ಪ್ರೀತಿಸಿ ಮದುವೆಯಾದವನೇ ಕೊಲ್ಲಲು ಬಂದಿದ್ದ!* *ಅರಣ್ಯ ಇಲಾಖೆಯ ಸಿಬ್ಬಂದಿ ವಿನಯ್ ಕುಮಾರ್ ಕಥೆ ಏನು?* *ಶಿವಮೊಗ್ಗದ ಜೈಲ್ ಸರ್ಕಲ್ ನಲ್ಲಿರೋ ಪಿ.ಜಿ.ಓನರ್ರನ್ನೇಕೆ ಕೊಲ್ಲಲು ಬಂದಿದ್ದ?*

*ಪ್ರೀತಿಸಿ ಮದುವೆಯಾದವನೇ ಕೊಲ್ಲಲು ಬಂದಿದ್ದ!*

*ಅರಣ್ಯ ಇಲಾಖೆಯ ಸಿಬ್ಬಂದಿ ವಿನಯ್ ಕುಮಾರ್ ಕಥೆ ಏನು?*

*ಶಿವಮೊಗ್ಗದ ಜೈಲ್ ಸರ್ಕಲ್ ನಲ್ಲಿರೋ ಪಿ.ಜಿ.ಓನರ್ರನ್ನೇಕೆ ಕೊಲ್ಲಲು ಬಂದಿದ್ದ?*

ಶಿವಮೊಗ್ಗದ ಜೈಲ್ ಸರ್ಕಲಲ್ಲಿ ಪಿ.ಜಿ.ನಡೆಸುತ್ತಿರುವ ಹೊಸಮನೆ ಮೂಲದ ಮಹಿಳೆ ಮೇ.7 ರಂದು ದೊಡ್ಡಪೇಟೆ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದರ ಮೇರೆಗೆ ಎಫ್ ಐ ಆರ್ ವೊಂದು ಅರಣ್ಯ ಇಲಾಖೆಯ ವಿನಯ್ ಕುಮಾರ್ ವಿರುದ್ಧ ದಾಖಲಾಗಿದೆ.

ಈ ಮಹಿಳೆಯನ್ನು 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ವಿನಯ್ ಗೆ ಒಂಭತ್ತು ವರ್ಷದ ಮಗ ಕೂಡ ಇದ್ದಾನೆ. ಕಳೆದ 2 ವರ್ಷಗಳಿಂದ ದಾಂಪತ್ಯ ವೈಮನಸ್ಸಿನಲ್ಲಿರುವ ಈ ದಂಪತಿ ವಿಚಾರ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲು ಕೂಡ ಏರಿತ್ತು.

ಮೇ.7 ರ ಮಧ್ಯರಾತ್ರಿ ಹೆಂಡತಿ ಮಲಗಿದ್ದ ಮನೆಗೆ ಬರುವ ವಿನಯ್, ನಿದ್ದೆಯಲ್ಲಿದ್ದಾಗಲೇ ಕುತ್ತಿಗೆ ಮೇಲೆ ಕೈ ಇಟ್ಟಿದ್ದ. ಗಾಬರಿಗೊಂಡ ಮಹಿಳೆ ಅವನನ್ನು ತಳ್ಳುತ್ತಾಳೆ. ಆತನ ತಾಯಿ ಬಂದು ಬಾಗಿಲು ಬಡಿದಾಗ ಕನಸು ಬಿತ್ತೆಂದು ಹೇಳಿಕೊಳ್ಳುತ್ತಾನೆ. ಆಕೆ ಹೋದ ನಂತರ ಅಡುಗೆ ಮನೆಯಿಂದ ಚಾಕು ಎತ್ತಿ ತರುವ ವಿನಯ್ ಕೊಲೆ ಮಾಡಲು ಯತ್ನಿಸುತ್ತಾನೆ. ಅವಾಚ್ಯ ಶಬ್ದಗಳಿಂದ ಬೈಯುತ್ತಲೇ ಎಡಪಕ್ಕೆಗೆ ಚಾಕುವಿನಿಂದ ತಿವಿದೂ ಬಿಡುತ್ತಾನೆ.

ಗಾಯಗೊಂಡ ಆಕೆ ಸ್ನೇಹಿತೆಯ ಸಹಾಯದಿಂದ ಮೆಗ್ಗಾನ್ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದು, ಜೀವ ಬೆದರಿಕೆ ಹಾಕಿ ಕೊಲೆ ಮಾಡಲೆತ್ನಿಸಿದ ಗಂಡ ವಿನಯ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆ ಮಹಿಳೆ ನೀಡಿದ್ದ ದೂರಿನ ಆಧಾರದ ಮೇಲೆ ಎಫ್ ಐ ಆರ್ ದಾಖಲಾಗಿದೆ.