ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್, ತಜ್ಞ ವೈದ್ಯರುಗಳಾದ ಡಾ.ಪೃಥ್ವಿ, ಡಾ.ದಯಾನಂದ್ ಜಂಟಿ ಪತ್ರಿಕಾಗೋಷ್ಠಿ* *ಪತ್ರಕರ್ತರ ಸಂಘದಿಂದ ಜು.6 ರಂದು ಇಡೀ ದಿನ ಪತ್ರಕರ್ತರು- ಅವರ ಕುಟುಂಬದವರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ*

*ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್, ತಜ್ಞ ವೈದ್ಯರುಗಳಾದ ಡಾ.ಪೃಥ್ವಿ, ಡಾ.ದಯಾನಂದ್ ಜಂಟಿ ಪತ್ರಿಕಾಗೋಷ್ಠಿ*

*ಪತ್ರಕರ್ತರ ಸಂಘದಿಂದ ಜು.6 ರಂದು ಇಡೀ ದಿನ ಪತ್ರಕರ್ತರು- ಅವರ ಕುಟುಂಬದವರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ*

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ವತಿಯಿಂದ ಜುಲೈ 6ರ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಪತ್ರಕರ್ತರು, ಅವರ ಕುಟುಂಬ ವರ್ಗದವರು ಹಾಗೂ ಪತ್ರಿಕಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್, ತಜ್ಞ ವೈದ್ಯರುಗಳಾದ ಡಾ.ಪೃಥ್ವಿ, ಡಾ.ದಯಾನಂದ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಶಿಬಿರದಲ್ಲಿ ರಕ್ತದೊತ್ತಡ (ಬಿಪಿ), ಇಸಿಜಿ, ಇಕೋ, ಪಲ್ಸ್, ಸ್ಯಾಚ್ಯುರೇಷನ್, ಸಿಬಿಸಿ, ಆರ್‌ಬಿಎಸ್, ಮೂತ್ರ ಪಿಂಡ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ತಜ್ಞ ವೈದ್ಯರು ನಡೆಸಲಿದ್ದಾರೆ. ವಿಶೇಷವಾಗಿ ಮಹಿಳೆಯರಿಗೆ ಸಂಬಂಧಿಸಿದ ಕಾಯಿಲೆಗಳ ಕುರಿತಾಗಿಯೂ ತಪಾಸಣೆ ನಡೆಯಲಿದೆ ಎಂದರು.

ನಗರದ ಪ್ರತಿಷ್ಠಿತ ಮೆಟ್ರೋ ಆಸ್ಪತ್ರೆ, ಮಾತೃ ವಾತ್ಸಲ್ಯ ಆಸ್ಪತ್ರೆ, ಹೃದಯ ಸ್ಪೆಷಾಲಿಟಿ ಕ್ಲೀನಿಕ್, ಕ್ರಿಷ ಕಿಡ್ನಿ ಕೇರ್ ಸೆಂಟರ್ ಕೈಜೋಡಿಸಿದ್ದು, ತಜ್ಞ ವೈದ್ಯರುಗಳಾದ ಡಾ. ಪೃಥ್ವಿ, ಡಾ. ದಯಾನಂದ್, ಡಾ.ನಾಗಮಣಿಯವರು ಪಾಲ್ಗೊಳ್ಳಲಿದ್ದಾರೆ.

ಈ ಆರೋಗ್ಯ ಶಿಬಿರವನ್ನು ವಿಧಾನ ಪರಿಷತ್ ಸದಸ್ಯೆ ಬಲ್ಮೀಶ್ ಬಾನುರವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್. ಎಸ್. ಸುಂದರೇಶ್, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ. ವಿ. ಶಿವಕುಮಾರ್ ವಹಿಸಲಿದ್ದಾರೆ. ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್, ಸಂಘದ ಪ್ರಧಾನ ಕಾರ್ಯದರ್ಶಿ ಪಿ. ಟಿ. ಅರುಣ್ ಉಪಸ್ಥಿತರಿರಲಿದ್ದಾರೆ.

ಜಿಲ್ಲೆಯ ಪತ್ರಕರ್ತರು, ಅವರ ಕುಟುಂಬ ವರ್ಗದವರು ಹಾಗೂ ಪತ್ರಿಕಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಅದರ ಪ್ರಯೋಜನ ಪಡೆಯುವಂತೆ ಕೋರಲಾಗಿದ್ದು, ತಪಾಸಣೆಗೆ ಬರುವಾಗ, ತಮ್ಮ ತಮ್ಮ ಆಧಾರ್ ಕಾರ್ಡ್, ಸಂಘದ ಸದಸ್ಯತ್ವ ಕಾರ್ಡ್‌ಗಳನ್ನು ಕಡ್ಡಾಯವಾಗಿ ತರುವಂತೆ ಸೂಚಿಸಲಾಗಿದೆ.