ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಡಿ.ಸುರೇಶ್ ರಾವ್ ಪತ್ರಿಕಾಗೋಷ್ಠಿ; *ಮಂಗಳೂರು ಇನ್ಸಿಟ್ಯೂಟ್ ಆಫ್ ಅಂಕೋಲಾಜಿ ತೀರ್ಥಹಳ್ಳಿಯಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ್ ಯೋಜನೆ ಆರಂಭ*

ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಡಿ.ಸುರೇಶ್ ರಾವ್ ಪತ್ರಿಕಾಗೋಷ್ಠಿ;

*ಮಂಗಳೂರು ಇನ್ಸಿಟ್ಯೂಟ್ ಆಫ್ ಅಂಕೋಲಾಜಿ ತೀರ್ಥಹಳ್ಳಿಯಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ್ ಯೋಜನೆ ಆರಂಭ*

ಮಂಗಳೂರು ಎಂ.ಐ.ಓ ಮತ್ತು ಉಡುಪಿ ಡೇ ಕೇರ್ ಕ್ಯಾನ್ಸರ್ ಸೆಂಟರ್ ನ ಪರಂಪರೆಯನ್ನು ಮುಂದುವರಿಸುವ ವಿಶ್ವಾಸಾರ್ಹ ಕ್ಯಾನ್ಸರ್ ಆಸ್ಪತ್ರೆ, ಇದೀಗ ತೀರ್ಥಹಳ್ಳಿಯಲ್ಲಿ ಹೊಸದಾಗಿ ಪ್ರಾರಂಭಿಸಿರುವ ಎಂ.ಐ.ಓ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಸೇವೆಗಳನ್ನು ಪ್ರಾರಂಭಿಸಿರುವುದಾಗಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಡಿ.ಸುರೇಶ್ ರಾವ್ ರವರು ಇಂದು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ನೆರಟೂರು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ಥಾಪಿತವಾದ ಕರ್ನಾಟಕದಲ್ಲೇ ಮೊದಲ ಬಾರಿಗೆ ತಾಲ್ಲೂಕಿನ ಹಂತದಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ಥಾಪಿಸಲಾದ ಮೊದಲ ಕ್ಯಾನ್ಸರ್ ಆಸ್ಪತ್ರೆಯಾಗಿದ್ದು ಇದೊಂದು ಮಹತ್ವಪೂರ್ಣವಾದ ಮೈಲಿಗಲ್ಲಾಗಿದೆ ಎಂದರು.

ಇದರ ಮುಖ್ಯ ಉದ್ದೇಶವೇನೆಂದರೆ

ಬಿ.ಪಿ.ಎಲ್ (ಬಿಲೋ ಪಾವರ್ಟಿ ಲೈನ್) ಕಾರ್ಡ್ ಹೊಂದಿರುವ ರೋಗಿಗಳಿಗೆ ಉನ್ನತ ಮಟ್ಟದ, ಉಚಿತ ಕ್ಯಾನ್ಸರ್ ಚಿಕಿತ್ಸೆ ನೀಡುವುದು.

ಈ ಯೋಜನೆಯಲ್ಲಿ ಶಸ್ತ್ರ ಚಿಕಿತ್ಸೆ (ಸರ್ಜರಿ), ವಿಕಿರಣ ಚಿಕಿತ್ಸೆ (ರೇಡಿಯೇಶನ್), ಕಿಮೋಥೆರಪಿ, ಆಸ್ಪತ್ರೆ ವಾಸ್ತವ್ಯ ಮತ್ತು ದೈನಂದಿನ ಆಹಾರ ಸೇವೆ ಒಳಗೊಂಡಿರುತ್ತದೆ ಎಂದು ತಿಳಿಸಿದರು.

ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ನಮ್ಮ ಪರಿಣಿತ ವೈದ್ಯರ ತಂಡ ಪ್ರತೀ ರೋಗಿಗಳನ್ನು ಕೂಲಂಕುಷವಾಗಿ ವರಿಶೀಲಿಸಿ ಅವರಿಗೆ ಅಗತ್ಯವಾದ ಚಿಕಿತ್ಸೆಯನ್ನು ನೀಡಲು ಬದ್ಧರಾಗಿದ್ದಾರೆ ಎಂದರು.

