ನರ್ಸ್ ಸ್ವಾತಿ ಹತ್ಯೆ:* *ನಯಾಜ್ ಜೊತೆ ಕೈ ಜೋಡಿಸಿದ್ದ ಹಿಂದೂ ಯುವಕರ ಬಂಧನ* *ಹಾಗಾದರೆ ಇದು ಲವ್ ಜಿಹಾದಾ?* *ಲವ್ ಜಿಹಾದಲ್ಲಿ ಹಿಂದೂ ಹುಡುಗರೂ ಪಾಲ್ಗೊಂಡರಾ?*
*ನರ್ಸ್ ಸ್ವಾತಿ ಹತ್ಯೆ:*
*ನಯಾಜ್ ಜೊತೆ ಕೈ ಜೋಡಿಸಿದ್ದ ಹಿಂದೂ ಯುವಕರ ಬಂಧನ*
*ಹಾಗಾದರೆ ಇದು ಲವ್ ಜಿಹಾದಾ?*
*ಲವ್ ಜಿಹಾದಲ್ಲಿ ಹಿಂದೂ ಹುಡುಗರೂ ಪಾಲ್ಗೊಂಡರಾ?*

ಹಾವೇರಿಯಲ್ಲಿ ನಡೆದ ಸ್ವಾತಿ ಕೊಲೆ ಪ್ರಕರಣ ಸದ್ಯ ಕರ್ನಾಟಕದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಓರ್ವ ಮುಸ್ಲಿಂ ಸೇರಿದಂತೆ ತಲೆಮರೆಸಿಕೊಂಡಿದ್ದ ಇಬ್ಬರು ಹಿಂದೂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಸ್ವಾತಿ ಹತ್ಯೆಗೆ ಲವ್ ಜಿಹಾದ್ ಕಾರಣ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸುತ್ತಿದ್ದಾರೆ. ಪೊಲೀಸರ ತನಿಖೆ ಚುರುಕಾಗಿದ್ದು, ಸದ್ಯ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಹಾವೇರಿಯ ಮಾಸೂರಿನ ಯುವತಿ ಸ್ವಾತಿ (Swati) ಲವ್ ಜಿಹಾದ್ಗೆ (Love jihad) ಬಲಿಯಾದಳಾ? ಹೀಗಂತ ಹಿಂದೂ ಪರ ಸಂಘಟನೆಗಳು ಸೇರಿದಂತೆ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಸದ್ಯ ಸ್ವಾತಿ ಹತ್ಯೆ ದೊಡ್ಡ ಸಂಚಲನ ಸೃಷ್ಟಿಸುತ್ತಲೇ ಪೊಲೀಸರ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ನಯಾಜ್ ಜೊತೆಗೆ ಕೊಲೆ ಮಾಡಿ ಬಳಿಕ ತಲೆಮರೆಸಿಕೊಂಡಿದ್ದ ಮತ್ತಿಬ್ಬರು ಹಿಂದೂ ಯುವಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲೆಯಲ್ಲಿ ನಡೆದಿರುವ ನರ್ಸ್ ಸ್ವಾತಿ ಹತ್ಯೆ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಮೊದ ಮೊದಲು ಅಪರಿಚಿತ ಶವ ಸಿಕ್ಕಿರುವುದಾಗಿ ತನಿಖೆ ಆರಂಭಿಸಿದ್ದ ಪೊಲೀಸರಿಗೆ ಅದು ಸ್ವಾಭಾವಿಕ ಸಾವಲ್ಲ. ಕೊಲೆ ಅಂತ ಗೊತ್ತಾಗುತ್ತೆ. ಯು.ಡಿ.ಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಹಲಗೇರಿ ಪೊಲೀಸ್ ಠಾಣೆ ಪೊಲೀಸರು ಒಬ್ಬ ಆರೋಪಿಯನ್ನು ಪತ್ತೆ ಮಾಡಿದ್ದರು. ನಯಾಜ್ ಎಂಬ ಮುಸ್ಲಿಂ ಯುವಕನೇ ಸ್ವಾತಿ ಹತ್ಯೆಯ ಪ್ರಮುಖ ಆರೋಪಿ.
ಸ್ವಾತಿ ಜೊತೆ ಲವ್ನಲ್ಲಿದ್ದ ಎನ್ನಲಾದ ನಯಾಜ್ ತನ್ನ ಮತ್ತಿಬ್ಬರು ಸ್ನೇಹಿತರ ಜೊತೆ ಸೇರಿ ಸ್ವಾತಿ ಕೊಲೆ ಮಾಡಿದ್ದಾನೆ. ಸದ್ಯ ನಯಾಜ್ನನ್ನು ಬಂಧಿಸಿ ತನಿಖೆ ಆರಂಭಿಸಿರುವ ಪೊಲೀಸರು, ಆತನ ಮತ್ತಿಬ್ಬರು ಸ್ನೇಹಿತರಾದ ವಿನಯ್ ಹಾಗೂ ದುರ್ಗಾಚಾರಿ ಪತ್ತೆ ಹಚ್ಚಿ ಬಂಧನ ಮಾಡುವ ಯಶಸ್ವಿಯಾಗಿದ್ದಾರೆ. ಚಿತ್ರದುರ್ಗದ ಬಳಿ ಪೊಲೀಸರು ವಿನಾಯಕ್ ಮತ್ತು ದುರ್ಗಾಚಾರಿ ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಪ್ರಕರಣ ಹೊಸ ಆಯಾಮ ಪಡೆದುಕೊಂಡಿದೆ.
