ಡೇಟಿಂಗ್​ ಆ್ಯಪ್​;* *ಹನಿಟ್ರ್ಯಾಪ್!* *ಸುಂದರಿಯೊಬ್ಬಳ ಭೀಕರ ಜಾಲದಲ್ಲಿ ಸಿಲುಕಿದ ಟೆಕ್ಕಿ!!*

*ಡೇಟಿಂಗ್​ ಆ್ಯಪ್​;*
*ಹನಿಟ್ರ್ಯಾಪ್!*

*ಸುಂದರಿಯೊಬ್ಬಳ ಭೀಕರ ಜಾಲದಲ್ಲಿ ಸಿಲುಕಿದ ಟೆಕ್ಕಿ!!*

ಹನಿಟ್ರ್ಯಾಪ್ (Honeytrap) ಹೆಸರಿನಲ್ಲಿ ದರೋಡೆ ಮಾಡುತ್ತಿದ್ದ 6 ಜನರನ್ನು ಬೆಂಗಳೂರಿನ (Bengaluru) ಯಲಹಂಕ ನ್ಯೂಟೌನ್ ಪೊಲೀಸರು ಬಂಧಸಿದ್ದಾರೆ. ಶರಣಬಸಪ್ಪ, ರಾಜು ಮಾನೆ, ಶ್ಯಾಮ್ ಸುಂದರ್, ಅಭಿಷೇಕ್, ಬೀರಬಲ್ ಹಾಗೂ ಸಂಗೀತಾ ಬಂಧಿತ ಆರೋಪಿಗಳು. ಆರೋಪಿಗಳು ಹನಿಟ್ರ್ಯಾಪ್​ ಹೆಸರಿನಲ್ಲಿ ಟೆಕ್ಕಿ ರಾಕೇಶ್ ರೆಡ್ಡಿ ಎಂಬುವರಿಂದ 2 ಲಕ್ಷ ರೂ. ಸುಲಿಗೆ ಮಾಡಿದ್ದರು. ಆರೋಪಿ ಸಂಗೀತಾ ಪಂಬಲ್ ಎಂಬ ಡೇಟಿಂಗ್ ಆ್ಯಪ್ ಮೂಲಕ ಸಂತ್ರಸ್ತ ರಾಕೇಶ್ ರೆಡ್ಡಿ ಅವರನ್ನು ಪರಿಚಯ ಮಾಡಿಕೊಂಡಿದ್ದಾಳೆ.

ನಂತರ, ರಾಕೇಶ್​ ರೆಡ್ಡಿ ಅವರನ್ನು ರೂಂ​ಗೆ ಕರೆಸಿಕೊಂಡು ಮದ್ಯಪಾನ ಮಾಡಿಸಿದ್ದಾಳೆ. ಇದೇ ವೇಳೆ ರೂಂಗೆ ಉಳಿದ ಆರೋಪಿಗಳು ಎಂಟ್ರಿ ಕೊಟ್ಟಿದ್ದಾರೆ. ಬಳಿಕ, ಸಂಗೀತಾಳ ಬ್ಯಾಗ್​ನಲ್ಲಿದ್ದ ಬೇಕಿಂಗ್ ಸೋಡಾವನ್ನು ತೋರಿಸಿ, “ನೀವು ಡ್ರಗ್ ಪಾರ್ಟಿ ಮಾಡುತ್ತಿದ್ದೀರಾ? ನಿಮ್ಮನ್ನು ಪೊಲೀಸರಿಗೆ ಹಿಡಿದು ಕೊಡುತ್ತೇವೆ” ಎಂದು ರಾಕೇಶ್​ ರೆಡ್ಡಿ ಅವರಿಗೆ ಬೆದರಿಕೆ ಹಾಕಿದ್ದಾರೆ. ಹೀಗೆ ಬೆದರಿಸಿ ರಾಕೇಶ್ ರೆಡ್ಡಿ ಅವರಿಂದ ಆರೋಪಿಗಳು ಎರಡು ಲಕ್ಷ ಹಣ ದರೋಡೆ ಮಾಡಿದ್ದಾರೆ. ಈ ಬಗ್ಗೆ ಟೆಕ್ಕಿ ರಾಕೇಶ್​ ರೆಡ್ಡಿ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ.