ಶೋಭಾ ಮಳವಳ್ಳಿ ಟಿಪ್ಪಣಿ; ಸುನೀತಾ ವಿಲಿಯಮ್ಸ್, ಬಾಹ್ಯಾಕಾಶದ   ಒಂಭತ್ತು ತಿಂಗಳ‌ ಗರ್ಭ!

ಶೋಭಾ ಮಳವಳ್ಳಿ ಟಿಪ್ಪಣಿ;

ಸುನೀತಾ ವಿಲಿಯಮ್ಸ್, ಬಾಹ್ಯಾಕಾಶದ   ಒಂಭತ್ತು ತಿಂಗಳ‌ ಗರ್ಭ!

2024, ಜೂನ್ 5 ರಿಂದ 2025 ಮಾರ್ಚ್ 19.. ಬರೋಬ್ಬರಿ 9 ತಿಂಗಳು. ತಾಯಿಯ ಗರ್ಭದಿಂದ ಹೊರಬಂದ ಮಗುವಿನಂತಿದ್ದರು ಸುನಿತಾ ವಿಲಿಯಮ್ಸ್. ಮಗು ಭೂಮಿಗೆ ಕಾಲಿಡುತ್ತಿದ್ದಂತೆ ಅಳುತ್ತದೆ, ಸುನಿತಾ ನಗುನಗುತ್ತಾ ಬಂದರು. ಅವರಿಗಿದು ಮರುಹುಟ್ಟು. ಅಕ್ಷರಶಃ ಅವರಿಗೀಗ ಮಗುವಿನಂತೆ ಚಿಕಿತ್ಸೆ. ಬಾಹ್ಯಾಕಾಶದಲ್ಲಿ ಕಾಲ್ನಡಿಗೆಯನ್ನೇ ಮರೆತ ಸುನಿತಾ, ಮಗು, ಪುಟ್ಟ ಪುಟ್ಟ ಹೆಜ್ಜೆ ಇಡುವಂತೆ ಇಡಬೇಕು. (ಬೇಬಿ ಫುಟ್) ಅವರ ಹಿಮ್ಮಡಿ ಅಷ್ಟು ಸೆನ್ಸಿಟಿವ್ ಆಗಿರುತ್ತದೆ. ಅವರ ದೇಹವೂ ಭೂಮಿಗೆ ಹೊಂದಿಕೊಳ್ಳಬೇಕು.
ಬಾಹ್ಯಾಕಾಶದಲ್ಲಿ ಒಂಬತ್ತು ತಿಂಗಳು ಜೀವಿಸಿ ಇಡೀ ಮಾನವ‌ಕುಲವನ್ನೇ ಅಚ್ಚರಿಗೊಳಿಸಿ, ವಿಜ್ಞಾನಕ್ಕೆ ಸವಾಲಾಗಿ ಗೆದ್ದು ಬಂದ ಸುನೀತಾ, ಈ ಜನರೇಷಿನ ಮಕ್ಕಳಲ್ಲಿ ಬಾಹ್ಯಾಕಾಶ ಜಗತ್ತಿನ ಕುತೂಹಲ ಹೆಚ್ಚಿಸಿದ್ದಾರೆ. ಹಿರಿಯರ ಪಾಲಿಗೆ ಬೆರಗು. ಹಿಂದೆಂದೂ ನಾಸಾ, ಬಾಹ್ಯಾಕಾಶದ ಬಗ್ಗೆ ಚರ್ಚೆಯಾಗಲಿ, ಕುತೂಹಲವಾಗಲಿ ಹುಟ್ಟಿರಲಿಲ್ಲ. ಪ್ರತಿ ಮನೆಯಲ್ಲೂ ಸುನಿತಾ ಬಗ್ಗ ಮಾತು. ಸುನಿತಾ‌ ವಿಲಿಯಮ್ಸ್ ಬದುಕಿ ಬರುವರೇ ಎಂಬ ಕುತೂಹಲ. ಬದುಕಿ ಬರಲೆಂಬ ಹಾರೈಕೆ, ವಿಜ್ಞಾನಕ್ಕೆ ಸವಾಲಿನ ಜತೆ ನಂಬಿಕೆ.
ಬಾಹ್ಯಾಕಾಶದಿಂದ ಭೂಮಿಗೆ ಕಾಲಿಟ್ಟ ಮಗುವಿನಂತ ಸುನಿತಾ, ಸಾಮಾನ್ಯ ಜನರ ಪಾಲಿಗೆ ಅಚ್ಚರಿಯ ಆಕಾಶಕಾಯ ❤
ಅವರ ಮುಖದಲ್ಲಿ ಬಾಹ್ಯಾಕಾಶ ಗೆದ್ದ ಸಂಭ್ರಮ. ನಮಗೋ ಮತ್ತೆ ಮತ್ತೆ ಆಕಾಶದತ್ತ ಕಣ್ಣು ಹಾಯಿಸಿ,‌ ಹೋಗಿ ಬರೋಣವೇ ಎನ್ನುವಷ್ಟು ಆಸೆ ಹುಟ್ಟಿಸಿದ್ದಾರೆ ಸುನಿತಾ ❤

#ಶೋಭಾ ಮಳವಳ್ಳಿ