ಶರಾವತಿ ಮುಳುಗಡೆ ಸಂತ್ರಸ್ತರಿಗೆ ವಿಷ ಹಾಕಿದ್ದೇ ಬಿಜೆಪಿಯವರು; ಪತ್ರಿಕಾಗೋಷ್ಠಿಯಲ್ಲಿ  ಗೋಪಾಲಕೃಷ್ಣ ಬೇಳೂರು ಆರೋಪ

ಶರಾವತಿ ಮುಳುಗಡೆ ಸಂತ್ರಸ್ತರಿಗೆ ವಿಷ ಹಾಕಿದ್ದೇ ಬಿಜೆಪಿಯವರು;

ಪತ್ರಿಕಾಗೋಷ್ಠಿಯಲ್ಲಿ  ಗೋಪಾಲಕೃಷ್ಣ ಬೇಳೂರು ಆರೋಪ

ಶಿವಮೊಗ್ಗ : ಶರಾವತಿ ಮುಳುಗಡೆ ಸಂತ್ರಸ್ತರಿಗೆ ವಿಷ ಹಾಕಿದ್ದೇ ಬಿಜೆಪಿಯವರು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಇತ್ತೀಚೆಗೆ ಸಂಸದ ರಾಘವೇಂದ್ರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಮಾಡಿದ್ದಾರೆ. ಮೇ ೦೯ ರಂದು ಮಧು ಬಂಗಾರಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಿಗದಿಯಾಗಿದೆ. ಅದು ಗೊತ್ತಾಗಿಯೇ ಬಿಜೆಪಿಯವರು ಸಭೆ ಮಾಡಿದ್ದಾರೆ ಎಂದು ಆರೋಪಿಸಿದರು.
ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಪರಿಹಾರ ಕೊಡದೇ ವಂಚಿಸಿರುವುದೇ ಬಿಜೆಪಿ. ಈಗ ನಮ್ಮ ಸರ್ಕಾರ ಒಂದು ಹಂತಕ್ಕೆ ಅದನ್ನು ತಂದಿದ್ದೇವೆ. ಸಿದ್ದರಾಮಯ್ಯ ಸರ್ಕಾರದ ನೇತೃತ್ವದಲ್ಲಿ ಹಕ್ಕುಪತ್ರ ಕೊಟ್ಟೇ ಕೊಡುತ್ತೇವೆ. ಆದರೆ ಇದೇ ಹಾಲಪ್ಪ, ಅಶೋಕ ನಾಯ್ಕ, ಆರಗ  ಜ್ಞಾನೇಂದ್ರ ಎಲ್ಲಾ ಸೇರಿ ರೈತರಿಗೆ ಮೋಸ ಮಾಡಿದ್ದಾರೆ. ರಾಘವೇಂದ್ರ ಸಂಸತ್‌ನಲ್ಲಿ ಐದು ನಿಮಿಷ ಮಾತನಾಡಿದು ಬಿಟ್ಟರೆ ಬೇರೆ ಏನೂ ಮಾಡಿಲ್ಲ ಎಂದು ದೂರಿದರು.
ನಮ್ಮ ಸರ್ಕಾರ ೯೦೦೦ ಜನರಿಗೆ ಹಕ್ಕುಪತ್ರ ನೀಡಲು ಸಿದ್ಧವಾಗಿದೆ. ೯೦೦೦ ರೈತರ ಸರ್ವೆ ಜೊತೆಗೆ ಉಳಿದವರ ಸರ್ವೆಯೂ ಬಹಳಷ್ಠಿದೆ. ಅವರಿಗೂ ಹಕ್ಕು ಕೊಡುವಂತಾಗಬೇಕು ಎಂದರು.
ಸಂಸದರು ಜಿಲ್ಲೆಯಲ್ಲಿ ಮೊದಲು ಮೊಬೈಲ್ ನೆಟ್‌ವರ್ಕ್ ಸರಿ ಮಾಡಿಕೊಬೇಕು. ೨ ಜಿ ನೆಟ್‌ವರ್ಕ್ ಸಹ ಸರಿಯಾಗಿ ಸಿಗುವುದಿಲ್ಲ. ಬೇರೆ ದೇಶಗಳು ೧೦ಜಿಗೆ ಹೋಗಿವೆ.  ನಮಗೆ ಸಾಗರದಲ್ಲಿಯೂ ನೆಟ್ಟಗೆ ೪-ಜಿ ಸರಿ ಬರುತ್ತಿಲ್ಲ ಎಂದರು.
ರೈಲ್ವೆ ಇಲಾಖೆ ಕಾಮಗಾರಿ ಸರಿ ಮಾಡಿಸಿಕೊಡಬೇಕು. ಸಾಗರದಲ್ಲಿ ಮಳೆ ಬಂದರೆ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ನಿಲ್ಲುತ್ತದೆ. ಅಲ್ಲಿ ಕಾಮಗಾರಿ ಮಾಡಲು ನಮಗೂ ಬಿಡುತ್ತಿಲ್ಲ. ೨೧ನೇ ಶತಮಾನದಲ್ಲಿ ನಾವೆಲ್ಲ ಇದೀವಿ.  ನೆಟವರ್ಕ್ ಇಲ್ಲ ಎಂದರೆ ಹೇಗೆ ? ಹೈವೆ ರಸ್ತೆಯೂ ೧೨-೧೩ ವರ್ಷದವರೆಗೆ ನಡೆದಿದೆ. ನಾವು ಹೋದ ಮೇಲೆ ಹೈವೆಯಾಗುತ್ತದೆಯೋ ಗೊತ್ತಿಲ್ಲ. ಸಂಸದರು ಸರಿಯಾಗಿ ಮಾಹಿತಿ ಪಡೆದು ನಂತರ ಸಭೆ ಮಾಡಲಿ ಎಂದರು.
ಪ್ರಧಾನಿ ಮೋದಿಯವರ ಜೊತೆ ಇಡೀ ದೇಶವಿದೆ. ದೇಶದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ಕ್ರಮಗಳಿಗೂ ಕಾಂಗ್ರೆಸ್ ಪಕ್ಷದ ಬೆಂಬಲವಿದೆ. ಕಾಂಗ್ರೆಸ್ಸನ್ನು ದೇಶ ವಿರೋಧಿ ಎಂದು ಯಾರೂ ಕೂಡ ಬಿಂಬಿಸಬಾರದು. ದೇಶದ ಅಖಂಡತೆಯ ಪ್ರಶ್ನೆ ಬಂದಾಗ ನಾವೆಲ್ಲರೂ ದೇಶದ ಜೊತೆಗಿದ್ದೇವೆ. ಪಾಕಿಸ್ತಾನಿ ಪ್ರಜೆಗಳನ್ನು ಮೊದಲ ದೇಶದಿಂದ ಹೊರಗೆಹಾಕಿ. ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.