ಪತ್ರಿಕಾಗೋಷ್ಠಿಯಲ್ಲಿ ಕೆ.ಇ.ಕಾಂತೇಶ್* *ಕರ್ನಾಟಕ ಸರ್ಕಾರದ ವಸತಿ ಜಿಹಾದ್ ವಿರೋಧಿಸಿ ರಾಷ್ಟ್ರಭಕ್ತರ ಬಳಗ ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲಿ ಜೂನ್ 25 ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗದ ರಾಮಣ್ಣ ಶೆಟ್ಟಿ ಪಾರ್ಕ್‌ನಿಂದ ಶಿವಪ್ಪನಾಯಕ ವೃತ್ತದವರೆಗೆ ಬೃಹತ್ ಪ್ರತಿಭಟನೆ*

*ಪತ್ರಿಕಾಗೋಷ್ಠಿಯಲ್ಲಿ ಕೆ.ಇ.ಕಾಂತೇಶ್*

*ಕರ್ನಾಟಕ ಸರ್ಕಾರದ ವಸತಿ ಜಿಹಾದ್ ವಿರೋಧಿಸಿ ರಾಷ್ಟ್ರಭಕ್ತರ ಬಳಗ ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲಿ ಜೂನ್ 25 ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗದ ರಾಮಣ್ಣ ಶೆಟ್ಟಿ ಪಾರ್ಕ್‌ನಿಂದ ಶಿವಪ್ಪನಾಯಕ ವೃತ್ತದವರೆಗೆ ಬೃಹತ್ ಪ್ರತಿಭಟನೆ*

ದೇಶದಲ್ಲಿ ಹಿಂದೂ ಯುವತಿಯರನ್ನು ಗುರಿಯಾಗಿರಿಸಿಕೊಂಡು ಮತಾಂದ ಮುಸ್ಲಿಮ್ ಯುವಕರು `ಲವ್ ಜಿಹಾದ್ ಮೂಲಕ ಹಿಂದೂಗಳನ್ನು ನಾಶ ಮಾಡಿ ಭಾರತವನ್ನು ಇಸ್ಲಾಮೀಕರಣ ಮಾಡಲು ಹೊರಟಿರುವಾಗ ಕರ್ನಾಟಕ ರಾಜ್ಯ ಸರ್ಕಾರ ಮುಸ್ಲಿಮರನ್ನು ಓಲೈಸಿಕೊಂಡು ತುಷ್ಟೀಕರಣದ ರಾಜಕೀಯ ಮಾಡಿ ಮತಬ್ಯಾಂಕ್ ಗಟ್ಟಿಗೊಳಿಸಲು ಈಗ ವಸತಿ ಜಿಹಾದ್ ಮಾಡಲು ಹೊರಟಿದೆ ಎಂದು ಕೆ.ಇ.ಕಾಂತೇಶ್ ಹೇಳಿದರು.

ಈ ಹಿಂದೆ ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿ ಇನ್ನುಳಿದ ಧರ್ಮೀಯರಿಗೆ ಅನ್ಯಾಯ ಮಾಡಿದ್ದ ಸಿದ್ದರಾಮಯ್ಯನವರ ಸರ್ಕಾರ ಈಗ ವಸತಿ ಯೋಜನೆಯಡಿಯಲ್ಲಿ ನಿರ್ಮಾಣವಾಗುವ ಮನೆಗಳಲ್ಲಿ ಮುಸ್ಲಿಮರಿಗೆ 15% ಮೀಸಲಿಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿದೆ. ಬುದ್ಧ, ಬಸವ, ಅಂಬೇಡ್ಕರ್ ಎಂದು ಬೊಗಳೆ ಬಿಡುವ ಸಿದ್ದರಾಮಯ್ಯನವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ವಿರೋಧಿಸಿದ್ದ ಧರ್ಮಾದಾರಿತ ಮೀಸಲಾತಿ ಯನ್ನು ಅವರ ತತ್ವಕ್ಕೆ ತಿಲಾಂಜಲಿ ಇಟ್ಟು ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ಜಾರಿಗೆ ತರುವ ಮೂಲಕ ಅಂಬೇಡ್ಕರ್ ಅವರಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿದರು.

ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ರಾಯಭಾರಿಯನ್ನಾಗಿಸಿದ ಸರ್ಕಾರ, ಈಗ ಅಣ್ಣನ ಆಶಯವಾಗಿದ್ದ `ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಎಂಬ ಮಾತನ್ನು ಈಗ ಸರ್ವವೂ ಸಾಬರ ಪಾಲು” ಎಂದು ನಿರೂಪಿಸಲು ಹೊರಟಿದೆ ಎಂದು ಟೀಕಿಸಿದರು.