ನೂತನವಾಗಿ ಆರಂಭವಾಗಿರುವ ಎಂ.ಐ.ಓ ತೀರ್ಥಹಳ್ಳಿಯು ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತರಾದ ತಜ್ಞರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಅದರಲ್ಲಿ ಪ್ರಮುಖರಾದವರು

1) ಡಾ. ಡಿ. ಸುರೇಶ್ ರಾವ್, ನಿರ್ದೇಶಕರು, ಇವರು ಕೆ ಎಂ ಸಿ ಮಣಿಪಾಲ್ ನಲ್ಲಿ ವಿದ್ಯಾಭ್ಯಾಸ ವನ್ನು ಮಾಡಿದ್ದು ವೈದ್ಯಕೀಯ ಕ್ಷೇತ್ರದಲ್ಲಿ ಭಾರತ ಮತ್ತು ವಿದೇಶಗಳಲ್ಲಿ 35 ವರ್ಷಕ್ಕೂ ಅಧಿಕ ಅನುಭವವನ್ನು ಹೊಂದಿದ್ದಾರೆ. ಇವರು ತೀರ್ಥಹಳ್ಳಿಯ ಬಿವರಗೋಡು

2) ಡಾ. ದಿವ್ಯ ಜ್ಯೋತಿ ಎನ್. ಶಸ್ತ್ರ ಚಿಕಿತ್ಸಕರು ಅಂಶೋಬೊಜಿಸ್ಟ್, ಇವರು ಫಾದರ್ ಮುಲ್ಲರ್ ಮತ್ತು ಬೆಂಗಳೂರು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ.

3) ಡಾ. ಭವ್ಯ ಕೆ ಪಿ ಕನ್ಸಲೆಂಟ್ ಶಸ್ತ್ರ ಚಿಕಿತ್ಸಕರು. ಇವರು ಕೆ ಎಂ ಸಿ ಮಣಿನಾಲ್ ನಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಮೂಲತಃ ಅರಗದವರು.

4) ಡಾ. ಸುಹಾನ್ ನಾವದ ಇವರು ಎಜೆ ಆಸ್ಪತ್ರೆಯಲ್ಲಿ ವಿದ್ಯಾಭ್ಯಾಸ, ಟಾಟಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಮೂಲತಃ ಕಮ್ಮರಡಿಯವರು.

5) ಡಾ. ಹೇಮಂತ್ ಕುಮಾರ್ ಮೆಡಿಕಲ್ ಅಂಶೋಲಾಜಿಸ್ಟ್, ಇವರು ಅದ್ಯಾರ್ ಕ್ಯಾನ್ಸರ್ ಸೆಂಟರ್ ಚೆನ್ನೈ ನಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ.

6) ಡಾ. ರೋಹನ್ ಚಂದ್ರ ಗಟ್ಟಿ ಸರ್ಜಿಕಲ್ ಅಂಕೋಲಾಜಿಸ್ಟ್,ಇವರು ಬಿ.ಸಿ.ಆರ್.ಐ ಆಸ್ಪತ್ರೆ ಗುಜರಾತ್ ನಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ.

ಇತ್ತೀಚೆಗೆ ಎಲ್ಲೆಡೆ ಕ್ಯಾನ್ಸರ್ ಹೆಚ್ಚುತ್ತಿರುವ ಕಾರಣಗಳ ಬಗ್ಗೆ ಡಾ.ಡಿ.ಸುರೇಶ್ ರಾವ್ ತಿಳಿಸುತ್ತ ಬಾಯಿಯ ಒಳಭಾಗದ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್ (ಈಸೋಫೆಗಸ್), ಜರರ ಕ್ಯಾನ್ಸರ್ (ಸ್ಟಮಕ್), ಬ್ಯಾಂಕ್ರಿಯಾಸ್ ಕ್ಯಾನ್ಸರ್, ಕರಳು ಕ್ಯಾನ್ಸರ್ (ಕೋಟೋರೆಕ್ಸಲ್), ಶ್ವಾಸಕೋಶ (ಲಂಗ್) ಕ್ಯಾನ್ಸರ್, ಸ್ತನ (ಟ್ರೆಸ್ಟ್) ಕ್ಯಾನ್ಸರ್, ಇವುಗಳ ಹೆಚ್ಚಳವು ಹಾಗೂ ಅಪಾಯಕಾರಿ ಜೀವನಶೈಲಿ ಮತ್ತು ಚಟಗಳ ಪರಿಣಾಮವಾಗಿದೆ.

