ಅಖಿಲ ಕುಂಚಿಟಿಗರ ಮಹಾಮಂಡಲದ ಅಧ್ಯಕ್ಷ ಹೆಚ್.ರಂಗ ಹನುಮಯ್ಯ ಪತ್ರಿಕಾಗೋಷ್ಠಿ* *ಕುಂಚಿಟಿಗ ಜನಾಂಗದ ತಪ್ಪು ಜನಗಣತಿ- ಕೂಡಲೇ ಸರಿಪಡಿಸಿ* *ಕೇಂದ್ರದ ಜಾತಿ ಜನಗಣತಿಯಲ್ಲಿ ಆಧಾರ್ ಲಿಂಕ್ ಕಡ್ಡಾಯ ಮಾಡಿ ಗ್ರಾಮಪಂಚಾಯತ್ ವಾರು ಕೆಲಸ ಮಾಡಿದರೆ ಎಲ್ಲದೂ ಪಕ್ಕಾ ಲೆಕ್ಕ ಸಿಗಲಿದೆ – ಜಿಲ್ಲಾಧ್ಯಕ್ಷರಾದ ಕಾಂತರಾಜ್ ಸೋಮಿನಕೊಪ್ಪ*
*ಅಖಿಲ ಕುಂಚಿಟಿಗರ ಮಹಾಮಂಡಲದ ಅಧ್ಯಕ್ಷ ಹೆಚ್.ರಂಗ ಹನುಮಯ್ಯ ಪತ್ರಿಕಾಗೋಷ್ಠಿ*
*ಕುಂಚಿಟಿಗ ಜನಾಂಗದ ತಪ್ಪು ಜನಗಣತಿ- ಕೂಡಲೇ ಸರಿಪಡಿಸಿ*
*ಕೇಂದ್ರದ ಜಾತಿ ಜನಗಣತಿಯಲ್ಲಿ ಆಧಾರ್ ಲಿಂಕ್ ಕಡ್ಡಾಯ ಮಾಡಿ ಗ್ರಾಮಪಂಚಾಯತ್ ವಾರು ಕೆಲಸ ಮಾಡಿದರೆ ಎಲ್ಲದೂ ಪಕ್ಕಾ ಲೆಕ್ಕ ಸಿಗಲಿದೆ – ಜಿಲ್ಲಾಧ್ಯಕ್ಷರಾದ ಕಾಂತರಾಜ್ ಸೋಮಿನಕೊಪ್ಪ*
ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿರುವ ಕಾಂತರಾಜ್ ಜನಗಣತಿ ವರದಿಯಲ್ಲಿ ಕುಂಚಿಟಿಗ ಜನಾಂಗಕ್ಕೆ ಆಗಿರುವ ತಪ್ಪು ಜನಗಣತಿಯನ್ನು ಸರಿಪಡಿಸಿ ಆಯೋಗದಿಂದ ಮತ್ತೆ ಜನಗಣತಿ ಮಾಡಿಸಿ ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ನಲ್ಲಿ ಅನುಮೋದನೆ ಮಾಡಬೇಕೆಂದು ಅಖಿಲ ಕುಂಚಿಟಿಗರ ಮಹಾಮಂಡಲದ ಅಧ್ಯಕ್ಷ ಹೆಚ್.ರಂಗ ಹನುಮಯ್ಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
1921 ರಲ್ಲಿ ನೆಡೆದ ಜಾತಿ ಗಣತಿಯ ಪ್ರಕಾರ ಹಿಂದಿನ ಮೈಸೂರು ಮಹಾರಾಜರ ಸರ್ಕಾರ 17.08.1928 ರಲ್ಲಿಯೇ ಕುಂಚಿಟಿಗ ಜಾತಿಯು ಒಕ್ಕಲಿಗರ ಉಪಜಾತಿ ಪಂಗಡಕ್ಕೆ ಸೇರುವುದಿಲ್ಲ. ಕುಂಚಿಟಿಗ ಜಾತಿ ಪ್ರತ್ಯೇಕ ಸ್ವಂತತ್ರ ಜಾತಿ ಎಂದು ಆದೇಶ ಮಾಡಿದ್ದು ಇಂದಿಗೂ ಚಾಲ್ತಿಯಲ್ಲಿದೆ ಎಂದರು.
