ಕುವೆಂಪು ವಿಶ್ವವಿದ್ಯಾಲಯ : ರಾಷ್ಟ್ರೀಯ ಸೇವಾ ಯೋಜನೆ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಮೇ 3 ರಿಂದ ಪ್ರಾರಂಭ

ಕುವೆಂಪು ವಿಶ್ವವಿದ್ಯಾಲಯ : ರಾಷ್ಟ್ರೀಯ ಸೇವಾ ಯೋಜನೆ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಮೇ 3 ರಿಂದ ಪ್ರಾರಂಭ

ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ ರಾಷ್ಟ್ರೀಯ ಭಾವೈಕ್ಯತಾ ಶಿಬಿರವು ಮೇ 3ರಿಂದ ಪ್ರಾರಂಭಗೊಳ್ಳಲಿದೆ. ಮೇ 9ರವರೆಗೆ ನಡೆಯುವ ಏಳು ದಿನಗಳ ಈ ಶಿಬಿರದಲ್ಲಿಒಟ್ಟು ಆರು ರಾಜ್ಯಗಳಿಂದ ಸುಮಾರು ವಿದ್ಯಾರ್ಥಿ 150 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಕರ್ನಾಟಕವೂ ಸೇರಿದಂತೆ ಪಾಂಡಿಚೇರಿ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ದ ವಿಶ್ವವಿದ್ಯಾಲಯಗಳಿಂದ ಎನ್ಎಸ್ಎಸ್ ಸ್ವಯಂಸೇವಕರುಕಾರ್ಯಕ್ರಮಾಧಿಕಾರಿಗಳು ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ‘ವಿಕಸಿತ ಭಾರತಕ್ಕಾಗಿ ಯುವ ಜನತೆ’ ಎನ್ನುವ ವಿಶೇಷವಾದ ಕಲ್ಪನೆಯಲ್ಲಿ ರೂಪಿಸಲ್ಪಟ್ಟ ಈ ಶಿಬಿರವನ್ನು ಶಿವಮೊಗ್ಗದ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ ಶರತ್ ಅನಂತಮೂರ್ತಿಯವರು ನಿರ್ವಹಿಸಲಿದ್ದಾರೆ. ಭದ್ರಾವತಿಯ ಶಾಸಕರಾದ ಶ್ರೀ ಬಿ.ಕೆ ಸಂಗಮೇಶ್, ರಾಜ್ಯ ಎನ್.ಎಸ್.ಎಸ್ ಅಧಿಕಾರಿಗಳಾದ ಶ್ರೀ ಪ್ರತಾಪ್ ಲಿಂಗಯ್ಯ, ಎನ್.ಎಸ್.ಎಸ್ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಕೆ. ಕಾರ್ತಿಕೇಯನ್, ಕುಲಸಚಿವರಾದ ಶ್ರೀಎ.ಎಲ್. ಮಂಜುನಾಥ, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎಸ್.ಎಂ. ಗೋಪಿನಾಥ್, ಹಣಕಾಸು ಅಧಿಕಾರಿಗಳಾದ ಡಾ. ಎಚ್. ಎನ್.ರಮೇಶ್ ಮೊದಲಾದವರು ಭಾಗವಹಿಸಲಿದ್ದಾರೆ. ಏಳು ದಿನಗಳ ಈ ಶಿಬಿರದಲ್ಲಿ ವಿವಿಧ ವಿಷಯಗಳ ಮೇಲೆ ವಿಶೇಷ ಉಪನ್ಯಾಸವು ನಡೆಯಲಿದ್ದು ಉಪನ್ಯಾಸಕರಾಗಿ ಡಾ. ವಿ. ಎಲ್. ಎಸ್. ಕುಮಾರ್, ದೀಕ್ಷಾ ನಾಯಕ್, ಡಾ. ಶ್ರೀಪತಿ, ಶರ್ಮಿಳಾ ರಾಮಕುಮಾರ್, ಅಮ್ಮ ರಾಮಚಂದ್ರ ಮೈಸೂರು ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ. ವೈವಿಧ್ಯಮಯ ಸಂಸ್ಕೃತಿ ಕ್ರಿಯಾಶೀಲತೆಯನ್ನು ಬೆಂಬಿಸಲಿರುವ ಈ ರಾಷ್ಟ್ರೀಯ ಭಾವೈಕ್ಯತಾ ಶಿಬಿರವು ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ನಡಯಲಿದೆ ಎಂದು ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ. ಶುಭಾ ಮರವಂತೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.