ಜೋಗಿ ಬರೆದಿದ್ದು; ಭಯೋತ್ಪಾದಕತೆ ಒಂದು ದೇಶವನ್ನೇ ಸ್ಮಶಾನ ಮಾಡುವುದು ಹೀಗೆ…

ಜೋಗಿ ಬರೆದಿದ್ದು; ಭಯೋತ್ಪಾದಕತೆ ಒಂದು ದೇಶವನ್ನೇ ಸ್ಮಶಾನ ಮಾಡುವುದು ಹೀಗೆ…

ನಾನು ಎರಡು ಸಲ ಕಾಶ್ಮೀರಕ್ಕೆ ಹೋಗಿದ್ದೇನೆ. ಒಮ್ಮೆ ನಾನು, ಉದಯ ಮರಕಿಣಿ, ಲಿಂಗದೇವರು, ಪಿ ಶೇಷಾದ್ರಿ ಸೇರಿದಂತೆ ಹನ್ನೆರಡು ಮಂದಿ. ಇನ್ನೊಮ್ಮೆ ನಾವು ಮೂವರು. 2024ರ ಡಿಸೆಂಬರ್ ಪ್ರವಾಸದಲ್ಲಿ ನಾವು ಖರ್ಚು ಮಾಡಿದ್ದು ತಲಾ 60000 ರೂಪಾಯಿ.
ಕಾಶ್ಮೀರಕ್ಕೆ ವರ್ಷಕ್ಕೆ ಎರಡು ಕೋಟಿ ಪ್ರವಾಸಿಗರು ಹೋಗುತ್ತಾರೆ. 2023ರ ಲೆಕ್ಕಾಚಾರ 2.08 ಕೋಟಿ. ಒಬ್ಬರ ವೆಚ್ಚ 40000 ಅಂತ ಇಟ್ಟುಕೊಂಡರೂ 80 ಸಾವಿರ ಕೋಟಿ ಪ್ರವಾಸದಿಂದ ಆದಾಯ.
ಕಾಶ್ಮೀರದ ಜನಸಂಖ್ಯೆ ಅಂದಾಜು 1.38 ಕೋಟಿ. ಈ ಪೈಕಿ 1.15 ಕೋಟಿ ಮುಸ್ಲಿಮರು. ಕಾಶ್ಮೀರದ ತಲಾ ಆದಾಯದ ಮೂರನೇ ಒಂದು ಭಾಗ ಪ್ರವಾಸದಿಂದ ಬರುತ್ತದೆ.
ಈಗ ಭಯೋತ್ಪಾದಕರ ದಾಳಿಯಿಂದ ಇನ್ನೆರಡು ವರ್ಷ ಆಯಾ ಕಡೆ ಪ್ರವಾಸಿಗರು ತಲೆ ಹಾಕುವುದಿಲ್ಲ. ಅಲ್ಲಿಗೆ ಎರಡು ವರ್ಷ ಅಲ್ಲಿ ಬರಗಾಲ.
ಸುಂದರ ಪ್ರದೇಶ. ಒಳ್ಳೆಯ ಜನ. ಅಂಥವರ ನಡುವೆ ಒಬ್ಬ ಟೆರರಿಸ್ಟ್ ಹುಟ್ಟಿಕೊಂಡರೆ ಇಡೀ ದೇಶ ಸರ್ವನಾಶ.
ಅಂಥವರನ್ನು ಒಳಗೆ ಇರುವ ಜನರೇ ತನ್ನವರು ಅಂತ ನೋಡದೆ ಗುಂಡಿಕ್ಕಿ ಕೊಲ್ಲುವ ತನಕ ಅಲ್ಲಿ ಬದುಕುವ ಮಂದಿಗೆ ನೆಮ್ಮದಿಯಿಲ್ಲ. ಅಲ್ಲಿಗೆ ಹೋಗುವ ಮಂದಿಗೆ ಅಭಯ ಇಲ್ಲ.

ಭಯೋತ್ಪಾದಕತೆ ಒಂದು ದೇಶವನ್ನೇ ಸ್ಮಶಾನ ಮಾಡುವುದು ಹೀಗೆ.