ಆದರೆ, ಕಾಂತರಾಜ್ ಜಾತಿ ಗಣತಿ ಸಂದರ್ಭದಲ್ಲಿ ಕುಂಚಿಟಿಗರು ಜಾತಿ ಕಾಲಂನಲ್ಲಿ ಒಕ್ಕಲಿಗ ಮತ್ತು ಉಪಜಾತಿ ಕಾಲಂನಲ್ಲಿ ಕುಂಚಿಟಿಗ ಎಂದು ಬರೆಯಿಸಿ ಕುಂಚಿಟಿಗರನ್ನು ಒಕ್ಕಲಿಗರನ್ನಾಗಿ ಮಾಡಿದ್ದಾರೆ. ಮೈಸೂರಿನ ರಾವ್ ಬಹದ್ದೂರ್ ಡಿ. ಬನುಮಯ್ಯನವರು 1920-21 ರ ಜನಗಣತಿಯಲ್ಲಿ ಮೈಸೂರು ಮಹಾರಾಜರಿಗೆ ಮನವಿ ಮಾಡಿ ಕುಂಚಿಟಿಗ ಹಿಂದೂ ಧರ್ಮದಲ್ಲಿ ಒಂದು ಸ್ವತಂತ್ರ ಜಾತಿ ಎಂದು ಬರೆಸಿ ಜಾತಿ ಗಣತಿ ಮಾಡಿದ್ದಾರೆ. ಕುಂಚಿಟಿಗರೇ 28 ಲಕ್ಷ ಜನ ಇದ್ದೀವಿ ಎಂದು ಅಖಿಲ ಕುಂಚಿಟಿಗರ ಮಹಾಮಂಡಲದ ಅಧ್ಯಕ್ಷರಾದ ಹೆಚ್.ರಂಗ ಹನುಮಯ್ಯ ಹೇಳಿದರು.
ಸುಳ್ಳು ಅಂಕೆಸಂಖ್ಯೆ ಓಡಾಡುತ್ತಿದೆ. ಕೇಂದ್ರದ ಜಾತಿ ಜನಗಣತಿಯಲ್ಲಿ ಆಧಾರ್ ಲಿಂಕ್ ಕಡ್ಡಾಯ ಮಾಡಿ ಗ್ರಾಮಪಂಚಾಯತ್ ವಾರು ಕೆಲಸ ಮಾಡಿದರೆ ಎಲ್ಲದೂ ಪಕ್ಕಾ ಲೆಕ್ಕ ಸಿಗಲಿದೆ ಎಂದು ಜಿಲ್ಲಾಧ್ಯಕ್ಷರಾದ ಕಾಂತರಾಜ್ ಸೋಮಿನಕೊಪ್ಪ ಹೇಳಿದರು.
*ಪ್ರಸ್ತುತ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿರುವ ಹಿಂದುಳಿದ ವರ್ಗಗಳ ಕಾಂತರಾಜ್ ಅಯೋಗದ ವರದಿಯಲ್ಲಿ ಪ್ರವರ್ಗ 3-ಎ ನಲ್ಲಿ ಬರುವ ಕುಂಚಿಟಿಗ ಒಕ್ಕಲಿಗರು 41,188 ಹಾಗೂ ಕುಂಚಿಟಿಗರು 1,95,499 = ಒಟ್ಟು 2,36,687 ಜನಸಂಖ್ಯೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ರವರ ನೇತೃತ್ವದ ಆಯೋಗವು ಶಿಫಾರಸ್ಸು ಮಾಡುವುದರ ಮುಖೇನ ರಾಜ್ಯ ಸರ್ಕಾರದ ಜಾತಿಗಣತಿ -ವರದಿಯನ್ನು ಬಿಡುಗಡೆ ಮಾಡಲಾಗಿರುವುದು ಕಂಡುಬಂದಿರುತ್ತದೆ.
ಈ ಜಾತಿಗಣತಿ ವರದಿಯು ಅಕ್ಷರಶಹಃ ಸತ್ಯಕ್ಕೆ ದೂರವಾದುದು. ಏಕೆಂದರೆ ಜಾತಿಗಣತಿಯನ್ನು ಮಾಡಲು ನಮ್ಮ ಸಮಾಜದ ಮನೆಗಳಿಗೆ ಯಾರು ಬಂದಿರುವುದಿಲ್ಲ. ಇದು ತಪ್ಪು ಜಾತಿಗಣತಿ ವರದಿಯಾಗಿದೆ ಎಂದು ಕುಂಚಿಟಿಗರು ಸಂದೇಶದ ಮೂಲಕ ಮತ್ತು ಕರೆಮಾಡುವುದರ ಮೂಲಕ ಮಾಹಿತಿ ಕೊಟ್ಟಿರುತ್ತಾರೆ.
