ಇಲ್ಲಿರೋ ಚಿತ್ರಗಳಲ್ಲಿ ಒಂದು ಎಲೆ ಆಯ್ಕೆ ಮಾಡಿ* *ನಿಮ್ಮ ವ್ಯಕ್ತಿತ್ವ ಹೇಗಿದೆ ನೋಡಿಕೊಳ್ಳಿ!*

*ಇಲ್ಲಿರೋ ಚಿತ್ರಗಳಲ್ಲಿ ಒಂದು ಎಲೆ ಆಯ್ಕೆ ಮಾಡಿ*

*ನಿಮ್ಮ ವ್ಯಕ್ತಿತ್ವ ಹೇಗಿದೆ ನೋಡಿಕೊಳ್ಳಿ!*

ಸಾಮಾನ್ಯವಾಗಿ ನಮ್ಮ ನಡವಳಿಕೆ, ನಮ್ಮ ಮಾತು, ನಮ್ಮ ಡ್ರೆಸ್ಸಿಂಗ್‌ ಸ್ಟೈಲ್‌ ಇತ್ಯಾದಿಗಳ ಮೂಲಕ ಜನ ನಮ್ಮ ವ್ಯಕ್ತಿತ್ವವನ್ನು (Personality) ಅಳೆಯುತ್ತಾರೆ. ಅಷ್ಟೇ ಅಲ್ಲದೆ ಸಾಮುದ್ರಿಕ ಶಾಸ್ತ್ರದಲ್ಲಿ ನಮ್ಮ ಕೈಬೆರಳಿನ ಆಕಾರ, ಪಾದಗಳು, ಮೂಗಿನ ಆಕಾರ, ಹಣೆಯ ಆಕಾರ ಸೇರಿದಂತೆ ದೇಹಾಕಾರದ ಮೂಲಕವೂ ನಾವು ನಮ್ಮ ವ್ಯಕ್ತಿತ್ವ, ಸ್ವಭಾವ ಹೇಗಿದೆ ಎಂಬ ಕುತೂಹಲಕಾರಿ ಅಂಶವನ್ನು ತಿಳಿಯಬಹುದಾಗಿದೆ. ಅದೇ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳ ಮೂಲಕವೂ ನಿಮ್ಮ ಸ್ವಭಾವ ಹೇಗಿದೆ ಎಂಬುದನ್ನು ನೀವು ತಿಳಿಯಬಹುದಾಗಿದೆ. ಅಂತಹದ್ದೇ ಚಿತ್ರವೊಂದು ಹರಿದಾಡುತ್ತಿದ್ದು, ಈ ಚಿತ್ರದಲ್ಲಿ ನಿಮ್ಮಿಷ್ಟದ ಒಂದು ಎಲೆಯನ್ನು (Leaf) ಆಯ್ಕೆ ಮಾಡುವ ಮೂಲಕ ನೀವು ನಿಸ್ವಾರ್ಥಿಯೇ, ಮಾರ್ಗದರ್ಶಕರೇ ಅಥವಾ ಆಶಾವಾದಿಯೇ ಎಂಬುದನ್ನು ಪರೀಕ್ಷಿಸಿ.

ಈ ಚಿತ್ರದಲ್ಲಿ ನೀವು ಆಯ್ಕೆ ಮಾಡುವ ಎಲೆಯೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವ ಎಂತಹದ್ದೆಂದು:
ಈ ಮೇಲಿನ ಚಿತ್ರದಲ್ಲಿ ಆರು ಬಗೆಯ ಎಲೆಗಳಿದ್ದು, ಇವುಗಳಲ್ಲಿ ನಿಮ್ಮಿಷ್ಟದ ಒಂದು ಎಲೆಯನ್ನು ಆಯ್ಕೆ ಮಾಡುವ ಮೂಲಕ ನೀವು ರಚನಾತ್ಮಕ ಸಮಸ್ಯೆ ಪರಿಹಾರಕರೇ, ದೃಢನಿಶ್ಚಯದ ಮಾರ್ಗದರ್ಶಕರೇ, ಆಶಾವಾದಿಯೇ ಅಥವಾ ನಿಸ್ವಾರ್ಥಿಯೇ ಎಂಬುದನ್ನು ತಿಳಿಯಿರಿ.

