ನಾಳೆ ಕರ್ನಾಟಕ ಸಿಇಟಿ ಫಲಿತಾಂಶ*

*ನಾಳೆ ಕರ್ನಾಟಕ ಸಿಇಟಿ ಫಲಿತಾಂಶ*

ವಿದ್ಯಾರ್ಥಿಗಳು ಸಾಕಷ್ಟು ಕಾತರದಿಂದ ಕಾಯುತ್ತಿದ್ದ ಆ ದಿನ ಬಂದಿದೆ. ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ (Karnataka Common Entrance Test) ಫಲಿತಾಂಶ ನಾಳೆ(ಮೇ 24) ರಂದು ಪ್ರಕಟವಾಗಲಿದೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ (MC Sudhakar) ಅವರು ಶನಿವಾರ ಬೆಳಗ್ಗೆ 11:30ಕ್ಕೆ ಪ್ರಕಟ ಮಾಡಲಿದ್ದಾರೆ. ಬಳಿಕ ಮಧ್ಯಾಹ್ನ 2 ಗಂಟೆಗೆ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದು. ಹೀಗಾಗಿ cetonline.karnataka.gov.in ಅಥವಾ kea.kar.nic.in ನಲ್ಲಿ ತಮ್ಮ ಫಲಿತಾಂಶವನ್ನು ನೋಡಬಹುದಾಗಿದೆ.

ಕರ್ನಾಟಕ ಸಿಇಟಿ ಫಲಿತಾಂಶ ಪರಿಶೀಲಿಸುವುದು ಹೇಗೆ?
ಹಂತ 1: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಪೋರ್ಟಲ್ https://cetonline.karnataka.gov.in/kea ಗೆ ಹೋಗಿ.

ಹಂತ 2: ಮುಖಪುಟದಲ್ಲಿ “KCET ಫಲಿತಾಂಶಗಳು 2024” ಎಂದು ಲೇಬಲ್ ಮಾಡಲಾದ ಲಿಂಕ್ ಅನ್ನು ಹುಡುಕಿ ಮತ್ತು ಕ್ಲಿಕ್ ಮಾಡಿ.

ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್​ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 17, 17ರಂದು ಒಟ್ಟು 775 ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಿದ್ದು, ಇದರ ಫಲಿತಾಂಶ ಪ್ರಟಕವಾಗಲಿದೆ. ಕರ್ನಾಟಕದಾದ್ಯಂತ ಇಂಜಿನಿಯರಿಂಗ್, ಫಾರ್ಮಸಿ ಮತ್ತು ಕೃಷಿ ಪದವಿಪೂರ್ವ ಕೋರ್ಸ್‌ಗಳ ಪ್ರವೇಶಕ್ಕೆ ನಿರ್ಣಾಯಕವಾಗಿದೆ.

ಸಿಇಟಿ ಫಲಿತಾಂಶ ಬಿಡುಗಡೆಯಾದ ನಂತರ, ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಅವರ ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ನಮೂದಿಸುವ ಮೂಲಕ cetonline.karnataka.gov.in ಅಥವಾ kea.kar.nic.in ನಲ್ಲಿ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.

ಸಿಇಟಿ ಫಲಿತಾಂಶ ಘೋಷಣೆಯ ನಂತರ KEA ಮೆರಿಟ್ ಪಟ್ಟಿಯನ್ನು ಪ್ರಕಟಿಸುತ್ತದೆ. ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ಇದರಲ್ಲಿ ನೋಂದಣಿ, ಆಯ್ಕೆ ಭರ್ತಿ, ಸೀಟು ಹಂಚಿಕೆ ಮತ್ತು ದಾಖಲೆ ಪರಿಶೀಲನೆ ಸೇರಿವೆ.