ಕುಂಚಿಟಿಗ ಜಾತಿಯನ್ನು ಭಾರತ ಸರ್ಕಾರದ ಮೀಸಲಾತಿ ಪಟ್ಟಿಯಲ್ಲಿ ಸೇರಿಸುವ ಸಲುವಾಗಿ ಘನತೆವೆತ್ತ ತಮ್ಮ ರಾಜ್ಯ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ಕುಂಚಿಟಿಗ ಜಾತಿ ಎಂದೇ ಅನುಮೋದಿಸಿ, ಶಿಫಾರಸ್ಸು ಮಾಡಿ ಕೇಂದ್ರ ಸರ್ಕಾರಕ್ಕೆ ದಿನಾಂಕ 30.10.2023 ರಂದು ಈಗಾಗಲೇ ಸಲ್ಲಿಸಿರುವುದು ತಮ್ಮ ಗಮನದಲ್ಲಿದೆ ಎಂದು ಭಾವಿಸುತ್ತೇನೆ. ಕರ್ನಾಟಕ ರಾಜ್ಯದ 18 ಜಿಲ್ಲೆ 46 ತಾಲ್ಲೋಕುಗಳಲ್ಲಿ ವಾಸಿಸುವ ಸುಮಾರು 28 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ನಮ್ಮ ಕುಂಚಿಟಿಗರು ಕುಂಚವಕ್ಕಲ್, ಕಾಮಾಟಿ, ನಾಮಧಾರಿ, ಲಿಂಗಾಯತ ಕುಂಚಿಟಿಗ, ಕುಂಚಿಟಿಗ ವಕ್ಕಲಿಗ, ಲಿಗ, ಕುರುಚಿಯನ್, ಕುಂಜಿಡಿಗರ್, ಗೌಂಡರ್ ಹೀಗೆ ಬರೆಯಿಸಿದವರೆಲ್ಲರೂ ಕುಂಚಿಟಿಗ ಜಾತಿಗೆ ಸೇರಿದವರು.
ಕರ್ನಾಟಕ ರಾಜ್ಯ ಸರ್ಕಾರವು ಜಾತಿ ಜನಗಣತಿ ವರದಿಯಲ್ಲಿ ಕುಂಚವಕ್ಕಲ್, ಕಾಮಾಟಿ, ನಾಮಧಾರಿ, ಲಿಂಗಾಯತ ಕುಂಚಿಟಿಗ, ಕುಂಚಿಟಿಗ ವಕ್ಕಲಿಗ, ಕುರುಚಿಯನ್, ಕುಂಜಿಡಿಗರ್, ಗೌಂಡರ್ ಹೆಸರಿನ ಜಾತಿಗಳನ್ನು ಕುಂಚಿಟಿಗ ಜಾತಿಗೆ ಕ್ರೋಢೀಕರಿಸಿ ವರದಿ ಬಿಡುಗಡೆ ಮಾಡಬೇಕಾರಿರುತ್ತದೆ ಎಂದು ತಮ್ಮಲ್ಲಿ ಮನವಿಮಾಡುತ್ತಿದ್ದೇವೆ.
ಕರ್ನಾಟಕ ರಾಜ್ಯದಲ್ಲಿ ಕುಂಚಿಟಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸಮಾಡುತ್ತಿರುವ ಜಿಲ್ಲೆಗಳ ವಿವರಗಳು ಕೆಳಕಂಡತಿರುತ್ತವೆ.
ಜಿಲ್ಲೆಗಳ ವಿವರ
ಒಟ್ಟು ಜನ ಸಂಖ್ಯೆ.
