ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC) ಹೊಸ ಲಗೇಜ್ ರೂಲ್ಸ್!* *ವಾಷಿಂಗ್ ಮಿಷಿನ್- ಫ್ರಿಡ್ಜ್- ಕಂಟೈನರ್ ಕೂಡ ಕೆಂಪು ಬಸ್ಸಲ್ಲಿ ಸಾಗಿಸಬಹುದು!* *ಮೊಲ- ನಾಯಿ- ಬೆಕ್ಕು- ಪಕ್ಷಿಗಳ ಸಾಗಾಟಕ್ಕೂ ಜೈ ಎಂದ KSRTC*

*ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC) ಹೊಸ ಲಗೇಜ್ ರೂಲ್ಸ್!*

*ವಾಷಿಂಗ್ ಮಿಷಿನ್- ಫ್ರಿಡ್ಜ್- ಕಂಟೈನರ್ ಕೂಡ ಕೆಂಪು ಬಸ್ಸಲ್ಲಿ ಸಾಗಿಸಬಹುದು!*

*ಮೊಲ- ನಾಯಿ- ಬೆಕ್ಕು- ಪಕ್ಷಿಗಳ ಸಾಗಾಟಕ್ಕೂ ಜೈ ಎಂದ KSRTC*

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ನೂತನ ಲಗೇಜ್ ರೂಲ್ಸ್ (KSRTC New Luggage Rules) ಬಿಡುಗಡೆ ಮಾಡಿದ್ದು, ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿಯಮದ ಪ್ರಕಾರ, ಕೆಎಸ್​ಆರ್​ಟಿಸಿ ಬಸ್​​ನಲ್ಲಿ ಮೂವತ್ತು ಕೆಜಿಯವರೆಗೂ ಪ್ರಯಾಣಿಕರು ಉಚಿತವಾಗಿ ಲಗೇಜು ಉಚಿತವಾಗಿ ತೆಗೆದುಕೊಂಡು ಹೋಗಬಹುದಾಗಿದೆ. 30 ಕೆಜಿ ಮೇಲೆ ಲಗೇಜ್ ಇದ್ದರೆ ಹಣ ಪಾವತಿ ಮಾಡಬೇಕಿದೆ. 40 ಕೆಜಿ ತೂಕವಿರುವ ವಾಷಿಂಗ್ ಮಿಷಿನ್, ಫ್ರಿಡ್ಜ್, 25 ಕೆಜಿ ತೂಕದ ಖಾಲಿ ಕಂಟೈನರ್ ಬಸ್​​ನಲ್ಲಿ ಸಾಗಿಸಲೂ ಅವಕಾಶ ನೀಡಲಾಗಿದೆ.

ಕೆಎಸ್​ಆರ್​ಟಿಸಿ ಹೊಸ ನಿಯಮದ ಪ್ರಕಾರ, ಕಬ್ಬಿಣ ಪೈಪ್ ಮೋಟಾರ್​ಗಳನ್ನೂ ಸಾಗಿಸಬಹುದು ಎನ್ನಲಾಗಿದೆ. ಮೊಲ, ನಾಯಿ ಮರಿ, ಬೆಕ್ಕು, ಪಕ್ಷಿಯನ್ನೂ ಸಾಗಿಸಬಹದು. ನಾಯಿಯನ್ನು ಸಾಗಿಸಬಹುದು. ನಾಯಿಯನ್ನು ಚೈನ್​ನಲ್ಲಿ ಬಿಗಿದು ಕಾಳಜಿಯೊಂದಿಗೆ ಬಸ್​​ನಲ್ಲಿ ಸಾಗಿಸಬಹುದು.

ಈ ನಿಯಮಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್​​ನಲ್ಲಿ ಸಣ್ಣಪುಟ್ಟ ಮಕ್ಕಳು ಪ್ರಯಾಣ ಮಾಡುತ್ತಾರ. ಈ ವೇಳೆ, ಏನಾದರೂ ತಿನ್ನುವ ವೇಳೆ ಮಕ್ಕಳಿಗೆ ನಾಯಿ ಬಾಯಿ ಹಾಕಿದರೆ ಏನ್ ಕಥೆ? ಈ ನಿಯಮ ಸರಿಯಲ್ಲ ಎಂದು ಕೆಲವು ಮಂದಿ ಪ್ರಯಾಣಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಯಸ್ಕರು 30 ಕೆಜಿ, ಮಕ್ಕಳು 15 ಕೆಜಿ ತೂಕದ ಲಗ್ಗೇಜ್ ಬಸ್ಸಿನಲ್ಲಿ ಕೊಂಡೊಯ್ಯಬಹುದು. ನಾಲ್ಕೈದು ಜನರು ಒಟ್ಟಾಗಿ ಪ್ರಯಾಣಿಸಿದರೂ 30 ಕೆಜಿ ಲಗೇಜ್ ಮಾತ್ರ ಉಚಿತ ಎನ್ನಲಾಗಿದೆ.

ಕೆಎಸ್​ಆರ್​ಟಿಸಿ ಹೊಸ ಲಗೇಜ್ ನಿಯಮದಲ್ಲೇನಿದೆ?
30 ಕೆಜಿ ವರೆಗೆ ಲಗೇಜ್ ಕೊಂಡೊಯ್ಯಲು ಉಚಿತ ಅವಕಾಶ. ಅದಕ್ಕಿಂತ ಹೆಚ್ಚಿನ ಲಗೇಜ್​ಗೆ ದರ ನಿಗದಿ.
ವಾಷಿಂಗ್ ಮಷಿನ್, ಫ್ರಿಡ್ಜ್ ಕೊಂಡೊಯ್ಯಲೂ ಅವಕಾಶ.
ಟ್ರಕ್​​ನ ಟಯರ್​​​ಗಳನ್ನೂ ತೆಗೆದುಕೊಂಡು ಹೋಗಬಹುದು.
ಅಲ್ಯೂಮಿನಿಯಂ ಪೈಪ್, ಪಾತ್ರೆ ಕೊಂಡೊಯ್ಯಲೂ ಅವಕಾಶ.
ಕಬ್ಬಿಣದ ಪೈಪ್​​ಗಳನ್ನು ಸಾಗಿಸಲೂ ಅವಕಾಶ.
ಬೆಕ್ಕು, ನಾಯಿ, ಮೊಲವನ್ನೂ ಸಾಗಿಸಬಹುದು.

ಕೂಡಲೇ ಹೊಸ ಲಗೇಜ್ ನಿಯಮವನ್ನು ವಾಪಸ್ ಪಡೆಯಬೇಕು. ಹೊಸ ನಿಯಮದಿಂದ ಸಮಸ್ಯೆ ಆಗಲಿದೆ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ.