ಎರಡು ಮನೆ ಕಳ್ಳತನ- ಮೂವರು ಕಳ್ಳರು- 6.52 ಲಕ್ಷದ ಬೆಳ್ಳಿ ಬಂಗಾರದ ಮಾಲು ವಶಕ್ಕೆ ಪಡೆದ ಮಾಳೂರು ಪೊಲೀಸರು…* *ಶಿವಮೊಗ್ಗ ಗೋಪಾಳದ ಅಬ್ದುಲ್ ಶಫೀಖ್- ಸೂಳೆಬೈಲಿನ ಖಲೀಲ್ ಖಾನ್- ಜೆಪಿ ನಗರದ ಸೈಯದ್ ಜಾವೀದ್ @ ಶೋಯೇಬ್ ಬಂಧಿತ ಕಳ್ಳರು…* *ಏನಿದು ಪ್ರಕರಣ? ಪೊಲೀಸ್ ಪ್ರಕಟಣೆಯಲ್ಲಿದೆ ಸಂಪೂರ್ಣ ವಿವರ*

*ಎರಡು ಮನೆ ಕಳ್ಳತನ- ಮೂವರು ಕಳ್ಳರು- 6.52 ಲಕ್ಷದ ಬೆಳ್ಳಿ ಬಂಗಾರದ ಮಾಲು ವಶಕ್ಕೆ ಪಡೆದ ಮಾಳೂರು ಪೊಲೀಸರು…*

*ಶಿವಮೊಗ್ಗ ಗೋಪಾಳದ ಅಬ್ದುಲ್ ಶಫೀಖ್- ಸೂಳೆಬೈಲಿನ ಖಲೀಲ್ ಖಾನ್- ಜೆಪಿ ನಗರದ ಸೈಯದ್ ಜಾವೀದ್ @ ಶೋಯೇಬ್ ಬಂಧಿತ ಕಳ್ಳರು…*

*ಏನಿದು ಪ್ರಕರಣ? ಪೊಲೀಸ್ ಪ್ರಕಟಣೆಯಲ್ಲಿದೆ ಸಂಪೂರ್ಣ ವಿವರ*

ಮನೆ ಹೆಂಚು ತೆಗೆದು ಬೀರುವಿನಲ್ಲಿಟ್ಟಿದ್ದ ಲಕ್ಷಾಂತರ ₹ ಗಳ ಮೌಲ್ಯದ ಬೆಳ್ಳಿ, ಬಂಗಾರ, ನಗದನ್ನು ದೋಚಿ ಪರಾರಿಯಾಗಿದ್ದ ಮೂವರು ಶಿವಮೊಗ್ಗದ ಕಳ್ಳರನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕಿನ ಕಳಸಗುಂಡಿ ಗ್ರಾಮದ ಉಮೇಶ್ ಮನೆಗೆ ಬೀಗ ಹಾಕಿಕೊಂಡು ಹೊರ ಹೋಗಿದ್ದಾಗ ಕಳೆದ ಜನವರಿ 20 ರಂದು ಈ ಕಳ್ಳತನವಾಗಿತ್ತು.

ಈ ಕಳ್ಳತನ ಮಾಡಿದ್ದ ಶಿವಮೊಗ್ಗ ಗೋಪಾಳ ಶ್ರೀರಾಮನಗರದ ಅಬ್ದುಲ್ ಶಫೀಖ್, ಸೂಳೆಬೈಲಿನ ಖಲೀಲ್ ಖಾನ್, ಜೆಪಿ ನಗರದ ಸೈಯದ್ ಜಾವೀದ್ @ ಶೋಯೇಬ್ ನನ್ನು ಮಾ.13 ರಂದು ಬಂಧಿಸಲಾಗಿದೆ.

