19 ನೇ ತಾರೀಖು; ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬರ್ತಿದ್ದಾರೆ!* *ತುಂಬು ಹೃದಯದಿಂದ ಸ್ವಾಗತಿಸೋಣ*

*19 ನೇ ತಾರೀಖು; ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬರ್ತಿದ್ದಾರೆ!*

*ತುಂಬು ಹೃದಯದಿಂದ ಸ್ವಾಗತಿಸೋಣ*

ಕಳೆದ ವರ್ಷ ಜೂನ್‌ ಐದರಂದು ಅಂತಾರಾಷ್ಟ್ರೀಯ ಸ್ಪೇಸ್‌ ಸ್ಟೇಶನ್‌ಗೆ ಪರೀಕ್ಷಾರ್ಥವಾಗಿ ಹೋದ ಸುನೀತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್ಮೋರ್ ಅಲ್ಲಿರಬೇಕಾಗಿದ್ದದ್ದು ಒಂದು ವಾರ ಮಾತ್ರ.

ಆದರೆ ತಾಂತ್ರಿಕ ಕಾರಣಗಳಿಂದಾಗಿ ಉಳಿದದ್ದು ಬರೋಬ್ಬರಿ ಒಂಬತ್ತು ತಿಂಗಳು!

ಬೆಂಗಳೂರಿಗೋ ಅಥವಾ ಯಾವುದೋ ಊರಿಗೋ ಕಾರ್ಯನಿಮಿತ್ತ ಹೋದರೆ ಒಂದು ದಿನ ಹೆಚ್ಚಾದರೆ ಜೀವ ಹೋದಂತೆ ಆಡುವ ನಮ್ಮಂಥವರಿಗೆ ಸುನೀತಾ ವಿಲಿಯಮ್ಸ್‌ ಅವರ ಸಾಧನೆ ಮತ್ತಷ್ಟು ವಿಶೇಷವಾಗಿ ಕಾಣುತ್ತದೆ. ಅದೂ ಆಕೆ ಉಳಿದದ್ದು ಎಲ್ಲಿ? ಬಾಹ್ಯಾಕಾಶದಲ್ಲಿ!

ಗುರುತ್ವಾಕರ್ಷಣೆ ಇಲ್ಲದೇ ತೇಲುತ್ತ ಊಟ ತಿಂಡಿ ಶೌಚ ಎಲ್ಲವನ್ನೂ ಕಷ್ಟಪಟ್ಟೇ ಮಾಡಬೇಕಾದ ಸನ್ನಿವೇಶದಲ್ಲಿ!

ಆದರೂ ಅಲ್ಲಿಯೇ ಟ್ರೆಡ್‌ ಮಿಲ್‌ ನಲ್ಲಿ ಕಷ್ಟಪಟ್ಟು ನಡೆಯುತ್ತ, ವೇಟ್‌ ಲಿಫ್ಟಿಂಗ್‌ ಮುಂತಾದ ವರ್ಕೌಟ್‌ ಮಾಡುತ್ತ ಆರೋಗ್ಯ ಕಾಪಾಡಿಕೊಳ್ಳಬೇಕು. ಬದುಕು ಸವಾಲಿನದ್ದು ಅಲ್ಲಿ. ಅಷ್ಟೇ ಅಲ್ಲ, ಇಷ್ಟು ಸಮಯ ಬಾಹ್ಯಾಕಾಶದಲ್ಲಿದ್ದು ಭೂಮಿಗೆ ಬಂದ ಮೇಲೆ ನಾನು ನಡೆಯುವುದನ್ನು ರೂಢಿ ಮಾಡಿಕೊಳ್ಳಬೇಕಿದೆ ಎಂದು ಸುನೀತಾ ಹೇಳಿದ್ದರು.

ಇಷ್ಟು ತಿಂಗಳುಗಳಲ್ಲಿ ಸುನೀತಾ ಮತ್ತು ಬುಚ್‌ ಅವರ ಮರಳುವಿಕೆಯ ಕುರಿತಂತೆ ಆತಂಕ ಎಲ್ಲೆಡೆ ವ್ಯಕ್ತವಾಗುತ್ತಿತ್ತು.

ಆದರೆ ಇದೀಗ ಸ್ಪೇಸ್‌ ಎಕ್ಸ್‌ನ ಆಕಾಶ ನೌಕೆಯೊಂದು ಇದೀಗ ಸ್ಪೇಸ್‌ ಸ್ಟೇಶನ್‌ನಲ್ಲಿ ಹೋಗಿ ನಿಂತಿದೆ. ಕೆಲ ಗಗನ ಯಾನಿಗಳೂ ಹೋಗಿದ್ದಾರೆ. ನಾಡಿದ್ದು ಅಂದರೆ ಹತ್ತೊಂಬತ್ತನೇ ತಾರೀಕು ಇಬ್ಬರೂ ಸುರಕ್ಷಿತವಾಗಿ ಭೂಮಿಗೆ ವಾಪಾಸಾಗಲಿದ್ದಾರೆ ಎಂಬ ಸುದ್ದಿ ಕೇಳಿ ಮನಸ್ಸಿಗೆ ಎಷ್ಟೋ ಸಮಾಧಾನವಾಯಿತು.

ಕಾರಣ ರೈತರ, ಸೈನಿಕರ ಋಣದಂತೆ ವಿಜ್ಞಾನಿಗಳ ಋಣವೂ ದೊಡ್ಡದು. ವಿಜ್ಞಾನಿಗಳು ಇಲ್ಲದಿದ್ದರೆ ಬರೆಯುತ್ತಿರುವ ನಾನೂ ಓದುತ್ತಿರುವ ನೀವೂ ಇರುತ್ತಿದ್ದೆವೆಂದು ಹೇಳಲು ಸಾಧ್ಯವಿಲ್ಲ. ನಿಜಕ್ಕೂ ಬೇರೆಯವರಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುವ ಇಂತಹ ವ್ಯಕ್ತಿಗಳಿಗೆ ಮನದುಂಬಿ ನಮಸ್ಕಾರಗಳು.

PC: Google
#ದೀಪಾಹಿರೇಗುತ್ತಿ