ಗೌರಿ ಗಣೇಶ- ಈದ್ ಮಿಲಾದ್ ಹಬ್ಬಗಳ ಹಿನ್ನೆಲೆ;* *ಕ್ರಿಮಿನಲ್ ವ್ಯಕ್ತಿಗಳ ವಿರುದ್ಧ ಪೊಲೀಸ್ ಡ್ರಿಲ್* *ಬಾಲ ಬಿಚ್ಚಿದರೆ ಹುಷಾರ್ ಎಂದ ಖಾಕಿ*

*ಗೌರಿ ಗಣೇಶ- ಈದ್ ಮಿಲಾದ್ ಹಬ್ಬಗಳ ಹಿನ್ನೆಲೆ;*

*ಕ್ರಿಮಿನಲ್ ವ್ಯಕ್ತಿಗಳ ವಿರುದ್ಧ ಪೊಲೀಸ್ ಡ್ರಿಲ್*

*ಬಾಲ ಬಿಚ್ಚಿದರೆ ಹುಷಾರ್ ಎಂದ ಖಾಕಿ*

*ಗೌರಿ ಗಣೇಶ ಹಾಗೂ ಈದ್ ಮಿಲಾದ್* ಹಬ್ಬಗಳ ಹಿನ್ನೆಲೆಯಲ್ಲಿ, *ಶಾಂತಿ ಸುವ್ಯವಸ್ಥೆ* ಕಾಪಾಡುವ ಉದ್ದೇಶದಿಂದ *ದುರ್ನಡತೆ ವ್ಯಕ್ತಿಗಳ ವಿರುದ್ಧ* ಶಿವಮೊಗ್ಗ ಜಿಲ್ಲೆಯಾದ್ಯಂತ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಎಚ್ಚರಿಕೆ ನೀಡಿದರು.

*ಈ ಹಿಂದಿನ ವರ್ಷಗಳ ಗಣಪತಿ ಹಾಗೂ ಈದ್ ಮಿಲಾದ್ ವಿಡಿಯೋಗಳನ್ನು ವೀಕ್ಷಿಸಿ, ದುರ್ನಡತೆ ತೋರಿದ ವ್ಯಕ್ತಿಗಳನ್ನು ಗುರುತಿಸಿ* ಹಾಗೂ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ *ಚಟುವಟಿಕೆ ಇರುವ ರೌಡಿ ಆಸಾಮಿಗಳು ಮತ್ತು ಕಮ್ಯುನಲ್ ಗೂಂಡಾ ಆಸಾಮಿಗಳನ್ನು ಠಾಣೆಗೆ ಕರೆಸಿ,* ಮುಂಬರುವ ದಿನಗಳಲ್ಲಿ ಹಾಗೂ *ಗೌರಿ ಗಣೇಶ ಹಾಗೂ ಈದ್ ಮಿಲಾದ್* ಹಬ್ಬಗಳ ಸಂದರ್ಭದಲ್ಲಿ *ಯಾವುದೇ ರೀತಿಯ ದುರ್ನಡತೆ ತೋರದಂತೆ, ಕಾನೂನು ಬಾಹೀರ ಚಟುವಟಿಕೆಗಳಲ್ಲಿ ಮತ್ತು ಪ್ರಕರಣಗಳಲ್ಲಿ ಭಾಗಿಯಾಗಬಾರದು ಹಾಗೂ ಉತ್ತಮ ನಡವಳಿಕೆಯಿಂದರಲು* ಸೂಚಿಸಲಾಯಿತು.

ಎಲ್ಲರ ವಿರುದ್ಧ *ಪೊಲೀಸ್ ಇಲಾಖೆಯು ಸೂಕ್ತ ನಿಗಾವಹಿಸಿದ್ದು,* ಒಂದು ವೇಳೆ ಯಾವುದೇ ರೀತಿಯಲ್ಲಿ *ಕಾನೂನು ಉಲ್ಲಂಘನೆ* ಮಾಡಿದರೆ / *ಕಾನೂನು ಬಾಹಿರ ಕೃತ್ಯದಲ್ಲಿ* ಭಾಗಿಯಾಗುವುದು, *ಸಾರ್ವಜನಿಕರಿಗೆ ಉಪಟಳ ನೀಡುವುದು,* ಹಬ್ಬ ಹರಿದಿನಗಳಲ್ಲಿ ಹಾಗೂ ಮೆರವಣಿಗೆ ಸಂದರ್ಭದಲ್ಲಿ *ದುರ್ನಡತೆ ತೋರುವುದು / ಉಪಟಳ* ನೀಡುವುದು ಕಂಡು ಬಂದಲ್ಲಿ ಹಾಗೂ *ಕಿಡಿಗೇಡಿತನ ಮಾಡಿದ್ದಲ್ಲಿ* ಅಂತಹವರ ವಿರುದ್ಧ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.