*ಏನಿದು ಪ್ರಕರಣ? ಪೊಲೀಸ್ ಪ್ರಕಟಣೆಯಲ್ಲಿದೆ ಸಂಪೂರ್ಣ ವಿವರ*

ದಿನಾಂಕಃ 20-01-2025 ರಂದು * ಉಮೇಶ್, 38 ವರ್ಷ, ಕಳಸಗುಂಡಿ ಗ್ರಾಮ* ತೀರ್ಥಹಳ್ಳಿ ತಾಲ್ಲೂಕು ರವರು *ಕೆಲಸದ ಮೇಲೆ ಬೇರೆ ಊರಿಗೆ* ಹೋಗಿದ್ದು, ಅವರ ತಂದೆ *ಮನೆಗೆ ಬೀಗ ಹಾಕಿಕೊಂಡು ತೋಟಕ್ಕೆ ಹೋಗಿ* ಸಂಜೆ ವಾಪಾಸ್ ಬಂದು ನೋಡಿದಾಗ, *ಯಾರೋ ಕಳ್ಳರು ಮನೆಯ ಹೆಂಚು ತೆಗೆದು* ಒಳಗೆ ಬಂದು, ಬೀರುವಿನಲ್ಲಿ ಇಟ್ಟಿದ್ದ *ಅಂದಾಜು ಮೌಲ್ಯ 4,93,000/- ರೂಗಳ ಬೆಳ್ಳಿ ಹಾಗೂ ಬಂಗಾರದ ಆಭರಣಗಳು ಮತ್ತು ನಗದು ಹಣವನ್ನು* ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು, ನೀಡಿದ ದೂರಿನ ಮೇರೆಗೆ *ಮಾಳೂರು ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0009/2025 ಕಲಂ 305, 331(3) ಬಿ ಎನ್ ಎಸ್ ಕಾಯ್ದೆ* ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ * ಮಿಥುನ್ ಕುಮಾರ್, ಐಪಿಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, * ಅನಿಲ್ ಕುಮಾರ್ ಭೂಮರಡ್ಡಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 1 ಶಿವಮೊಗ್ಗ ಜಿಲ್ಲೆ, * ಕಾರಿಯಪ್ಪ ಎ.ಜಿ.* ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 2 ಶಿವಮೊಗ್ಗ ಜಿಲ್ಲೆ, ರವರ ಮಾರ್ಗದರ್ಶನದಲ್ಲಿ, * ಅರವಿಂದ್ ಎನ್ ಕಲಗುಚ್ಚಿ* ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, * ಶ್ರೀಧರ್* ಪೊಲೀಸ್ ವೃತ್ತ ನಿರೀಕ್ಷಕರು ಮಾಳೂರು ವೃತ್ತ ರವರ ನೇತೃತ್ವದಲ್ಲಿ, * ಕುಮಾರ್ ಕುರಗುಂದ* ಪಿಎಸ್ಐ, ಮಾಳೂರು ಪೊಲೀಸ್ ಠಾಣೆ * ಶಿವಾನಂದ ಧರೇನವರ್,* ಪಿಎಸ್ಐ ಮಾಳೂರು ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ *ಹೆಚ್. ಸಿ* ಸುರಕ್ಷಿತ್, ಮೋಹನ್, ಮೇಘರಾಜ್, ಮಂಜುನಾಥ, ಲೊಕೇಶ್, *ಸಿಪಿಸಿ* ಸಂತೋಷ್ ಕುಮಾರ್, ರಮೇಶನಾಯ್ಕ, ವಿವೇಕ, ಪುನೀತ್ ಕುಮಾರ್, ವಿನಯ್ ಕುಮಾರ್, ಅರವಿಂದ, ಚೇತನ್ ಕುಮಾರ್ ಅಭಿಲಾಷ್, ಮಂಜಾನಾಯ್ಕ, ಪ್ರವೀಣ್ ಕುಮಾರ್ ಮತ್ತು ಪ್ರಸನ್ನ ರವರನ್ನೊಳಗೊಂಡ *ತನಿಖಾ ತಂಡವನ್ನು* ರಚಿಸಲಾಗಿರುತ್ತದೆ.

ಈ ತನಿಖಾ ತಂಡವು ದಿನಾಂಕಃ 13-03-2025 ರಂದು ಪ್ರಕರಣದ ಆರೋಪಿತರಾದ *1) ಅಬ್ದುಲ್ ಶಫೀಕ್* ಅಬ್ದುಲ್ ರಶೀದ್, 21 ವರ್ಷ, ಶ್ರೀರಾಮನಗರ, ಗೋಪಾಳ, ಶಿವಮೊಗ್ಗ. *2) ಖಲೀಲ್ ಖಾನ್* 24 ವರ್ಷ, ಸೂಳೆಬೈಲ್ ಶಿವಮೊಗ್ಗ ಟೌನ್ ಮತ್ತು *3) ಸೈಯದ್ ಜಾವೀದ್ @ ಶೋಯೆಬ್,* 23 ವರ್ಷ, ಜೆ.ಪಿ. ನಗರ, ಶಿವಮೊಗ್ಗ ಟೌನ್ ಇವರುಗಳನ್ನು ದಸ್ತಗಿರಿ ಮಾಡಿ ಸದರಿ ಆರೋಪಿತರಿಂದ ಮೇಲ್ಕಂಡ ಪ್ರರಕಣವೂ ಸೇರಿದಂತೆ, *ಮಾಳೂರು ಪೊಲೀಸ್ ಠಾಣೆಯಲ್ಲಿ 2025ನೇ ಸಾಲಿನಲ್ಲಿ ವರದಿಯಾದ 2 ಮನೆಗಳ್ಳತನ* ಪ್ರಕರಣಗಳಿಗೆ ಸಂಬಂಧಿಸಿದ *ಅಂದಾಜು ಮೌಲ್ಯ 80,000/- ರೂಗಳ ಸುಜುಕಿ ಆಕ್ಸೆಸ್ ಸ್ಕೂಟರ್, ಅಂದಾಜು ಮೌಲ್ಯ 5,50,000/- ರೂಗಳ 72 ಗ್ರಾಂ ತೂಕದ ಬಂಗಾರದ ಆಭರಣಗಳು, ಅಂದಾಜು ಮೌಲ್ಯ 22,000/- ರೂಗಳ 265 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಸೇರಿ ಒಟ್ಟು 6,52,000/- ರೂಪಾಯಿಯ ಬೆಳ್ಳಿ, ಬಂಗಾರದ ಆಭರಣಗಳು ಮತ್ತು ದ್ವಿ ಚಕ್ರ ವಾಹನವನ್ನು ಅಮಾನತ್ತು* ಪಡಿಸಿಕೊಂಡು, ಆರೋಪಿತರನ್ನು *ಘನ ನ್ಯಾಯಾಲಯಕ್ಕೆ ಹಾಜರ್ ಪಡಿಸಿ,* ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಈ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು *ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು* ಪ್ರಶಂಸಿಸಿ ಅಭಿನಂದಿಸಿರುತ್ತಾರೆ.