1.ನೀವು ಚಿತ್ರದಲ್ಲಿ ಒಂದನೇ ಎಲೆಯನ್ನು ಆಯ್ಕೆ ಮಾಡಿದರೆ, ನಿಮ್ಮ ಶಕ್ತಿ ನಿಜವಾದ ಸಂಪರ್ಕಗಳನ್ನು ಬೆಸೆಯುವುದರಲ್ಲಿದೆ ಎಂಬುದನ್ನು ಸೂಚಿಸುತ್ತದೆ. ನೀವು ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಮಾಣಿಕತೆಯನ್ನು ಗೌರವಿಸುತ್ತೀರಿ, ಇತರರನ್ನೂ ನೀವು ಗೌರವದಿಂದ ನಡೆಸಿಕೊಳ್ಳುತ್ತೀರಿ. ಮತ್ತು ನಿಮ್ಮ ಆದರ್ಶವಾದಿ ಸ್ವಭಾವದ ಕಾರಣದಿಂದ ಪ್ರತಿ ಸಂದರ್ಭದಲ್ಲೂ ನೀವು ಇತರರಿಗೆ ತಕ್ಷಣವೇ ಸಹಾಯ ಮಾಡಲು ಮುಂದಾಗುವ ಸ್ವಭಾವವನ್ನು ಹೊಂದಿದವರಾಗಿದ್ದೀರಿ.

2. ನೀವೇನಾದರೂ ಚಿತ್ರದಲ್ಲಿ ಎರಡನೇ ಎಲೆಯನ್ನು ಅಂದರೆ ಹಳದಿ ಬಣ್ಣದ ಎಲೆಯಲ್ಲಿ ಆಯ್ಕೆ ಮಾಡಿದರೆ, ನೀವು ಸಾಮರಸ್ಯವನ್ನು ಬಯಸುವ ಮನೋಧರ್ಮವನ್ನು ಹೊಂದಿದ್ದೀರಿ ಎಂಬುದನ್ನು ಸೂಚಿಸುತ್ತದೆ. ನೀವು ಸಾಮಾನ್ಯವಾಗಿ ಸಂಘರ್ಷಗಳನ್ನು ತಪ್ಪಿಸಲು ಪ್ರಯತ್ನಿಸುತ್ತೀರಿ. ಎಂತಹದ್ದೇ ಉದ್ವಿಗ್ನ ಪರಿಸ್ಥಿತಿಯಲ್ಲೂ ಶಾಂತವಾಗಿ ವರ್ತಿಸುತ್ತೀರಿ. ಅಲ್ಲದೆ ನೀವು ಚಿಂತನಶೀಲ ಯೋಜನೆ ಮತ್ತು ಮಾರ್ಗದರ್ಶನದ ಗುಣವನ್ನು ಹೊಂದಿದ್ದು, ಈ ನಿಮ್ಮ ಗುಣ ಇತರರನ್ನು ಸಹ ಪ್ರೋತ್ಸಾಹಿಸುತ್ತದೆ.
3.

ನೀವು ಈ ಚಿತ್ರದಲ್ಲಿ ಮೂರನೇ ಎಲೆಯನ್ನು ಆಯ್ಕೆ ಮಾಡಿದರೆ, ನೀವು ಆಳವಾದ ನಿಷ್ಠೆಯನ್ನು ಹೊಂದಿರುವವರು ಎಂದರ್ಥ. ಅಲ್ಲದೆ ನೀವು ಏನನ್ನೂ ನಿರೀಕ್ಷಿಸದೆ ಇತರರಿಗೆ ಸಹಾಯವನ್ನು ಮಾಡುತ್ತೀರಿ, ನಿಸ್ವಾರ್ಥ ಭಾವದಿಂದ ದಾನಧರ್ಮ ಮಾಡುತ್ತೀರಿ. ಮತ್ತು ನಿಮ್ಮವರಿಗೆ ನೀವು ಯಾವಾಗಲೂ ಬೆನ್ನೆಲುಬಾಗಿ ನಿಲ್ಲುತ್ತೀರಿ ಆದರೆ ಕೆಲವೊಮ್ಮೆ ಬೇರೆಯವರಿಗೆ ಸಹಾಯ ಮಾಡುವ ಭರದಲ್ಲಿ ನೀವು ನಿಮ್ಮ ಸ್ವಂತ ಅಗತ್ಯಗಳನ್ನೇ ನಿರ್ಲಕ್ಷಿಸಬಹುದು.

