ಹಸುಗಳ ಮಾರಣಾಂತಿಕ ಸಾವು- ಸ್ಥಳಕ್ಕೆ ಶಾಸಕ ಚನ್ನಿ ಭೇಟಿ
ಹಸುಗಳ ಮಾರಣಾಂತಿಕ ಸಾವು- ಸ್ಥಳಕ್ಕೆ ಶಾಸಕ ಚನ್ನಿ ಭೇಟಿ
ಇಂದು ಬೆಳಿಗ್ಗೆ ಪಿಎನ್‌ಟಿ ಕಾಲೋನಿಯ ಹಳೆ ರೈಲ್ವೆ ಗೇಟ್ ಬಳಿ ಹಸುಗಳ ಮಾರಣಾಂತಿಕ ಸಾವಿಗೆ ಕಾರಣವಾದ ಸ್ಥಳಕ್ಕೆ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಮಹಾನಗರ ಪಾಲಿಕೆ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆಯ ವೇಳೆ ಘಟನೆಗೆ ಕಾರಣವಾದ ಅಸುರಕ್ಷಿತ ಪರಿಸ್ಥಿತಿಗಳು ಹಾಗೂ ತೊಂದರೆಗಳನ್ನು ಗುರುತಿಸಿ, ಅವುಗಳನ್ನು ತಕ್ಷಣ ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸ್ಥಳದಲ್ಲಿರುವ ರೈಲ್ವೆ ಕ್ರಾಸಿಂಗ್‌ನಲ್ಲಿ ಸುರಕ್ಷತೆ ಹೆಚ್ಚಿಸುವ ಸಲುವಾಗಿ ಅಗತ್ಯ ಎಚ್ಚರಿಕಾ ಸಂಕೇತಗಳು, ಬ್ಯಾರಿಕೇಡ್‌ಗಳು ಹಾಗೂ ಬೆಳಕಿನ ವ್ಯವಸ್ಥೆ ಸುಧಾರಣೆಗೊಳಿಸುವಂತೆ ಸೂಚಿಸಲಾಯಿತು.
ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಪುನರಾವೃತ್ತಿಯಾಗದಂತೆ ನಿರಂತರ ನಿಗಾ ಮತ್ತು ತಪಾಸಣೆ ನಡೆಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು, ವಾರ್ಡ್ ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.