ಕವಿಸಾಲು
Gm ಶುಭೋದಯ💐💐
*ಕವಿಸಾಲು*
1.
ನೋವು
ಯಾರ ಬಳಿ ಇಲ್ಲ;
ಕೆಲವರು
ಅಳುತ್ತಾ ಅಪ್ಪಿಕೊಳ್ಳುವರು
ಕೆಲವರು
ನಗುತ್ತಾ ಒಪ್ಪಿಕೊಳ್ಳುವರು…
2.
ನೆಮ್ಮದಿಯನ್ನೂ
ಹುಡುಕಬೇಕೆಂದರೆ…
ಅದಕ್ಕಿಂತ ದುಃಖದ
ಮಾತೇನಿದೆ ಹೃದಯವೇ?
3.
ನನ್ನ ಮತ್ತು ಮಣ್ಣಿನ
ಸಂಬಂಧ
ಮಸಣದಲ್ಲಷ್ಟೇ
ಅರ್ಥವಾಗುವುದು
ಹೃದಯವೇ…
4.
ಮಂಗನಿಂದ
ಮಾನವ
ಅಂದವರನ್ನು
ಸಿಟ್ಟಿಂದ ಹುಡುಕುತ್ತಿದೆ…
ಊಸರವಳ್ಳಿ!