4.ನೀವೇನಾದರೂ ನಾಲ್ಕನೇ ಚಿತ್ರವನ್ನು ಆಯ್ಕೆ ಮಾಡಿದರೆ, ನೀವು ಶಿಸ್ತುಬದ್ಧ ಮತ್ತು ವಿಶ್ಲೇಷಣಾತ್ಮಕ ಮನಸ್ಥಿತಿಯನ್ನು ಹೊಂದಿರುವವರೆಂದು ಅರ್ಥ. ತುಂಬಾನೇ ಪ್ರಾಕ್ಟಿಕಲ್‌ ಆಗಿರುವ ನೀವು ಯೋಜನೆಗಳನ್ನು ರೂಪಿಸುವವರು ಮತ್ತು ಸವಾಲುಗಳನ್ನು ಪರಿಹರಿಸುವವರಾಗಿರುತ್ತೀರಿ. ಒಟ್ಟಾರೆಯಾಗಿ ಹೇಳುವುದಾದರೆ ನೀವು ಸಮಸ್ಯೆಯ ಪರಿಹಾರಕರು.

5.ನೀವೇನಾದರೂ 5 ನೇ ಎಲೆಯನ್ನು ಅಂದರೆ ಹಸಿರು ಎಲೆಯನ್ನು ಆಯ್ಕೆ ಮಾಡಿದರೆ, ನೀವು ಇತರರಿಗೆ ಉತ್ತಮ ಮಾರ್ಗದರ್ಶನ ನೀಡುವ ಮಹತ್ವಾಕಾಂಕ್ಷೆಯ ವ್ಯಕ್ತಿತ್ವವನ್ನು ಹೊಂದಿದವರು ಎಂದರ್ಥ. ನೀವು ನಿಮ್ಮ ಪರಿಣತಿಯ ಮೂಲಕವೇ ನಿಮ್ಮ ಸುತ್ತಮುತ್ತಲಿನವರಿಗೆ ಮಾರ್ಗದರ್ಶನವನ್ನು ನೀಡುತ್ತೀರಿ. ಅಷ್ಟೇ ಅಲ್ಲದೆ ಸಹಾನೂಭೂತಿಯನ್ನು ಹೊಂದಿರುವ ನೀವು ನಿಮ್ಮ ಉತ್ತಮ ಸಲಹೆಗಳ ಮೂಲಕವೇ ಇತರರನ್ನು ಆಕರ್ಷಿಸುತ್ತೀರಿ.

6.ನೀವೇನಾದರೂ ಚಿತ್ರದಲ್ಲಿ ಆರನೇ ಎಲೆಯನ್ನು ಆಯ್ಕೆ ಮಾಡಿದರೆ, ನೀವು ಉತ್ಸಾಹಭರಿತ ಮತ್ತು ತಕ್ಷಣ ಯಾವುದೇ ಕ್ರಮವನ್ನು ಕೈಗೊಳ್ಳಲು ಸಿದ್ಧರಿರುವ ಗುಣವನ್ನು ಹೊಂದಿರುವವರು ಎಂದರ್ಥ. ಈ ನಿಮ್ಮ ಉತ್ಸಾಹವು ಸ್ವಯಂ ಸೇವಕರಾಗಿ ಕೆಲಸ ಮಾಡಲು, ಯಾವುದೇ ಹಿಂಜರಿಕೆಯಿಲ್ಲದೆ ಹೊಸ ಸವಾಲುಗಳಿಗೆ ಧುಮುಕಲು ಪ್ರೇರೇಪಿಸುತ್ತದೆ. ಆದರೂ ಕೆಲವೊಂದು ಬಾರಿ ನಿಮ್ಮ ಪ್ರಯತ್ನಗಳು ಚದುರಿ ಹೋಗುವ ಸಾಧ್ಯತೆ ಕೂಡಾ ಇದೆ.