ನಗರ ಪಾಲಿಕೆ ಸಭೆಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ* *ನಾನೂ ಆಯುಕ್ತರು 200 ಸಮಸ್ಯಾ ಕೇಂದ್ರದಲ್ಲೇ ಬಂದು ಮಳೆ ನೀರು ಸಮಸ್ಯೆಗೆ ತಯಾರಾದ ಅಧಿಕಾರಿಗಳಿಗೆ ಸನ್ಮಾನಿಸುವೆವು! ಯಾವಾಗ ಬರಬೇಕೆಂದು ಹೇಳಿ ಪಾಲಿಕೆ ಅಧಿಕಾರಿಗಳೇ…* *ಹೂಳು ತೆಗೆಯುವ ಪಟ್ಟಿ ಇದು ಎಂದು ಗರಂ ಆದ ಶಾಸಕರು* *ಮಳೆ ಬಂದರೆ ಹೆದರೋ ಪರಿಸ್ಥಿತಿ ಇದೆ- ಯುದ್ಧೋಪಾದಿಯಲ್ಲಿ ಕೆಲಸ ಮಾಡಿ- ಚನ್ನಿ*

*ನಗರ ಪಾಲಿಕೆ ಸಭೆಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ*

*ನಾನೂ ಆಯುಕ್ತರು 200 ಸಮಸ್ಯಾ ಕೇಂದ್ರದಲ್ಲೇ ಬಂದು ಮಳೆ ನೀರು ಸಮಸ್ಯೆಗೆ ತಯಾರಾದ ಅಧಿಕಾರಿಗಳಿಗೆ ಸನ್ಮಾನಿಸುವೆವು! ಯಾವಾಗ ಬರಬೇಕೆಂದು ಹೇಳಿ ಪಾಲಿಕೆ ಅಧಿಕಾರಿಗಳೇ…*

*ಹೂಳು ತೆಗೆಯುವ ಪಟ್ಟಿ ಇದು ಎಂದು ಗರಂ ಆದ ಶಾಸಕರು*

*ಮಳೆ ಬಂದರೆ ಹೆದರೋ ಪರಿಸ್ಥಿತಿ ಇದೆ- ಯುದ್ಧೋಪಾದಿಯಲ್ಲಿ ಕೆಲಸ ಮಾಡಿ- ಚನ್ನಿ*

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದ್ದು, ಹಾಲಿ ನಿರ್ವಹಿಸುತ್ತಿರುವ ಕರ್ತವ್ಯದ ಜೊತೆ ಕಾರ್ಯನಿರ್ವಹಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ ಹೊರಡಿಸಿರುವ ಪಟ್ಟಿ ಹೂಳು ತೆಗೆಯುವ ಪಟ್ಟಿಯಷ್ಟೇ. ಇದರಿಂದ ಗುತ್ತಿಗೆದಾರರಿಗೆ ಲಾಭ ಬಿಟ್ಟರೆ ಜನರಿಗೇನೂ ಲಾಭವಿಲ್ಲ ಎಂದು ಪಾಲಿಕೆಯ ಅಧಿಕಾರಿಗಳಿಗೆ ಶಾಸಕ ಎಸ್ ಎನ್ ಚನ್ನಬಸಪ್ಪ ತರಾಟೆಗೆ ತೆಗೆದುಕೊಂಡರು.

ಇಂದು ಸಂಜೆ ಶಿವಮೊಗ್ಗ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಕರೆದಿದ್ದ ಮಳೆ ನೀರು ಸಮಸ್ಯೆಗಳ ಕುರಿತ ಸಭೆಯಲ್ಲಿ ಅವರು ಮಾತಾಡಿದರು.

ದೊಡ್ಡ ರಾಜಕಾಲುವೆಗಳ ಬಗ್ಗೆ ಮಾತ್ರ ಯೋಚಿಸಿದ್ದೀರಿ. ಸಣ್ಣದ್ದೆಲ್ಲ ಯಾಕೆ ಯೋಚಿಸಿಲ್ಲ. ಇಷ್ಟರಲ್ಲಿ ಹೂಳು ತೆಗೆಯುವ ಕೆಲಸ ಮುಗಿಯಬೇಕಿತ್ತು. ಸಣ್ಣ ಚರಂಡಿಗಳನ್ನು ಮುಟ್ಟಲೇ ಇಲ್ಲ ಎಂದು ಗಂಭೀರಗೊಂಡರು.

ಟಿಪ್ಪು ನಗರ ಮುಖ್ಯರಸ್ತೆಯ ನಾಲ್ಕು ಮನೆಗಳ ಸಮಸ್ಯೆ ಕೂಡಲೇ ಬಗೆಹರಿಸಿ. ಇಲ್ಲದಿದ್ದರೆ ಮಳೆ ನೀರು ಚರಂಡಿಗಳಲ್ಲಿ ಹರಿಯದೇ ರಸ್ತೆ ಮೇಲೆಯೇ ಆತಂಕ ಸೃಷ್ಟಿಸಲಿದೆ ಎಂದರು.

ಸಮರೋಪಾದಿಯಲ್ಲಿ ಕೆಲಸಗಳಾದರೆ ಮಾತ್ರ ಮಳೆ ನೀರಿನ ಸಮಸ್ಯೆ ಆಗಲ್ಲ. ಕೂಡಲೇ ಗಂಭೀರವಾಗಿ ಗಮನಿಸಿ ಕೆಲಸ ಕೈಗೊಳ್ಳಿ ಎಂದರು.

ಸ್ಮಾರ್ಟ್ ಸಿಟಿ ವಾರ್ಡ್ ಗಳು ಆಯಾ ಗುತ್ತಿಗೆದಾರರೇ ನಿಭಾಯಿಸುವರು. ಕೂಡಲೇ ಸಮಸ್ಯೆ ಸರಿಪಡಿಸದಿದ್ದರೆ ಬೆಂಗಳೂರಿನಲ್ಲಿ ಜನ ಉಗಿಯುತ್ತಿದ್ದಾರಲ್ಲ ಹಾಗೆ ಉಗೀತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್, ಆಡಳಿತಾಧಿಕಾರಿ ತುಷಾರ್ ವೇದಿಕೆಯಲ್ಲಿದ್ದರು. ಎಇಇಗಳು, ಜ್ಯೂನಿಯರ್ ಇಂಜಿನಿಯರ್ ಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.