ಮುಖ್ಯ ಕಾರಣಗಳು:-

ವಿವಿಧ ರೂಪದ ತಂಬಾಕು ಸೇವನೆ, ಮಿತಿಮೀರಿದ ಮಧ್ಯವಾನ, ಅಡಿಕೆ, ಗುಬ್ಬಾ, ಲೈಮ್, ತಂಬಾಕು ಮಿಶ್ರಣಗಳ ಹೆಚ್ಚಿನ ಸೇವನೆ, ಕೆಟ್ಟ ಅಹಾರ ಪದ್ಧತಿ. ಈ ಕಾರಣಗಳು ವೈಯಕ್ತಿಕ ಆರೋಗ್ಯಕ್ಕೆ ಭೀಕರ ಪರಿಣಾಮ ಉಂಟುಮಾಡುತ್ತಿದೆ, ವಿಶೇಷವಾಗಿ ಯುವಜನರಲ್ಲಿ ಕ್ಯಾನ್ಸರ್ ಕಂಡುಬರುವ ಪ್ರಬಲ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.

ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಮುನ್ನೆಚ್ಚರಿಕಾ ಕ್ರಮಗಳು:-

ಎಂ.ಐ.ಓ ತೀರ್ಥಹಳ್ಳಿಯು ಸಾರ್ವಜನಿಕರಿಗೆ ಈ ಕೆಳಗಿನ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲು ಕೋರಿದೆ.

1. ಅಪಾಯಕಾರಿ ಚಟ ವಸ್ತುಗಳನ್ನು ಮಿತಗೊಳಿಸುವುದು

2 ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು

3. ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದು

4. ಕ್ಯಾನ್ಸರ್ ಬಗ್ಗೆ ಅರಿವನ್ನು ಹೊಂದುವುದು

5. ಭಯವನ್ನು ದೂರವಿಟ್ಟು ತ್ವರಿತ ಚಿಕಿತ್ಸೆಯನ್ನು ಪಡೆಯುವುದು.

ಸಮಾನತೆಯ ಚಿಕಿತ್ಸೆ :-

ಎಂ.ಐ.ಓ ತೀರ್ಥಹಳ್ಳಿಯು ಎಲ್ಲಾ ನಾಗರೀಕರಿಗೆ ವಿಶ್ವಮಟ್ಟದ ಕ್ಯಾನ್ಸರ್ ಸೇವೆ ಒದಗಿಸಲು ಬದ್ಧವಾಗಿದೆ.

ಆಯುಷ್ಮಾನ್ ಭಾರತ್ ಯೋಜನೆಯು ಆರಂಭಗೊಂಡಿರುವುದು ಗ್ರಾಮೀಣ ಕರ್ನಾಟಕದ ಸಮಾನ ಚಿಕಿತ್ಸೆಗಾಗಿ ಮಹತ್ತರ ಹೆಜ್ಜೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಆಡಾಳಿತಾಧಿಕಾರಿಗಳನ್ನು ಸಂಪರ್ಕಿಸಿ ಅಥವಾ ಎಂ.ಐ.ಓ ತೀರ್ಥಹಳ್ಳಿ ಆಸ್ಪತ್ರೆಗೆ ಭೇಟಿ ನೀಡಬಹುದು ಎಂದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ವ್ಯಕ್ತಿ:
ಜಗದೀಶ್/ ಅಂಕುಶ್
9980813910/
8762096205
ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ನೆರಟೂರು ಗ್ರಾಮದಲ್ಲಿ ಸುಸಜ್ಜಿತವಾದ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದಂತಹ ಎಲ್ಲಾ ಜನತೆಗೂ ಎಂ.ಐ.ಓ ಆಸ್ಪತ್ರೆ, ಸಿಬ್ಬಂದಿ ವರ್ಗ ಹಾಗೂ ರೋಗಿಗಳು ಮತ್ತು ಕುಟುಂಬ ಸದಸ್ಯರುಗಳಿಂದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ ಎಂದು ಡಾ.ಡಿ.ಸುರೇಶ್ ರಾವ್ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ವೈದ್ಯರಾದ ಡಾ. ಸುರೇಶ್ ರಾವ್, ಡಾ. ದಿವ್ಯ ಜ್ಯೋತಿ ಎನ್. ಡಾ. ಸುಹಾಸ್ ನಾವಡ ಹಾಗೂ ಕ್ಯಾನ್ಸರ್ ಜನಜಾಗೃತಿ ಅಭಿಯಾನದ ಮುಖ್ಯ ಸಂಯೋಜಕರಾದ ಆ.ನಾ.ವಿಜಯೇಂದ್ರ ರಾವ್ ಉಪಸ್ಥಿತರಿದ್ದರು.