ಸುನ್ನಿ ಮರ್ಕಜಾ ಜಾಮಿಯಾ ಮಸೀದಿ ಕಮಿಟಿಯ ಮೂಲಕ ಶಿವಮೊಗ್ಗ ಮುಸ್ಲೀಮರ ಪ್ರತಿಭಟನೆ…* *ಭಯೋತ್ಪಾದಕರಿಗೆ ಧರ್ಮವಿಲ್ಲ-ಅವರನ್ನು ಗಲ್ಲಿಗೇರಿಸಿ- ಹುತಾತ್ಮ ಮಂಜುನಾಥ್ ಅಮರ್ ರಹೇ…*

*ಸುನ್ನಿ ಮರ್ಕಜಾ ಜಾಮಿಯಾ ಮಸೀದಿ ಕಮಿಟಿಯ ಮೂಲಕ ಶಿವಮೊಗ್ಗ ಮುಸ್ಲೀಮರ ಪ್ರತಿಭಟನೆ…*

*ಭಯೋತ್ಪಾದಕರಿಗೆ ಧರ್ಮವಿಲ್ಲ-ಅವರನ್ನು ಗಲ್ಲಿಗೇರಿಸಿ- ಹುತಾತ್ಮ ಮಂಜುನಾಥ್ ಅಮರ್ ರಹೇ…*

– ಹೀಗೆಂದು ಹೇಳಿ ಮನೆ ಮಗನನ್ನು ಉಗ್ರರು ಕೊಂದು ಹಾಕಿದ್ದಾರೆಂದು ಆಕ್ರೋಶ ತೋರಿಸುತ್ತಾ ಎರಡು ನಿಮಿಷದ ಮೌನ ಆಚರಿಸಿದರು ಮುಸ್ಲೀಮರು.

ಶಿವಮೊಗ್ಗದ ಉದ್ಯಮಿ ಮಂಜುನಾಥ್ ಸೇರಿದಂತೆ ಹಲವರನ್ನು ಉಗ್ರರು ಪಹಲ್ಗಾವ್ ನಲ್ಲಿ ಪ್ರವಾಸಕ್ಕೆಂದು ಹೋದಾಗ ಕೊಂದು ಹಾಕಿದ್ದಾರೆ. ಕೊಂದವರು ಉಗ್ರರೇ ಹೊರತು ಮುಸ್ಲೀಮರಲ್ಲ. ಉಗ್ರರಿಗೆ ಯಾವುದೇ ಧರ್ಮವಿಲ್ಲ. ಅವರನ್ನು ಗಲ್ಲಿಗೇರಿಸಿ ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ನೀಡಿದ ಪ್ರತಿಭಟನಾ ಮನವಿ ಪತ್ರದಲ್ಲಿ ಒತ್ತಾಯಿಸಿದರು.

ಮಂಜುನಾಥ್ ನಮ್ಮ ಮನೆ‌ಮಗ. ಅಂಥ ಅಮಾಯಕರನ್ನು ಉಗ್ರರು ಕೊಂದಿದ್ದಾರೆ. ಇಸ್ಲಾಂ ಇಂಥ ಉಗ್ರರನ್ನು ಯಾವತ್ತಿಗೂ ಬೆಂಬಲಿಸಿಲ್ಲ. ಈ ಮನುಷ್ಯ ವಿರೋಧಿ ಉಗ್ರರನ್ನು ಕೂಡಲೇ ಹಿಡಿದು ಗಲ್ಲಿಗೇರಿಸಿ ಎಂದು ಒತ್ತಾಯಿಸಿದರು.

ಈ ಪ್ರತಿಭಟನೆಯ ನೇತೃತ್ವವನ್ನು ಮಸೀದಿ ಕಮಿಟಿ ಅಧ್ಯಕ್ಷ ಶೇಖ್ ಮುನಾವರ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಷ, ಮುಫ್ತಿ ಗುಲಾಂ ಬರ್ಕಾತಿ, ಮೌಲಾನಾ ಹಬೀಬ್ ಸಹಾಬಿ, ಆಸೀಫ್, ಅನ್ಸರ್ ಪಾಷ, ಹುಸೈನ್, ಶಫಿ, ಅಶ್ರಫ್ ಮೌಲಾನಾ, ಸಾಖ್ಲೀನ್, ಲಾಯರ್ ನಯಾಝ್, ನಿಹಾಲ್, ರಹೀಂ ಸೇರಿದಂತೆ ಹಲವರಿದ್ದರು.