಣಕ್ಕೊಂದು ಮಾರ್ಗ ಇದು. ಪ್ರೀತಿ ಅಲ್ಲ, ದಗಾ ಇದು. 82% ಈ ರೀತಿಯಲ್ಲಿ ನಡೆದಿದೆ. ಅದರ ಮಾಹಿತಿ ಪುಸ್ತಕದಲ್ಲಿದೆ.
ಹಿಂದೂ ಹೆಣ್ಣು ಮಕ್ಕಳನ್ನ ನಾವು ರಕ್ಷಣೆ ಮಾಡದಿದ್ರೆ ಮಾತ್ಯಾರು ಮಾಡಬೇಕು? ಲವ್ ಜಿಹಾದ್ 2009 ರಲ್ಲಿ ಹೆಸರಿಟ್ಟಿದ್ದೇ ನಾನು. ಅಲ್ಲಿಂದ ಅಪಮಾನ ಮಾಡ್ತಾ ಬಂದ್ರು. ಇವನಿಗೆ ಮದುವೆ ಆಗಿಲ್ಲ…ಲವ್ ಗೆ ಜಿಹಾದ್ ಸೇರಿಸಿಕೊಂಡಿದ್ದಾನೆ ಅಂದ್ರು.
ಇವತ್ತು ಎಲ್ಲರಿಗೂ ಗೊತ್ತಾಗಿದೆ. ಇಸ್ಲಾಮಿನ ಗೂಂಡಾಗಳಿಗೆ ಬುದ್ದಿ ಕಲಿಸಲು ಈ ಪುಸ್ತಕ. ಹೆಲ್ಪ್ ಲೈನ್ ಕೂಡ ತಂದಿದ್ದೇವೆ. ಮೊದಲ ವರ್ಷವೇ ಸಾವಿರಕ್ಕೂ ಹೆಚ್ಚಿನ ಕರೆಗಳು ಬಂದವು. ಒಂದು ತಂಡ ಮಾಡಿ 70% ವಾಪಸ್ ತರೆಸಿದ್ದೇವೆ.
ಇಸ್ಲಾಮಿಕ್ ಗೂಂಡಾಗಳಿಗೆ ಎಚ್ಚರಿಕೆ. ಎರಡೇ ವರ್ಷಗಳಲ್ಲಿ 13 ಲಕ್ಷ ಹುಡುಗಿಯರ ಪ್ರಕರಣ ದಾಖಲಾಗಿವೆ. ಅತ್ಯಾಚಾರ, ಕೊಲೆ ಎಲ್ಲದೂ ಸೇರಿದೆ. ನಿದ್ದೆ ಬರ್ತಿಲ್ಲ.
ಹುಬ್ಬಳ್ಳಿಯ ನೇಹಾ ಹಿರೇಮಠ್ ಭಯಾನಕ ಕೊಲೆ ಬಗ್ಗೆ ಮೂರು ತಿಂಗಳ ಸಮಯ ತೆಗೆದುಕೊಂಡ ಸಿಎಂ ಈವರೆಗೂ ಬಗೆಹರಿಸಿಲ್ಲ. ತ್ವರಿತ ನ್ಯಾಯಾಲಯ ಈವರೆಗೆ ಮಾಡಿಲ್ಲ. ಮುಸ್ಲೀಮರ ಪರ ಸರ್ಕಾರ, ಹಿಂದೂ ವಿರೋಧಿ ಸರ್ಕಾರ. ಓಟಿಗಾಗಿ ಮುಸ್ಲೀಂ ಗೂಂಡಾಗಳನ್ನು ಬೆಳೆಸ್ತಿದ್ದಾರೆ. ಪೊಲೀಸರ ಮೇಲೆ ಹಲ್ಲೆ, ಠಾಣೆ ಸುಟ್ಟವರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯುತ್ತಿದೆ ಸರ್ಕಾರ.
ನೂರು ಕಡೆಗೆ ತ್ರಿಶೂಲ ದೀಕ್ಷಾ ಕಾರ್ಯಕ್ರಮ ಮಹಿಳೆಯರು, ವಿದ್ಯಾರ್ಥಿನಿಯರ ಕೈಗಳಲ್ಲಿ ತ್ರಿಶೂಲ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಈ ಹಿಂದೆಯೂ ಮಾಡಿದ್ದೇವೆ. ವ್ಯಾನಿಟಿ ಬ್ಯಾಗಲ್ಲಿಟ್ಟುಕೊಂಡು ಓಡಾಡುತ್ತಿದ್ದಾರೆ.
ಮುತಾಲಿಕ್ ಯಾರು? ರೇಪಿಸ್ಟಾ? ದರೋಡೆಕೋರರ? ಶಿವಮೊಗ್ಗದಲ್ಲೇಕೆ ನನ್ನನ್ನು ತಡೆದಿರಿ. ನೀವೇನು ಬಾಲಬಡುಕರೇ? ಅಯೋಗ್ಯರಿದೀರಿ ನೀವು? ಯಾರದ್ದೋ ಮಾತು ಕೇಳಲು ಬಂದವರಲ್ಲ ನೀವು. ಒರಟು ವರ್ತನೆ ಬೇಸರ ತಂದಿದೆ. ನಿಮ್ಮನೆಗೂ ಹೆಣ್ಣುಮಕ್ಕಳಿದಾರೆ ಡಿಸಿ, ಎಸ್ ಪಿ ಯವರೇ, ಡಿವೈಎಸ್ ಪಿಯೊಬ್ಬರ ಮಗಳು ಓಡಿ ಹೋದಾಗ ಅವರನ್ನು ವಾಪಸ್ ಕರೆತಂದು ಒಪ್ಪಿಸಿದವರು ನಾವು.
