ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು? ಮೇ.14 ಕ್ಕೆ ಬೆಂಗಳೂರಿನಲ್ಲಿ ಆನಂತರ ಮೇ.16 ರಂದು ಶಿವಮೊಗ್ಗವೂ ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ತಿರಂಗ ಯಾತ್ರಾ ಮೂಲಕ ಆಪರೇಷನ್ ಸಿಂಧೂರ್ ಯೋಧರಿಗೆ ಪಕ್ಷಾತೀತ ಗೌರವ ಸಮರ್ಪಣೆ… ಜಗತ್ತು ಒಪ್ಪಿಕೊಂಡ ಪ್ರಧಾನಿ ಮೋದಿಯವರ ಆಪರೇಷನ್ ಸಿಂಧೂರ- ಸೇನೆ ಕಾರ್ಯಾಚರಣೆಯಿಂದ ಮೋಸ್ಟ್ ವಾಂಟೆಡ್ 8 ಜನ ಉಗ್ರರ ಸರ್ವನಾಶ- ಪಾಕಿಸ್ತಾನ ಸೀಝ್ ಫೈರ್ ಉಲ್ಲಂಘಿಸಿದರೆ ಮತ್ತೆ ಯುದ್ಧದ ಮಾತಾಡಿರುವ ಮೋದಿ ನಿರ್ಧಾರ ಅಭಿನಂದನಾರ್ಹ-
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?
ಮೇ.14 ಕ್ಕೆ ಬೆಂಗಳೂರಿನಲ್ಲಿ ಆನಂತರ ಮೇ.16 ರಂದು ಶಿವಮೊಗ್ಗವೂ ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ತಿರಂಗ ಯಾತ್ರಾ ಮೂಲಕ ಆಪರೇಷನ್ ಸಿಂಧೂರ್ ಯೋಧರಿಗೆ ಪಕ್ಷಾತೀತ ಗೌರವ ಸಮರ್ಪಣೆ…
ಜಗತ್ತು ಒಪ್ಪಿಕೊಂಡ ಪ್ರಧಾನಿ ಮೋದಿಯವರ ಆಪರೇಷನ್ ಸಿಂಧೂರ- ಸೇನೆ ಕಾರ್ಯಾಚರಣೆಯಿಂದ ಮೋಸ್ಟ್ ವಾಂಟೆಡ್ 8 ಜನ ಉಗ್ರರ ಸರ್ವನಾಶ- ಪಾಕಿಸ್ತಾನ ಸೀಝ್ ಫೈರ್ ಉಲ್ಲಂಘಿಸಿದರೆ ಮತ್ತೆ ಯುದ್ಧದ ಮಾತಾಡಿರುವ ಮೋದಿ ನಿರ್ಧಾರ ಅಭಿನಂದನಾರ್ಹ-
ಪಹಲ್ ಗಾವ್ 26 ಭಾರತೀಯರ ಭೀಕರ ಹತ್ಯೆಯ ನಂತರ ಭಾರತೀಯರಲ್ಲಿ ಆಕ್ರೋಶವಿತ್ತು. ಉಗ್ರಗಾಮಿಗಳಿಗೆ ಮಟ್ಟಹಾಕುವ ಕೆಲಸ ಆಗಬೇಕೆಂದು, ಈ ಉಗ್ರಗಾಮಿಗಳಿಗೆ ಆಶ್ರಯ ನೀಡುವ ಪಾಕಿಸ್ತಾನವನ್ನು ಮಟ್ಟ ಹಾಕುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ನಿರ್ಧಾರ ದಿಟ್ಟವಾದುದು.
ಆಪರೇಷನ್ ಸಿಂಧೂರ, ಸಿಂಧೂ ನದಿ ನೀರು ನಿಲ್ಲಿಸುವ ತೀರ್ಮಾನ ಕೂಡ ದಿಟ್ಟವಾದುದು. ಪಾಕಿಸ್ತಾನ, ಚೀನಾ ಬಿಟ್ಟರೆ ಜಗತ್ತು ಒಪ್ಪಿಕೊಂಡಿದೆ. ಉಗ್ರಗಾಮಿಗಳ ಅಡಗು ತಾಣಗಳಿಗೆ ನುಗ್ಗಿ ಹೊಡೆಯುವ ಕೆಲಸವಾಗಿದೆ. ಪಾಕಿಸ್ತಾನದೊಳಗೂ ನೂರಾರು ಕಿ.ಮೀ. ನುಗ್ಗಿ ಪ್ರತಿಕಾರ ತೆಗೆದುಕೊಳ್ಳಲಾಗಿದೆ.
ಭಾರತೀಯ ಸೇನೆಯ ಕಾರ್ಯಾಚರಣೆಯಿಂದ ಉಗ್ರ ಮುದಾಸಿರ್ ಖಾದಿಯನ್ ಖಾಸ್ ಹತ್ಯೆಯಾಗಿದೆ. ಹಫೀಸ್ ಮೊಹಮ್ಮದ್ ಹತ್ಯೆ ಕೂಡ ಆಗಿದೆ. ಮೊಹಮ್ಮದ್ ಯೂಸುಫ್ ಅಝರ್, ಖಾಲಿದ್, ಮೊಹಮ್ಮದ್ ಹಸನ್ ಖಾನ್, ಮೌಲಾನಾ ಅಬ್ದುಲ್ ಅಸ್ಗರ್ ಸೇರಿದಂತೆ ಎಂಟು ಪ್ರಮುಖ ಉಗ್ರಗಾಮಿಗಳನ್ನು ಯಶಸ್ವಿಯಾಗಿ ಈ ಏರ್ ಸ್ಟ್ರೈಕ್ ನಲ್ಲಿ ಆಗಿರುವುದು ಗಮನಾರ್ಹ.
ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಪಾಕಿಸ್ತಾನ ಅಮೇರಿಕಕ್ಕೆ ಬೇಡಿಕೊಂಡ ಸಂದರ್ಭದಲ್ಲಿ ಸೀಝ್ ಫೈರ್ ಘೋಷಣೆ ಆಗಿದೆ. ಪ್ರಧಾನಿ ಮೋದಿಯವರು ಸಂದೇಶ ಕೂಡ ನೀಡಿದ್ದು, ಸೀಝ್ ಫೈರ್ ಪರ್ಮನೆಂಟ್ ಅಲ್ಲ. ಪಾಕಿಸ್ತಾನದಿಂದ ಟೆರರಿಸ್ಟ್ ಅಟ್ಯಾಕ್ ಆದರೆ ಯುದ್ಧವೆಂದೇ ಭಾವಿಸುವುದಾಗಿ ಹೇಳಿದ್ದಾರೆ.
ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳ ಚಟುವಟಿಕೆ ನಿಂತರೆ ನೀರು ನೀಡಲು ಸಾಧ್ಯವೆಂದಿದ್ದಾರೆ. ನ್ಯೂಕ್ಲಿಯರ್ ಬ್ಲ್ಯಾಕ್ ಮೇಲ್ ಮಾಡಲು ಸಾಧ್ಯವಿಲ್ಲ. ಗೊಡ್ಡು ಬೆದರಿಕೆಗೆ ಬಗ್ಗೋಲ್ಲ ಎಂದಿದ್ದಾರೆ ಮೋದಿ.
ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಇಡೀ ದೇಶದಲ್ಲಿ ಆಪರೇಷನ್ ಸಿಂಧೂರ್ ಹೆಸರಲ್ಲಿ ಯೋಧರಿಗೆ ಗೌರವ ಸಲ್ಲಿಸಲು ತಿರಂಗಾ ಯಾತ್ರೆ ಮಾಡಲು ಕರೆ ಕೊಟ್ಟಿದ್ದಾರೆ. ರಾಜ್ಯದಲ್ಲೂ ಈ ಯಾತ್ರೆ ರಾಜಕೀಯ ರಹಿತವಾಗಿ ಈ ತಿರಂಗಯಾತ್ರೆ ನಡೆಯಲಿದೆ. ನಿವೃತ್ತ ಯೋಧರು ಸೇರಿದಂತೆ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿಕೊಂಡು ಮೇ.14 ಕ್ಕೆ ಬೆಂಗಳೂರಿನಲ್ಲಿ ಆನಂತರ ಮೇ.16 ರಂದು ಶಿವಮೊಗ್ಗವೂ ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ, ನಂತರ ತಾಲ್ಲೂಕು ಕೇಂದ್ರಗಳಲ್ಲಿ ತಿರಂಗಾ ಯಾತ್ರೆ ನಡೆಸಲಿದ್ದೇವೆ.
ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಕೆಲವರು ಆಪರೇಷನ್ ಸಿಂಧೂರ್ ಬಗ್ಗೆ ಹಗುರವಾಗಿ ಮಾತಾಡ್ತಿದ್ದಾರೆ. ಪ್ರಧಾನಿ ಮೋದಿಯವರು ಅಮೇರಿಕಾ ಅಧ್ಯಕ್ಷ ಟ್ರಂಪ್ ಶರಣಾಗಿದ್ದಾರೆ ಅನ್ನೋ ಥರ ಮಾತಾಡ್ತಿದ್ದಾರೆ. ಶರಣಾಗಿಲ್ಲ, ಅದೊಂದು ರಾಜನೀತಿ. ಟೀಕೆ ಮಾಡುವ ಬದಲು ಜೊತೆಗೆ ನಿಲ್ಲಬೇಕು.
ಗೊಂದಲಗಳಿಗೆ ತೆರೆ ಎಳೆಯೋ ಪ್ರಯತ್ನ ಪ್ರಧಾನಿ ಮಾಡಿದ್ದಾರೆ. ಪೆಹಲ್ ಗಾಮ್ ಉಗ್ರರು ಎಲ್ಲಿ ಎಂದು ಕೇಳುತ್ತಿರುವ ಪ್ರಿಯಾಂಕ್ ಖರ್ಗೆ ಹಗುರವಾಗಿ ಮಾತಾಡಬಾರದು. ಆಪರೇಷನ್ ಸಿಂಧೂರ್ ಸೀಝ್ ಫೈರ್ ತಾತ್ಕಾಲಿಕ ಎಂದಿದ್ದಾರೆ ಪ್ರಧಾನಿ.
ಟ್ರಂಪ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡೋಲ್ಲ. ಪಾಕಿಸ್ತಾನ ಆಕ್ಯುಪೈಡ್ ಕಾಶ್ಮೀರ(ಪಿಓಕೆ) ವಶಕ್ಕೆ ಪಡೆಯುವುದು ಕೂಡ ಮುಖ್ಯ.
ಕಾಶ್ಮೀರದ ಸಮಸ್ಯೆಗೆ ಆರ್ಟಿಕಲ್ 370 ಕಾರಣ ಅನ್ನೋದು ಗಮನಿಸಬೇಕು. ದೇಶದ ನಾಯಕತ್ವ ವಹಿಸಿಕೊಂಡಿರೋ ಪ್ರಧಾನಿ ಮೋದಿ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.