ಶಿವಮೊಗ್ಗ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಯೋಗೇಶ್ ಪತ್ರಿಕಾಗೋಷ್ಠಿ ಶಾಸಕರೇ, ಶಿವಮೊಗ್ಗ ನೆಮ್ಮದಿಯಾಗಿರಲು ಬಿಡಿ ಧರ್ಮದ ಬಣ್ಣ ಕಟ್ಟಿ ಹರೀಶ್ ಪ್ರಕರಣ ಅಪಪ್ರಚಾರ ಗಾಂಜಾ ರಹಿತ ಶಿವಮೊಗ್ಗಕ್ಕೆ ಒತ್ತುಕೊಡೋಣ
ಶಿವಮೊಗ್ಗ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ
ಹೆಚ್.ಸಿ.ಯೋಗೇಶ್ ಪತ್ರಿಕಾಗೋಷ್ಠಿ
ಶಾಸಕರೇ, ಶಿವಮೊಗ್ಗ ನೆಮ್ಮದಿಯಾಗಿರಲು ಬಿಡಿ
ಧರ್ಮದ ಬಣ್ಣ ಕಟ್ಟಿ ಹರೀಶ್ ಪ್ರಕರಣ ಅಪಪ್ರಚಾರ
ಗಾಂಜಾ ರಹಿತ ಶಿವಮೊಗ್ಗಕ್ಕೆ ಒತ್ತುಕೊಡೋಣ

ಮಾರ್ನಮಿ ಬೈಲ್ ಘಟನೆ ಸಾಕಷ್ಟು ಚರ್ಚೆಯಲ್ಲಿದೆ. ಹರೀಶ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಅವರ ಮನೆಗೆ ಹೋಗಿ ಚರ್ಚೆ ಮಾಡಿದ್ದೇನೆ. ಹಲ್ಲೆ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಅವತ್ತೇ ಒತ್ತಾಯಿಸಿದ್ದೇವೆ.ಇಂಥ ಘಟನೆಗಳು ನಡೆದರೆ ಕಾರಣಕರ್ತರನ್ನು ಬಂಧಿಸಿ ಅಂತ ಒತ್ತಾಯಿಸುವುದು ನಮ್ಮ ಧರ್ಮ
ಎಲ್ಲರೂ ಸೇರಿ ಎಲ್ಲಾ ಹಬ್ಬಗಳನ್ನು ಮಾಡ್ತಾ ಬಂದಿದ್ದೇವೆ. ಶಾಸಕರು ಎಲ್ಲರಿಗೂ ಸೇರಿದವರು. ಶಾಂತರೀತಿಯಿಂದ ಶಿವಮೊಗ್ಗ ಇರಲು ಬಿಡದೇ ಧರ್ಮದ ಬಣ್ಣ ಕಟ್ಟಿ ಪ್ರಚೋದನೆ ಮಾಡಿದ್ದಾರೆ. ಕಾನೂನು ಗೆಲ್ಲಬೇಕೇ ಹೊರತು ಧರ್ಮ ಗೆಲ್ಲೋದಲ್ಲ. ಒಂದು ಕೋಮಿನ ವಿರುದ್ಧ ಅಪಪ್ರಚಾರ.
ಬಾಪೂಜಿನಗರ, ಹೊಸಮನೆ, ಆರ್ ಎಂ ಎಲ್ ನಗರದಲ್ಲಿ ವಾಸ ಮಾಡೋಕ್ಕಾಗದ ಪರಿಸ್ಥಿತಿ ಅಂತ ಶಾಸಕರು ಹೇಳುತ್ತಿದ್ದಾರೆ. ಯಾರು ಊರು ಬಿಟ್ಟು ಹೋಗ್ತಿದಾರೆ ತೋರಿಸಿ
ಒಳ್ಳೆಯ ವಾತಾವರಣ, ಒಳ್ಳೆಯ ವ್ಯವಸ್ಥೆ ಇರುವ ಶಿವಮೊಗ್ಗದಲ್ಲಿ ಶಾಂತಿ ಕದಡುವ ಕೆಲಸ ಶಾಸಕರಿಂದಲೇ ಆಗ್ತಿದೆ. ಹರೀಶ್ ಪ್ರಕರಣದಲ್ಲಿ ಬೇರೆ ಧರ್ಮದವರು ಸಿಲುಕಿರುವುದರಿಂದ ವಿಷಯಾಂತರ ಮಾಡಲಾಗುತ್ತಿದೆ. ಇದರಲ್ಲಿ ಇಬ್ಬರು ಗಾಂಜಾ ಗಿರಾಕಿಗಳಿದ್ದಾರೆ.
