ಶಿವಮೊಗ್ಗ ಸ್ಮಾರ್ಟ್ ಸಿಟಿ, ಕಡತಗಳು, ಎಂ.ಡಿ.ಕವಿತಾ ಯೋಗಪ್ಪನವರ್ ಮತ್ತು ಕಣ್ಮರೆಯಾಗಿದ್ದ ಚೀಫ್ ಇಂಜಿನಿಯರ್ ವಿಜಯ ಕುಮಾರ್!*

*ಶಿವಮೊಗ್ಗ ಸ್ಮಾರ್ಟ್ ಸಿಟಿ, ಕಡತಗಳು, ಎಂ.ಡಿ.ಕವಿತಾ ಯೋಗಪ್ಪನವರ್ ಮತ್ತು ಕಣ್ಮರೆಯಾಗಿದ್ದ ಚೀಫ್ ಇಂಜಿನಿಯರ್ ವಿಜಯ ಕುಮಾರ್!*

ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಓರ್ವ  ಚೀಫ್ ಇಂಜಿನಿಯರ್ ಕೃಷ್ಣಪ್ಪ ಗುತ್ತಿಗೆದಾರನಿಂದ ಲಂಚ ಪಡೆದು ಜೈಲುಪಾಲು ಆಗಿದ್ದ ಸಮಯದಲ್ಲಿ “ನಾನು ವೃತ್ತಿ ಅನುಭವದಲ್ಲಿ ಹಿರಿಯ ಅಧಿಕಾರಿಯಾಗಿದ್ದು ನನಗೆ ಚೀಫ್ ಇಂಜಿನಿಯರ್ ಹುದ್ದೆ ಕೊಡಲಿಲ್ಲ” ಎಂದು ಅಸಮಾಧಾನಗೊಂಡು ಕಣ್ಮರೆಯಾಗಿದ್ದ  ಮತ್ತೋರ್ವ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿಜಯಕುಮಾರ್ ಕಾಣಿಸಿಕೊಂಡಿದ್ದಾರೆ!

ಸುಮಾರು ದಿನಗಳಿಂದ  ಕಚೇರಿಯ ಲ್ಯಾಪ್ಟಾಪ್, ಹಾರ್ಡ್ ಡಿಸ್ಕ್,  ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ನಾಪತ್ತೆಯಾಗಿದ್ದ ಬಗ್ಗೆ ಮಾಜಿ ನಗರ ಸಭಾ ಸದಸ್ಯ ಎನ್. ಕೆ. ಶ್ಯಾಮಸುಂದರ್ ಹೇಳಿಕೆ ನೀಡಿದ್ದರು.

ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರೂ ಆಗಿರುವ ಸ್ಮಾರ್ಟ್ ಸಿಟಿ ಎಂ ಡಿ. ಶ್ರೀಮತಿ ಕವಿತಾ ಯೋಗಪ್ಪನವರ್ ,  ಆ  ನಾಪತ್ತೆಯಾಗಿದ್ದ ನಿವೃತ್ತ ಅಧಿಕಾರಿಗೆ  ಆ ದಾಖಲೆಗಳನ್ನು ಮರಳಿಸುವಂತೆ ಹಲವು ಬಾರಿ ದೂರವಾಣಿ ಕರೆ ಮಾಡಿದ್ದರು ಎಂಬ ಮಾಹಿತಿಯೂ ಇದೆ.

ಮೊನ್ನೆ  ದಿವಸ ಸ್ಮಾರ್ಟ್ ಸಿಟಿ ಕಚೇರಿಗೆ ಬಂದು ಮತ್ತೋರ್ವ ನಿವೃತ್ತ ಅಧಿಕಾರಿ ಬ್ರೆಜಿಟ್ ವರ್ಗೀಸ್  ರವರ ಕೈಗೆ ಕೊಟ್ಟು ಹೋಗಿದ್ದಾರೆಂಬ ಮಾಹಿತಿ ಮೂಲಗಳಿಂದ  ಬಂದಿದೆ.

ಸ್ಮಾರ್ಟ್ ಸಿಟಿ ಯೋಜನೆಯ ಸ್ಥಿತಿ ಎಲ್ಲಿಗೆ ಬಂದಿದೆ?