ಮಧುಗಿರಿ ಮಂತ್ರಿ ಮತ್ತು ಆ ಮಧುಬಾಲೆ! ಅವಳು ಶಿವಮೊಗ್ಗ ಮೂಲದವಳಾ?!* *‘ಮಧು’ಜಾಲದ ಸತ್ಯ ಸಮಾಧಿಯಾಗುತ್ತಾ?*

*ಮಧುಗಿರಿ ಮಂತ್ರಿ ಮತ್ತು ಆ ಮಧುಬಾಲೆ!

ಅವಳು ಶಿವಮೊಗ್ಗ ಮೂಲದವಳಾ?!*

*‘ಮಧು’ಜಾಲದ ಸತ್ಯ ಸಮಾಧಿಯಾಗುತ್ತಾ?*

ಹನಿಟ್ರ್ಯಾಪ್ ಪ್ರಕರಣದಲ್ಲಿ ದಿನಕ್ಕೊಂದು ತಿರುವುಗಳು ಸಂಭವಿಸುತ್ತಿವೆ. ಮಧುಗಿರಿ ಮಂತ್ರಿ ಬರೆದ ದೂರಿನ ಹಿಂದೆ ನೂರಾರು ಅನುಮಾನಗಳಿವೆ. ತನಿಖೆ ನಡೆದರೆ ಕಾಂಗ್ರೆಸ್‌ನಲ್ಲಿ ಭೂಕಂಪ ಏಳುತ್ತಾ?

ಬ್ಲೂ ಜೀನ್ಸ್ ಹುಡುಗಿ, ಬೇರೆ ಬೇರೆ ಹುಡುಗಿಯರು, ಹೈಕೋರ್ಟ್​ ವಕೀಲೆ ಎಂದು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್​ ಮಾಡಲು ಯತ್ನಿಸಿದ ಬಗ್ಗೆ ಸಚಿವ ಕೆಎನ್​ ರಾಜಣ್ಣ ಮಾಹಿತಿ ಬಹಿರಂಗಪಡಿಸಿದ್ದಾರೆ.​ ತಮ್ಮನ್ನು ಹನಿಟ್ರ್ಯಾಪ್​ ಬಲೆಗೆ ಬೀಳಿಸಲು ಬಂದ ತಂಡದ ಚಹರೆ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. 2 ಬಾರಿ ಕಾಮ ಖೆಡ್ಡಾಗೆ ಬೀಳಿಸಲು ಯತ್ನಿಸಿರುವ ಬಗ್ಗೆ ಅವರು ನೀಡಿದ ಮಾಹಿತಿ ನೀಡಿದ್ದಾರೆ.

ಹನಿಟ್ರ್ಯಾಪ್​ ಯತ್ನಕ್ಕೆ ಬಂದ ವೇಳೆ, ಬೆಂಗಳೂರಿನ ಮನೆಯಲ್ಲಿ ಸಿಸಿಟಿವಿ ಇರಲಿಲ್ಲ ಎಂದು ರಾಜಣ್ಣ ಹೇಳಿದ್ದಾರೆ. ಸಿಸಿಟಿವಿ ಇದ್ದಿದ್ರೆ ಯಾರು ಎಂಬುದು ಈಗ ಗೊತ್ತಾಗುತ್ತಿತ್ತು ಎಂದಿದ್ದಾರೆ.

ಈ ಮಧ್ಯೆ ಶಿವಮೊಗ್ಗದ ರಾಜಕೀಯ ಪಾಳಯದಲ್ಲಿರುವ ಕರಿಕೋಟಿನ ಮಹಿಳೆಯ ಹೆಸರನ್ನು ಕೆಲವರು ಹರಿಯಬಿಟ್ಟಿದ್ದು, ರಾಜಣ್ಣನ ಹನಿಟ್ರ್ಯಾಪ್ ಮಹಿಳೆ ಬಗ್ಗೆ ಸೂಕ್ತ ತನಿಖೆ ನಡೆದರಷ್ಟೇ ಆಕೆ ಶಿವಮೊಗ್ಗದವಳಾ? ಅಥವಾ ಯಾರೆಂಬುದು ಬಹಿರಂಗವಾಗುತ್ತೆ. ಇಲ್ಲದಿದ್ದರೆ ಸಮಾಧಿ ಸ್ಥಿತಿ ಇದ್ದಿದ್ದೇ.