ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ನಿವಾಸಕ್ಕೆ ಭೇಟಿ ಮಾಡಿ ಸಂತಾಪ ಸೂಚಿಸಿದ ಸಂಸದ ಬಿ.ವೈ.ಆರ್- ಶಾಸಕ ಚನ್ನಿ*

*ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ನಿವಾಸಕ್ಕೆ ಭೇಟಿ ಮಾಡಿ ಸಂತಾಪ ಸೂಚಿಸಿದ ಸಂಸದ ಬಿ.ವೈ.ಆರ್- ಶಾಸಕ ಚನ್ನಿ*

ಜಮ್ಮು ಮತ್ತು ಕಾಶ್ಮೀರದ ಫಹಲ್ಗಾಂ ನಲ್ಲಿ ಇಂದು ನಡೆದ ಭೀಕರ ಭಯೋತ್ಪಾದಕರ ದಾಳಿಯಲ್ಲಿ ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗದ ವಿಜಯನಗರ ನಿವಾಸಿ ಮಂಜುನಾಥ್ ಅವರು ಗುಂಡೇಟಿಗೆ ಬಲಿಯಾದ ವಿಷಯ ತೀವ್ರ ವಿಷಾದನೀಯ ಹಾಗೂ ದುಃಖಕರ ಎಂದು ಸಂಸದ ಬಿ.ವೈ.ರಾಘವೇಂದ್ರ ಸಂತಾಪ ಸೂಚಿಸಿದರು.

ವಿಷಯ ತಿಳಿದ ಮರುಕ್ಷಣ ಮೃತ ಮಂಜುನಾಥ್ ಅವರ ನಿವಾಸಕ್ಕೆ ತೆರಳಿ ಅವರ ಕುಟುಂಬ ವರ್ಗದವರಿಗೆ ಹಾಗೂ ಸಂಬಂಧಿಕರಿಗೆ ಸಾಂತ್ವನ ಹೇಳಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಧೈರ್ಯದ ಮಾತುಗಳನ್ನು ಅವರು ತುಂಬಿದರು.

ಈಗಾಗಲೇ ಕೇಂದ್ರ ಸರ್ಕಾರ ಈ ಹೀನ ಕೃತ್ಯ ಎಸಗಿದ ಭಯೋತ್ಪಾದಕರ ತಂಡದ ಎಡೆಮುರಿ ಕಟ್ಟಲು, ದಾಳಿ ಮಾಡಿದ ಉಗ್ರ ಸಂಘಟನೆಯ ಸದ್ದಡಗಿಸಲು, ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಲು ಯುದ್ಧೋಪಾದಿಯಲ್ಲಿ ಕ್ರಮಕ್ಕೆ ಮುಂದಾಗಿದೆ ಎಂದರು.

ಇಂತಹ ಉಗ್ರ ದಾಳಿಯನ್ನು ತೀವ್ರವಾಗಿ ಖಂಡಿಸುತ್ತಾ, ಉಗ್ರ ದಾಳಿಗೆ ತನ್ನ ಅಮೂಲ್ಯ ಪ್ರಾಣ ಬಿಟ್ಟ ಮಂಜುನಾಥ್ ಅವರ ಅತ್ಮಕ್ಕೆ ಸದ್ಗತಿ ಕೊರುತ್ತಾ, ಅವರ ಕುಟುಂಬ ವರ್ಗದವರಿಗೆ ಹಾಗೂ ಸಂಬಂಧಿಕರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಎಸ್ ಎನ್ ಚನ್ನಬಸಪ್ಪ ಉಪಸ್ಥಿತರಿದ್ದರು.