ಈ ರವಿಕೆ ನಿಮ್ಮದ್ದೂ ಆಗಲಿ

ಈ ರವಿಕೆ ನಿಮ್ಮದ್ದೂ ಆಗಲಿ
—-

‘ಈ ರವಿಕೆ ನಿಮ್ಮದ್ದೂ ಆಗಲಿ’ ಎಂದೆ.

ನನ್ನ ಮುಂದೆ ಇದ್ದವರು ಸಂತೋಷ್ ಕೊಡೆಂಕೇರಿ ಹಾಗೂ ಪಾವನಾ
ಇಬ್ಬರೂ ನನ್ನ ಹಿಂದಿನ ಜನ್ಮದಿಂದಲೇ ಪರೀಚಿತರೇನೋ ಎನ್ನುವಷ್ಟು ಆಪ್ತರು.
ಪಾವನಾ ನನ್ನೊಂದಿಗೆ ಸಮಯ ಚಾನಲ್ ನಲ್ಲಿ anchor ಆಗಿದ್ದವರು.

ಈ ಇಬ್ಬರಿಗೂ ಬತ್ತದ ಉತ್ಸಾಹ. ಇನ್ನಿಲ್ಲದ ಕನಸುಗಳು. ಹಾಗಾಗಿಯೇ ಇವರು ಸಿನೆಮಾ ಎಂಬ ಮರೀಚಿಕೆಯನ್ನು ಹೇಗಾದರೂ ಹಿಡಿದು ಪಳಗಿಸುವ ಪಯಣ ತೊಟ್ಟಿದ್ದಾರೆ. ಸುಳ್ಯ ಹಾಗೂ ಕೊಡಗಿನ ಈ ಜೋಡಿ ನನ್ನ ಫೇವರೈಟ್ ವ್ಯಾಲೆಂಟೈನ್ ಗಳು.

ಈ ಇಬ್ಬರೂ ಅತ್ಯಂತ ಹುಮ್ಮಸ್ಸಿನಿಂದ ರೂಪಿಸಿರುವ ‘ರವಿಕೆ ಪ್ರಸಂಗ’ ಇನ್ನೆರಡು ದಿನಗಳಲ್ಲಿ ಥಿಯೇಟರ್ ನಲ್ಲಿ ಕಾಣಿಸಿಕೊಳ್ಳಲಿದೆ
ಪಾವನಾ ಕಥೆ- ಚಿತ್ರಕತೆ ಬರೆದರೆ, ಸಂತೋಷ್ ಅದನ್ನು ನಿರ್ದೇಶಿಸಿದ್ದಾರೆ.

ಇವರು ರವಿಕೆ ಪ್ರಸಂಗ ಎನ್ನುವ ಸಿನೆಮಾ ಸಿದ್ಧ ಮಾಡಿದ್ದೇವೆ ಎಂದು ಫೋನ್ ಮಾಡಿದಾಗಲೇ ನನ್ನ ಕಿವಿ ಚೂರುಕಾಯಿತು. ರವಿಕೇನಾ.. ಅಂದೆ ಹೌದು ರವಿಕೇನೆ ಎಂದು ಪಾವನಾ ನಕ್ಕರು.

ನನಗೆ ಪಾವನಾ ಹಾಗೂ ಸಂತೋಷ ಜೋಡಿ ಇಷ್ಟವಾಗುವುದು ಈ ಕಾರಣಕ್ಕಾಗಿಯೇ. ನಾವು ಚಂದ್ರಯಾನ ಬಗ್ಗೆ ಮಾತಾಡುತ್ತೇವೆ, ಚಂದ್ರಯಾನ-3 ನ್ನೂ appreciate ಮಾಡುತ್ತೇವೆ ಆದರೆ ರವಿಕೆ ಬಗ್ಗೆ ಮಾತನಾಡಲು ಹಿಂಜರಿಯುತ್ತೇವೆ. ಇಂತಹ ಸಮಯದಲ್ಲಿ ಈ ಜೋಡಿ ರವಿಕೆ ಪ್ರಸಂಗವನ್ನು ನಮ್ಮೆದುರು ತರುತ್ತಿದೆ.

ನನಗೆ ಖುಷಿಯಾಗಿದ್ದು ಈ ದಿನಮಾನಕ್ಕೆ ಬೇಕಾದ ವಿಷಯಗಳನ್ನು ತೆರೆಯ ಮೇಲೆ ತರುತ್ತಿರುವುದಕ್ಕಾಗಿ. ಇವತ್ತಿನ ಕಾಲವನ್ನು ಕಟ್ಟಿಕೊಡುವ ತುರ್ತು ಇದೆ.

ತಮ್ಮ ‘ದೃಷ್ಟಿ ಮೀಡಿಯಾ’ ಮೂಲಕ ಈ ಇಬ್ಬರೂ ಇಂತಹ ಪಯಣದಲ್ಲಿ ಭಾಗಿಯಯಾಗಿದ್ದಾರೆ ಎನ್ನುವುದು ನನಗೆ ಸಂತೋಷ ತಂದಿದೆ. ಇವರ ‘ಹೋಂ ಸ್ಟೇ’ ಸಿನೆಮಾ ಸಹಾ ಸಾಕಷ್ಟು ಸುದ್ದಿ ಮಾಡಿತ್ತು. ಈಗ ‘ರವಿಕೆ ಪ್ರಸಂಗ’ವನ್ನು ಅವರು promote ಮಾಡಿರುವ ರೀತಿ ಯಾವುದೇ ಹೊಸ ನಿರ್ದೇಶಕರಿಗೆ ಮಾದರಿ.

ನೀವೆಲ್ಲರೂ theatre ಗೆ ಹೋಗಿ ರವಿಕೆ ಪ್ರಸಂಗವನ್ನು ನಿಮ್ಮದಾಗಿಸಿಕೊಳ್ಳಿ