ಮೈಕ್ರೋ ಫೈನಾನ್ಸ್ ಸಿಬ್ಬಂದಿಯಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ- ಬಂಧಿಸಿದ ಪೊಲೀಸರು

ಮೈಕ್ರೋ ಫೈನಾನ್ಸ್ ಸಿಬ್ಬಂದಿಯಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ- ಬಂಧಿಸಿದ ಪೊಲೀಸರು

ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಪಡೆಯುವ ಮಹಿಳೆಯರೇ ಎಚ್ಚರ.!

ಸಾಲದ ಕಿರುಕುಳ ಅಷ್ಟೇ ಅಲ್ಲಾ ಲೈಂಗಿಕ ಕಿರುಕುಳ ನೀಡ್ತಿದ್ದಾರೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ.
ಸಾಲ ವಸೂಲಾತಿ ನೆಪದಲ್ಲಿ ನಿಮ್ಮ ಮನೆಯ ಹೆಣ್ಣು ಮಕ್ಕಳ ಮೇಲೆ ಎರಗುತ್ತಾರೆ ದೂತರು.

ಮೈಕ್ರೋ ಫೈನಾನ್ಸ್ ಗಳಲ್ಲಿದ್ದಾರೆ ರೇಪಿಸ್ಟ್ ಗಳು…
ತುಮಕೂರಿನಲ್ಲಿ ಸಾಲ ವಸೂಲಾತಿ ನೆಪದಲ್ಲಿ ಮನೆಗೆ ನುಗ್ಗಿ ಬಾಲಕಿ ಮೇಲೆ ಎರಗಿದ ಮೈಕ್ರೋ ಫೈನಾನ್ಸ್ ಸಿಬ್ಬಂದಿ.
ತುಮಕೂರು‌ ಜಿಲ್ಲೆಯ ಚಿಕ್ಕನಾಯಕನಹಳ್ಳಿ ಹಂದನಕೆರೆಯಲ್ಲಿ ನಡೆದಿದೆ ಭಯಾನಕ ಘಟನೆ.

17 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪಾಪಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ.

ಐಐಎಫ್ ಎಲ್ ಕಂಪನಿಯ ಸಮಸ್ತ ಹೆಸರಿನ‌ ಮೈಕ್ರೋ ಫೈನಾನ್ಸ್ ಸಿಬ್ಬಂದಿ.

ಸಮಸ್ತ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರಣ್ (24)ಎಂಬಾತನಿಂದ ಪೈಶಾಚಿಕ ಕೃತ್ಯ.

ಏಪ್ರಿಲ್ 24 ,ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ.

ಸಾಲ ವಸೂಲಿಗೆ ಹೋದ ವೇಳೆ ಬಾಲಕಿ ಒಬ್ಬಳೆ ಮನೆಯಲ್ಲಿ ಇದ್ದದ್ದನ್ನ ಕಂಡು ಅತ್ಯಾಚಾರಕ್ಕೆ ಯತ್ನ.

ಅತ್ಯಾಚಾರಕ್ಕೆ ಸ್ಪಂದಿಸದೆ ಕಿರುಚಾಡಿದ ಬಾಲಕಿ ಮೇಲೆ ಮಾರಣಾಂತಿಕ ಹಲ್ಲೆ.

ಬಾಲಕಿಯ ಕುತ್ತಿಗೆ ಬುಜ ಸೇರಿದಂತೆ ವಿವಿಧ ಕಡೆ ಗಾಯಗೊಳಿಸಿರುವ ಕೀಚಕ.

ಆರೋಪಿಯನ್ನ ಬಂದಿಸಿ ಎಡೆಮುರಿ ಕಟ್ಟಿ ಜೈಲಿಗಟ್ಟಿರುವ ಪೊಲೀಸರು.

ಎರಡೇ ದಿನದಲ್ಲಿ ಆರೋಪಿಯನ್ನ ಪತ್ತೆ ಹಚ್ಚಿ ಬಂದಿಸಿದ ಹಂದನಕೆರೆ ಪೊಲೀಸರು.

ಹಂದನಕರೆ‌ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ದ ಪೋಕ್ಸೋ ಪ್ರಕರಣ ದಾಖಲು.