ಶಿವಾಜಿ ಮಗನನ್ನು ಕತ್ತರಿಸಿದ ಔರಂಗಜೇಬನ ಕಟೌಟ್ ಹಾಕಿಸ್ತೀರಿ. ಸತ್ಯವನ್ನೇ ತಡೆಯಲು ಪ್ರಯತ್ನಿಸಿದ್ದೀರಿ. ಪಕ್ಷಾತೀತವಾಗಿ ಹೋರಾಟ ಮಾಡ್ತಿದ್ದೀನಿ.
ಚಕ್ರವರ್ತಿ ಸೂಲಿಬೆಲೆಯ ಅನ್ಯಧರ್ಮೀಯ ಯುವತಿಯರನ್ನು ಪ್ರೀತಿಸಿ ಅನ್ನೋ ಮಾತಿಗೆ ನನ್ನ ಸಂಪೂರ್ಣ ಬೆಂಬಲವಿದೆ.ನಾವು
ಧರ್ಮಕ್ಕೆ ಸೇರಿಸಿಕೊಳ್ಳೋ ಪ್ರಯತ್ನ ಮಾಡೋಲ್ಲ. ಕೊಲೆ ಮಾಡೋಲ್ಲ. ನಿಜವಾದ ಪ್ರೀತಿ ಇರುತ್ತೆ.
.
ಸೌಜನ್ಯ ಕೊಲೆ ಅತ್ಯಾಚಾರ ಪ್ರಕರಣದ ಆರೋಪಿಗಳು ಬಂಧನಕ್ಕೊಳಗಾಗಬೇಕು.
ಗಂಗಾಧರ ಕುಲಕರ್ಣಿ, ರಾಜ್ಯಾಧ್ಯಕ್ಷರು, ಶ್ರೀರಾಮಸೇನಾ;
ಲವ್ ಜಿಹಾದ್ ಪುಸ್ತಕ ಬಿಡುಗಡೆ ಐದನೇ ಜಿಲ್ಲೆಯಿದು. ಕೆಟ್ಟ ರೀತಿಯಲ್ಲಿ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ರನ್ನು ನಡೆಸಿಕೊಳ್ಳುತ್ತಿದೆ.
ತಾಲಿಬಾನ್ ಸರ್ಕಾರ ಇದೆಯಾ ಇಲ್ಲಿ? ಪುಸ್ತಕ ಬಿಡುಗಡೆ ಕೂಡ ಮಾಡಲಾರದ ಸ್ಥಿತಿ ಇಲ್ಲಿದೆ. ತೀರ್ಥಹಳ್ಳಿಯಲ್ಲಿ ಬಾಂಬ್ ತಯಾರಿಸೋಕೆ, ಔರಂಗಜೇಬ್ ತಲವಾರಿಗೆ ಅವಕಾಶ ಕೊಡ್ತಿದೀರಷ್ಟೇ ನೀವು.
ಮಹಿಳೆಯರ ಮೇಲಿನ ದೌರ್ಜನ್ಯ, ಅವರನ್ನು ತುಂಡು ಮಾಡಿ ಸಾಗಿಸುವ ಪ್ರಯತ್ನ ನಡೆಯುತ್ತಿದೆ. ಇಂಥದ್ದನ್ನು ಖಂಡಿಸಲು ಪ್ರಯತ್ನಿಸುವವರನ್ನು ತಡೆಗಟ್ಟಿದರೆ ಕಾನೂನು ಮುಖಾಂತರ ಉತ್ತರ, ಸಂಘಟನೆಗಳ ಮೂಲಕ ಉತ್ತರಿಸ್ತೇವೆ.
ಕೆ.ಇ.ಕಾಂತೇಶ್;
ಫೆ.28 ಕ್ಕೆ ಬಿಡುಗಡೆ ಆಗೋದಿತ್ತು ಈ ಪುಸ್ತಕ. ಅದರ ಹಿಂದಿನ ದಿನವೇ ಪ್ರಮೋದ್ ಮುತಾಲಿಕ್ ರವರಿಗೆ ಊಟಕ್ಕೂ ಅವಕಾಶ ಮಾಡಿಕೊಡದೇ ತಡೆಯಲಾಯ್ತು. ಇದಕ್ಕೆ ಧಿಕ್ಕಾರ.
ಹೆಣ್ಣುಮಕ್ಕಳ ಮೇಲೆ ಲವ್ ಜಿಹಾದ್ ಪರಿಣಾಮ ಇದೆ. ಅದನ್ನು ತಡೆಯುವ ಪ್ರಯತ್ನಕ್ಕೆ ತಡೆಯೊಡ್ಡುವುದು ಸರಿಯಲ್ಲ. ಈಗ ಬಿಡುಗಡೆ. ಹಿಂದೂ ಬಾಂಧವರಿಗೆ ಸಿಕ್ಕ ಜಯ.
ವಕೀಲರಾದ ಪವಿತ್ರ;
ಅನ್ಯಮತೀಯ ಹೆಣ್ಣು ಮಕ್ಕಳನ್ನು ಯಾಕೆ ಮದುವೆಯಾಗಬಾರದು? ಸೂಲಿಬೆಲೆ ಮಾತಿಗೆ ಬೆಂಬಲಿಸ್ತೇವೆ.
ಲವ್ ಜಿಹಾದ್ ಕೇಸುಗಳಲ್ಲಿ ಹೋದವರೂ ಬಂದಿದ್ದಾರೆ. ನಾವೂ ಕರೆ ತಂದಿದ್ದೇವೆ.
ಅನ್ಯ ಧರ್ಮೀಯ ಹೆಣ್ಣು ಮಕ್ಕಳಿಗೆ ತೊಂದರೆ ಕೊಡದ ಹಾಗೆ ಕಾಪಾಡ್ತೇವೆ.