ಕೌಟುಂಬಿಕ ಹಿಂಸೆಯಿಂದ ನೇಣು ಬಿಗಿದುಕೊಂಡು ಸಾವು ಕಂಡಿದ್ದ ಮಹಿಳೆ- ಗಂಡ ಮತ್ತು ಅತ್ತೆಗೆ ಜೈಲು ಶಿಕ್ಷೆ ನೀಡಿದ ಕೋರ್ಟ್*
*ಕೌಟುಂಬಿಕ ಹಿಂಸೆಯಿಂದ ನೇಣು ಬಿಗಿದುಕೊಂಡು ಸಾವು ಕಂಡಿದ್ದ ಮಹಿಳೆ- ಗಂಡ ಮತ್ತು ಅತ್ತೆಗೆ ಜೈಲು ಶಿಕ್ಷೆ ನೀಡಿದ ಕೋರ್ಟ್*
ಮಹಿಳೆಗೆ ಹಿಂಸೆ ನೀಡಿ ಆಕೆಯ ಸಾವಿಗೆ ಕಾರಣರಾಗಿದ್ದ ಆಕೆಯ ಗಂಡ ಮತ್ತು ಅತ್ತೆಗೆ ಜೈಲು ಶಿಕ್ಷೆ ನೀಡಿ ನ್ಯಾಯಾಲಯ ಆದೇಶಿಸಿದೆ.
ಚನ್ನಗಿರಿ ತಾಲ್ಲೂಕು ಅಜ್ಜಿಹಳ್ಳಿ ವಾಸಿಯಾದ ಆರೋಪಿ ಪೃಥ್ವಿರಾಜ್ ಗೆ ವರದಕ್ಷಿಣೆ ವರೋಪಚಾರ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು.
ಆರೋಪಿ ಮತ್ತು ಆತನ ತಾಯಿ ಇಬ್ಬರೂ ವರದಕ್ಷಿಣೆ ತರುವಂತೆ ಮಾನಸಿಕವಾಗಿ ಮತ್ತು ಧೈಹಿಕವಾಗಿ ಹಿಂಸೆ ಮತ್ತು ಕಿರುಕುಳ ನೀಡುತ್ತಿದ್ದು, 2022ರ ಜೂ.16 ರಂದು ರಾತ್ರಿ ಮನನೊಂದು ನೇಣು ಬಿಗಿದುಕೊಂಡು ಮಹಿಳೆ ಮೃತ ಪಟ್ಟಿದ್ದಳು.
ಈ ಬಗ್ಗೆ ತುಂಗಾನಗರ ಪೊಲೀಸ್ ಠಾಣೆ ಗುನ್ನೆ ನಂ 286/2022 ಕಲಂ 498(ಎ), 304(b) ಸಹಿತ 34 ಐಪಿಸಿ, 3 & 4 ಡಿಪಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಮಂಜುನಾಥ್ ಪಿ.ಐ.ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶಾಂತರಾಜ್ ರವರು ವಾದ ಮಂಡಿಸಿದ್ದು, 3 ನೇ ಹೆಚ್ಚುವರಿ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು.
ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಯಶವಂತ ಕುಮಾರ್ ರವರು ಇದೇ ಜ.24 ರಂದು 1 ನೇ ಆರೋಪಿ ಪೃಥ್ವಿರಾಜ್@ ಪೃಥ್ವಿ ಬಿನ್ ಲೇಟ್ ಚಂದ್ರಪ್ಪ (33 ವರ್ಷ, ವಾಸ 2 ನೇ ತಿರುವು, ಕೆ.ಹೆಚ್ಬಿ ಕಾಲೋನಿ, ಗೋಪಿಶೆಟ್ಟಿಕೊಪ್ಪ) ಈತನಿಗೆ ಕಲಂ 498(ಎ), 306 ಐಪಿಸಿ ಕಾಯಿದೆಗೆ 5 ವರ್ಷ ಕಠಿಣ ಕಾರಾವಾಸ ಮತ್ತು 7000 ರೂ ದಂಡವನ್ನು ವಿಧಿಸಿದ್ದು, ದಂಡ ತಪ್ಪಿದ್ದಲ್ಲಿ 1 ವರ್ಷ ಸಾಧಾರಣ ಸಜೆ ಮತ್ತು 2 ನೇ ಆರೋಪಿ ಪುಷ್ಪಾ ಟಿ. ಕೋಂ ಲೇಟ್ ಚಂದ್ರಪ್ಪ, (58 ವರ್ಷ ವಾಸ 2 ನೇ ತಿರುವು, ಕೆ.ಹೆಚ್ಬಿ ಕಾಲೋನಿ, ಗೋಪಿಶೆಟ್ಟಿಕೊಪ್ಪ) ಈಕೆಗೆ ಕಲಂ 498(ಎ),306 ಕಾಯಿದೆಗಳಿಗೆ 3 ವರ್ಷ ಸಜೆ ಮತ್ತು 4000 ರೂ ದಂಡ ವಿಧಿಸಿದ್ದು, ದಂಡ ತಪ್ಪಿದ್ದಲ್ಲಿ 3 ತಿಂಗಳು ಸಾದಾ ಸಜೆಯನ್ನು* ಅನುಭವಿಸತಕ್ಕದ್ದು ಎಂದು ಆದೇಶಿಸಿದೆ.