1) ಬೆಂಗಳೂರು ನಗರ ಜಿಲ್ಲೆ,
4.00 ಲಕ್ಷಗಳು
2) ಬೆಂಗಳೂರು ಗ್ರಾಮಾಂತರ ಜಿಲ್ಲೆ
5.00 ಲಕ್ಷಗಳು
3) ತುಮಕೂರು ಜಿಲ್ಲೆ
4.50 ಲಕ್ಷಗಳು
4) ಚಿತ್ರದುರ್ಗ ಜಿಲ್ಲೆ
3.00 ಲಕ್ಷಗಳು
5) ಮೈಸೂರು ಜಿಲ್ಲೆ
1.50 ಲಕ್ಷಗಳು
6) ಶಿವಮೊಗ್ಗ ಜಿಲ್ಲೆ
0.50 ಲಕ್ಷಗಳು
7) ಹಾವೇರಿ ಜಿಲ್ಲೆ
25,000
8) ಚಿಕ್ಕಬಳ್ಳಾಪುರ ಜಿಲ್ಲೆ
25 ಸಾವಿರಗಳು
9) ರಾಮನಗರ ಜಿಲ್ಲೆ
15 ಸಾವಿರಗಳು
10) ಮಂಡ್ಯ ಜಿಲ್ಲೆ
1.50 ಲಕ್ಷಗಳು
11) ಕೊಡಗು ಜಿಲ್ಲೆ
15 ಸಾವಿರಗಳು
12) ಹಾಸನ ಜಿಲ್ಲೆ
20 ಸಾವಿರಗಳು
13) ಚಿಕ್ಕಮಗಳೂರು ಜಿಲ್ಲೆ
1.25 ಲಕ್ಷ
14) ಉತ್ತರ ಕನ್ನಡ ಜಿಲ್ಲೆ
2.00 ಲಕ್ಷಗಳು
15) ಚಾಮರಾಜನಗರ ಜಿಲ್ಲೆ
1.25 ಲಕ್ಷಗಳು
16) ಬಳ್ಳಾರಿ ಜಿಲ್ಲೆ
25 ಸಾವಿರಗಳು
17) ದಾವಣಗೆರೆ ಜಿಲ್ಲೆ
1.25ಲಕ್ಷ
18) ಕೋಲಾರ ಜಿಲ್ಲೆ
50,000
19) ಕಾರವಾರ ಜಿಲ್ಲೆ
30 ಸಾವಿರಗಳು
ಈ ಎಲ್ಲ ಜಿಲ್ಲೆಗಳಲ್ಲಿ ಒಟ್ಟು ಸುಮಾರು 28 ಲಕ್ಷದಷ್ಟು ಜನ ಕುಂಚಿಟಿಗರು ವಾಸಿಸುತ್ತಿರುತ್ತಾರೆ. ಕರ್ನಾಟಕ ರಾಜ್ಯದಲ್ಲಿರುವ ಕುಂಚಿಟಿಗ ಸಮುದಾಯವು ದಾಯವು ರಾಜ್ಯದ ಅತ್ಯಂತ ದೊಡ್ಡ ಸಮುದಾಯಗಳಲ್ಲಿ ಒಂದು ಎಂದು ಈ ಮೇಲಿನ ಅಂಕಿ ಸಂಖ್ಯೆಗಳ ಮೂಲಕ ತಮ್ಮ ದಯಾಪರ ಗಮನಕ್ಕೆ ತರಬಯಸುತ್ತೇವೆ
ಈ ಅಂಕಿ ಸಂಖ್ಯೆಗಳನ್ನು ಕರ್ನಾಟಕ ರಾಜ್ಯದಲ್ಲಿರುವ ನೊಂದಾಯಿತ ಕುಂಚಿಟಿಗ ಸಂಘಗಳಿಂದ ಮತ್ತು ಕುಂಚಿಟಿಗ ಗ್ರಾಮ ಪಂಚಾಯತಿ ಪದಾಧಿಕಾರಿಗಳು ಮತ್ತು ಸದಸ್ಯರಿಂದ ಬಂದಿರುವ ಕುಂಚಿಟಿಗ ಜನಾಂಗದ ನಿಖರವಾದ ಮಾಹಿತಿಯಾಗಿರುತ್ತದೆ. ಇನ್ನೂ ತಾವು ಗ್ರಾಮ ಪಂಚಾಯಿತಿಗಳ ಮೂಲಕ ಜನಗಣತಿ ಮಾಡಿಸಿದರೆ ಈ ಸಂಖ್ಯೆ ಇನ್ನು ಹೆಚ್ಚಾಗುವ ಸಾದ್ಯತೆಯಿರುತ್ತದೆ ಎಂದರು.