ಹಿಂದುಳಿದ ವರ್ಗಗಳ, ದಲಿತರ ಉದ್ದಾರಕ ಎಂದು ಹೇಳಿಕೊಂಡು ಅಧಿಕಾರಕ್ಕೇರಿದ ಸಿದ್ದರಾಮಯ್ಯನವರು ಈಗ ಪರಿತಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ, ದಲಿತ ಸಮೂದಾಯದ ಬಡವರಿಗಾಗಿ ವಸತಿ ಯೋಜನೆಯಲ್ಲಿ ನಿರ್ಮಿಸುವ ಮನೆಗಳಲ್ಲಿ ಅಲ್ಪಸಂಖ್ಯಾತರಿಗೆ 15% ಮನೆಗಳನ್ನು ಮೀಸಲಿಡಲು ಹೊರಟಿರುವುದು ಈ ಸಮೂದಾಯಗಳಿಗೆ ಮಾಡುತ್ತಿರುವ ಘೋರ ಅನ್ಯಾಯ ಸರ್ಕಾರದ ಈ ನಿರ್ಧಾರ ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗಾಗಿಯೇ ಸಂವಿಧಾನವು ಕಲ್ಪಿಸಿರುವ ಮೀಸಲಾತಿ ವ್ಯವಸ್ಥೆಯ ಸ್ಪಷ್ಟ ದುರ್ಬಳಕೆಯಾಗಿದೆ. ಈಗಾಗಲೇ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿಯೇ 1000 ಕೋಟಿ ಹಣವನ್ನು ಮೀಸಲಿಡಲಾಗಿದೆ. ಆದರೂ ಈಗ ಬಡವರಿಗಾಗಿ ಮೀಸಲಿರುವ ಮನೆಗಳನ್ನು ಕಿತ್ತು ಅಲ್ಪಸಂಖ್ಯಾತರಿಗೆ ಹಂಚಲು ಹೊರಟಿರುವ ಸರ್ಕಾರದ ನಡೆ ಖಂಡನೀಯ ಎಂದರು.

ಈ ಹಿಂದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಳ ಅಭಿವೃದ್ಧಿಗೆ ಮೀಸಲಿಟ್ಟ ಸಾವಿರಾರು ಕೋಟಿ ಹಣವನ್ನು ‘ಗ್ಯಾರಂಟ ಯೋಜನೆಗೆ ಬಳಸಿಕೊಂಡು ಅನ್ಯಾಯ ಮಾಡಿದ ಸಿದ್ದರಾಮಯ್ಯ ಸರ್ಕಾರ ಈಗ ವಸತಿ ಯೋಜನೆಯ ಮನೆಗಳನ್ನು ಈ ಸಮುದಾಯದ ಜನರಿಂದ ಕಸಿದುಕೊಂಡು ಅಲ್ಪಸಂಖ್ಯಾತರಿಗೆ ವಿತರಿಸಲು ಹೊರಟಿದೆ. ಸರ್ಕಾರ ಇಷ್ಟೆಲ್ಲಾ ಅನ್ಯಾಯ ಮಾಡುತ್ತಿದ್ದರೂ ಆ ಸಮುದಾಯಕ್ಕೆ ಸೇರಿದ ಮಂತ್ರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಆಶ್ಚರ್ಯ ಮೂಡಿಸಿದೆ. ರಾಜ್ಯ ಸರ್ಕಾರ ಸಂವಿಧಾನ ವಿರೋಧಿಯಾದ ತನ್ನ ಈ ನಿರ್ದಾರವನ್ನು ಕೂಡಲೆ ಹಿಂಪಡೆಯಬೇಕು ಹಾಗೂ ಹಿಂದುಳಿದ. ದಲಿತ ಬಡವರ ಹಿತ ಕಾಪಾಡುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಸಮಾಜದ ಏಳಿಗೆಗೆ ಒತ್ತು ನೀಡಬೇಕು ಎಂಬ ಬೇಡಿಕೆಯನ್ನಿಟ್ಟು ರಾಷ್ಟ್ರಭಕ್ತರ ಬಳಗ ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲಿ ಜೂನ್ 25 ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗದ ರಾಮಣ್ಣ ಶೆಟ್ಟಿ ಪಾರ್ಕ್‌ನಿಂದ ಶಿವಪ್ಪನಾಯಕ ವೃತ್ತದವರೆಗೆ ಬೃಹತ್ ಪ್ರತಿಭಟನೆಯನ್ನು ನಡೆಸುತ್ತಿದೆ.

ಇದು ಸರ್ಕಾರಕ್ಕೆ ಮೊದಲ ಎಚ್ಚರಿಕೆಯಾಗಿದ್ದು ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ; ಎಂ.ಶಂಕರ್, ವಿಶ್ವಾಸ್, ಜಾಧವ್, ಕುಬೇರಪ್ಪ, ಚನ್ನಬಸಪ್ಪ, ಗೋವಿಂದಪ್ಪ, ಶಂಕರನಾಯ್ಕ ಸೇರಿದಂತೆ ಹಲವರಿದ್ದರು.