ಇಂಡೋನೆಷ್ಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆ* *ಭಾರತ ಪ್ರತಿನಿಧಿಸಲು ಹೊರಟ ರೋಷನ್ ಗೆ ಶಿವಮೊಗ್ಗ ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್ ಅಧ್ಯಕ್ಷತೆಯಲ್ಲಿ ಆರ್ಥಿಕ ಸಹಾಯ*
*ಇಂಡೋನೆಷ್ಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆ*
*ಭಾರತ ಪ್ರತಿನಿಧಿಸಲು ಹೊರಟ ರೋಷನ್ ಗೆ ಶಿವಮೊಗ್ಗ ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್ ಅಧ್ಯಕ್ಷತೆಯಲ್ಲಿ ಆರ್ಥಿಕ ಸಹಾಯ*
ಇಂಡೋನೆಷ್ಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಶಿವಮೊಗ್ಗದ ಯುವ ಪ್ರತಿಭೆ ರೋಷನ್ ರವರಿಗೆ ಇಂದು ನಗರ ಜೆಡಿಎಸ್ ವತಿಯಿಂದ ನಗರಾಧ್ಯಕ್ಷ ದೀಪಕ್ ಸಿಂಗ್ ಅದ್ಯಕ್ಷತೆಯಲ್ಲಿ ಆರ್ಥಿಕ ಸಹಾಯ ಮಾಡಿ ಅಭಿನಂದಿಸಲಾಯಿತು.
ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಕಡಿದಾಳು ಗೋಪಾಲ್ ಹಾಗೂ ರಾಜ್ಯ ಜೆಡಿಎಸ್ ಉಪಾಧ್ಯಕ್ಷರಾದ ಕೆ. ಬಿ. ಪ್ರಸನ್ನ ಕುಮಾರ್ ರವರ ನೇತೃತ್ವದಲ್ಲಿ ಅಭಿನಂದಿಸಿ, ಪಂದ್ಯಾವಳಿಯಲ್ಲಿ ಗೆದ್ದು ಭಾರತಕ್ಕೆ ಮತ್ತಷ್ಟು ಕೀರ್ತಿ ತರುವಂತೆ ಹಾರೈಸಿ ರೋಷನ್ ರವರಿಗೆ ಆರ್ಥಿಕ ನೆರವು ನೀಡಲಾಯಿತು.
ಇದೆ ಸಂದರ್ಭ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸಂಗಯ್ಯ, ಜಿಲ್ಲಾ ವಕ್ತಾರ ನರಸಿಂಹ ಗಂಧದಮನೆ, ಜೆಡಿಎಸ್ ಮುಖಂಡರುಗಳಾದ ಕೃಷ್ಣ ದಯಾನಂದ್, ಲೋಹಿತ್, ಯುವ ಜೆಡಿಎಸ್ ನ ಸಂಜಯ್ ಕಶ್ಯಪ್, ಮಂಜುನಾಥ್, ಮಾಧವ್ ಮೂರ್ತಿ, ಲೋಹಿತ್, ಗೋಪಿ ಮೊದಲಿಯರ್, ವೆಂಕಟೇಶ್, ಸಿದ್ದೇಶ್ ವೀರೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.