ಮುಸ್ಲೀಮರ ತುಷ್ಟೀಕರಣ ಏನು ಬಂತಿಲ್ಲಿ? ಎಲ್ಲರೂ ಸಮಾನರೇ ಇದ್ದೀವಿ. ವೋಟಿನ ರಾಜಕಾರಣಕ್ಕಾಗಿ ಇಂಥ ಕೆಲಸ ಮಾಡಬೇಡಿ ಶಾಸಕರೇ…ಜನರ ಸಮಸ್ಯೆಗಳು ಬಹಳ ಇವೆ. ಆ ಸಮಸ್ಯೆಗಳನ್ನು ಆಲಿಸಿ ಶಾಸಕರೇ…
ಸರ್ಕಾರ ಅಭಿವೃದ್ಧಿಗೆ 25 ಕೋಟಿ ರೂ.,ಗಳನ್ನು ಬಿಜೆಪಿ ಶಾಸಕರಿಗೂ ನೀಡಿದೆ. ಶೇಷಾದ್ರಿಪುರಂ ಫ್ಲೈವೋವರ್ ಬಳಿ ಅಪಘಾತವಾಯ್ತಲ್ಲ, ಅಲ್ಲಿ ಹೋಗಿ ಭೇಟಿ ನೀಡಿದ್ರಾ? ಯಾರ ತಪ್ಪೆಂದು ಚರ್ಚಿಸಿದ್ರಾ? ಅನ್ಯ ಧರ್ಮದವರು ಸತ್ತರೆಂದು ಮೌನವೇ? ಪೇಸ್ ಕಾಲೇಜಿನ ಅನುಕೂಲಕ್ಕಾಗಿ ಫ್ಲೈವೋವರ್ ಓಡಾಟ ಆರಂಭಿಸಿ ಅನಾಹುತಕ್ಕೆ ಕಾರಣರಾದ್ರಿ…
ಅಭಿವೃದ್ಧಿಗಾಗಿ ಎಲ್ಲರೂ ಒಂದಾಗೋಣ. ಹರೀಶ್ ಚಿಕಿತ್ಸೆಗೆ ನಾನೂ ವಿಶೇಷವಾಗಿ ಸ್ಪಂದಿಸಿದ್ದೇನೆ. ಕಾಂಗ್ರೆಸ್ ಧರ್ಮ ರಾಜಕಾರಣ ಮಾಡಿಲ್ಲ. ಇಂಥ ಘಟನೆಗಳಾದಾಗ ಬಿಜೆಪಿ ಮತ್ತು ರಾಷ್ಟ್ರ ಭಕ್ತರ ಬಳಗ ಟಾಂ ಟಾಂ ಹೊಡೆದುಕೊಂಡು ಹೋಗುವುದನ್ನು ಕೈಬಿಡಿ.
ನಾನೊಬ್ಬ ಪ್ರಜೆಯಾಗಿ ನಮ್ಮ ಶಾಸಕರ ಗುಣ ತಿದ್ದುವ ಜವಾಬ್ದಾರಿ ನನ್ನದು.ಜವಾಬ್ದಾರಿ ನಿಭಾಯಿಸಲು ಮುಂದಾಗಿ.
ಶಿವಮೊಗ್ಗಕ್ಕೆ ಬರುವವರಿಗೆ ಧೈರ್ಯ ಕೊಡಿ ಶಾಸಕರೇ…