*ಸ್ವಾತಿ ಹತ್ಯೆಗೆ ನಡೆದಿತ್ತು ಪ್ರೀಪ್ಲಾನ್!*
ಕಳೆದ ಮಾರ್ಚ್ 3 ರಂದು ಮೂವರು ಆರೋಪಿಗಳು ಸ್ವಾತಿ ಹತ್ಯೆ ಮಾಡಿದ್ದರು. ತಮ್ಮದೇ ಧರ್ಮದ ಯುವತಿ ಜೊತೆ ಮದುವೆಗೆ ನಯಾಜ್ ಪ್ಲಾನ್ ನಡೆಸಿದ್ದ. ಹೀಗಾಗಿ ನಯಾಜ್ಗೆ ಸ್ವಾತಿ ವಾರ್ನಿಂಗ್ ಮಾಡಿದ್ದಳು. ಪ್ರೀತಿಸಿ ಮೋಸ ಮಾಡಿದರೆ ಸುಮ್ಮನಿರಲ್ಲ ಎಂದಿದ್ದಳು. ಇದರಿಂದ ಸ್ವಾತಿ ವಿರುದ್ದ ನಯಾಜ್ ರೊಚ್ಚಿಗೆದ್ದಿದ್ದ. ಈ ಬಗ್ಗೆ ಮತ್ತಿಬ್ಬರು ಆರೋಪಿಗಳಾದ ವಿನಯ್ ಹಾಗೂ ದುರ್ಗಾಚಾರಿ ಜೊತೆಗೂ ಚರ್ಚಿಸಿದ್ದ. ಬಳಿಕ ಸದ್ದಿಲ್ಲದಂತೆ ಸ್ವಾತಿ ಕಥೆ ಮುಗಿಸಲು ಪ್ಲಾನ್ ಮಾಡಿದ್ದಾರೆ.
*ಸ್ವಾತಿಗೆ ಫೋನ್ ಮಾಡಿ ಕರೆಸಿಕೊಂಡಿದ್ದ ನಯಾಜ್*
ರಾಣೆಬೆನ್ನೂರಿನ ಸ್ವರ್ಣ ಪಾರ್ಕ್ಗೆ ಕರೆದುಕೊಂಡು ಬಂದು ಮಾತುಕತೆ ಮಾಡಿದ್ದಾರೆ. ಬಳಿಕ ವಿನಯ್ನ ಬಲೆನೋ ಕಾರಿನಲ್ಲಿ ಸ್ವಾತಿ ಕೂರಿಸಿಕೊಂಡು ರಟ್ಟಿಹಳ್ಳಿಗೆ ಕರೆದುಕೊಂಡು ಬಂದಿದ್ದಾರೆ. ರಟ್ಟಿಹಳ್ಳಿಯ ಪಾಳುಬಿದ್ದ ಶಾಲೆಯಲ್ಲಿ ಸ್ವಾತಿ ಕೊರಳಿಗೆ ಕೇಸರಿ ಬಣ್ಣದ ಟವಲ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಸ್ವಾತಿ ಮೃತದೇಹ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ತುಂಗಭದ್ರಾ ನದಿಗೆ ಎಸೆದಿದ್ದಾರೆ. ರಾಣೆಬೆನ್ನೂರು ತಾಲೂಕು ಪತ್ತೆಪುರ ಬಳಿ ತುಂಗಭದ್ರಾ ನದಿಯಲ್ಲಿ ಸ್ವಾತಿ ಮೃತದೇಹ ಪತ್ತೆಯಾಗಿತ್ತು.
*ಸ್ವಾತಿ ತಾಯಿ ಭೇಟಿಯಾಗಿ ಸಾಂತ್ವನ ಹೇಳಿದ ಬಿಸಿ ಪಾಟೀಲ್;*
ಇತ್ತ ಮಾಜಿ ಸಚಿವ ಬಿಸಿ ಪಾಟೀಲ್ ಕೂಡ ಸ್ವಾತಿ ತಾಯಿ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ ಸ್ವಾತಿ ನಿವಾಸಕ್ಕೆ ಭೇಟಿ ನೀಡಿ ಪ್ರಕರಣದ ಮಾಹಿತಿ ಪಡೆದಿದ್ದಾರೆ. ಪ್ರಕರಣದಲ್ಲಿ ಯಾರೇ ಭಾಗಿಯಾದರೂ ಬಂಧನ ಮಾಡಿ ಶಿಕ್ಷೆ ಕೊಡಿಸುವಂತೆ ಒತ್ತಾಯ ಮಾಡಿದ್ದಾರೆ.
ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ರಾಣೆಬೆನ್ನೂರಿನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಆದರೆ ಹೋರಿ ಬೆದರಿಸುವ ಸ್ಪರ್ಧೆಯ ಕ್ರೇಜ್ ಇತ್ತು. ಕೊಲೆ ಮಾಡಿದ ನಯಾಜ್, ದುರ್ಗಾಚಾರಿ, ವಿನಯ್ ಕೂಡ ಹೋರಿ ಹಬ್ಬದ ಕ್ರೇಜ್ ಇಟ್ಟುಕೊಂಡಿದ್ದರು. ಹೋರಿ ಬೆದರಿಸುವ ಸ್ಪರ್ಧೆಯೊಂದರಲ್ಲಿ ಪರಿಚಯವಾಗಿದ್ದ ಮೂವರ ಜೊತೆ ಸ್ವಾತಿ ಸ್ನೇಹ ಮಾಡಿದ್ದಳು.