ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಮೇಲೆ ಲೋಕಾಯುಕ್ತ ದಾಳಿ* *ಅಂಗವೈಕಲ್ಯ ಸರ್ಟಿಫಿಕೇಟಿಗೆ 1500₹ ಲಂಚ ಕೇಳಿದ ಕ್ಲರ್ಕ್ ನೀಲಕಂಠೇಗೌಡ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ*

*ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಮೇಲೆ ಲೋಕಾಯುಕ್ತ ದಾಳಿ*

*ಅಂಗವೈಕಲ್ಯ ಸರ್ಟಿಫಿಕೇಟಿಗೆ 1500₹ ಲಂಚ ಕೇಳಿದ ಕ್ಲರ್ಕ್ ನೀಲಕಂಠೇಗೌಡ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ*

ತಮ್ಮ ಮಗಳ ವಿದ್ಯಾಭ್ಯಾಸ ಹಾಗೂ ಸರ್ಕಾರಿ ಸವಲತ್ತು ಪಡೆಯಲು ವೈದ್ಯರಿಂದ ವಿಕಲಚೇತನ ಸರ್ಟಿಫಿಕೇಟ್ ಕೊಡಿಸಲು 1500₹ ಲಂಚ ಕೇಳಿ ಪಡೆಯುತ್ತಿದ್ದಾಗ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಕ್ಲರ್ಕ್ ನೀಲಕಂಠೇಗೌಡ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

*ದಾಳಿ ಮಾಡಿದ ಲೋಕಾಯುಕ್ತರು ಹೇಳಿದ್ದೇನು?*

ದೂರುದಾರ ನಾಗರಾಜ ಕೆ. ಬಿನ್ ಲೇಟ್ ಕೆಂಚಪ್ಪ, ವ್ಯವಸಾಯ ಕೆಲಸ ವಾಸ: ಅಂದಾಸುರ ಗ್ರಾಮ, ಆಚಾಮರ ಅಂಚೆ, ಸಾಗರ ತಾಲ್ಲೂಕ್, ಶಿವಮೊಗ್ಗ ಜಿಲ್ಲೆ, ರವರ ಮಗಳಾದ ಭೂವಿಲಾ ಎನ್, 8 ವರ್ಷ, ಈಕೆ ಅಂಗವೈಕಲ್ಯದಿಂದ ಬಳಲುತ್ತಿದ್ದು, ಆಕೆಯ ವಿದ್ಯಾಭ್ಯಾಸ ಮತ್ತು ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಅಂಗವೈಕಲ್ಯ ಸರ್ಟಿಫಿಕೇಟ್ ಪಡೆದುಕೊಳ್ಳಲು ಈಗ್ಗೆ 15-20 ದಿವಸಗಳ ಹಿಂದೆ ಪಿಯಾದುದಾರರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಹೋಗಿ ಓಪಿಡಿ ಚೀಟಿ ಮಾಡಿಸಿ ಆಡಳಿತ ವಿಭಾಗದಲ್ಲಿ ಇದ್ದ ಕ್ಲರ್ಕ್ ನೀಲಕಂಠೇಗೌಡ ರವರನ್ನು ಭೇಟಿ ಮಾಡಿದರು. ಆಗ ಅವರು ಫಿರ್ಯಾದಿಗೆ ವೈದ್ಯರಿಂದ ಮಗಳನ್ನು ತಪಾಸಣೆ ಮಾಡಿಸಿ ವೈದ್ಯರಿಂದ ಸಹಿ ಪಡೆದು ಫಾರಂಗಳನ್ನು ತಂದು ನೀಡುವಂತೆ ತಿಳಿಸಿದ್ದು, ಅದರಂತೆ ಪಿಯಾದುದಾರರು ವೈದ್ಯರಿಂದ ಪರೀಕ್ಷೆ ಮಾಡಿಸಿ ಫಾರಂಗಳನ್ನು ಭರ್ತಿ ಮಾಡಿಸಿ ಕ್ಲರ್ಕ್ ನೀಲಕಂಠೇಗೌಡರವರಿಗೆ ನೀಡಿದರು.

ನಂತರ ಫೋಟೋ ಮತ್ತು ಇತರೆ ದಾಖಲಾತಿಗಳನ್ನು ನೀಡಿರುತ್ತಾರೆ. ನಂತರ ಕ್ಲರ್ಕ್ ರವರು ಸರ್ಟಿಫಿಕೇಟ್ ರೆಡಿಮಾಡುವುದಾಗಿ ತಿಳಿಸಿದ್ದು, ನಂತರ ಫಿರ್ಯಾದುದಾರರು ಅಪಾದಿತರ ಮೊಬೈಲ್‌ಗೆ ಸಂಪರ್ಕಿಸಿ ಸರ್ಟಿಫಿಕೇಟ್ ನೀಡುವಂತೆ ಕೇಳಿದಾಗ ಕ್ಲರ್ಕ್ ನೀಲಕಂಠೇಗೌಡ ಅಂಗವೈಕಲ್ಯ ಸರ್ಟಿಫಿಕೇಟ್ ನೀಡಲು ರೂ 1500/- ಲಂಚದ ಹಣ ನೀಡುವಂತೆ ಕೇಳಿದ್ದಾನೆ.

ಪಿರ್ಯಾದುದಾರರು ಸದರಿ ಸಂಭಾಷಣೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿರುತ್ತಾರೆ. ಪಿರ್ಯಾದುದಾರರಿಗೆ ಅವರ ಮಗಳ ಅಂಗವೈಕಲ್ಯ ಸರ್ಟಿಫಿಕೇಟ್‌ ಪಡೆಯಲು ಕ್ಲರ್ಕ್ ಗೆ ಲಂಚದ ಹಣ ನೀಡಲು ಇಷ್ಟವಿಲ್ಲದೆ ಇದ್ದುದ್ದರಿಂದ ಸದರಿ ಕ್ಲರ್ಕ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇಂದು ನೀಡಿದ ದೂರಿನ ಮೇರೆಗೆ ಕಲಂ:7(3) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988. (ತಿದ್ದುಪಡಿ ಕಾಯಿದೆ-2018) ರೀತ್ಯಾ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯ್ತು.

ಮದ್ಯಾಹ್ನ 3:30 ಗಂಟೆಗೆ ಅಪಾದಿತ ಕ್ಲರ್ಕ್ ಶಿವಮೊಗ್ಗ ಮೆಗ್ಗಾನ್ ಜಿಲ್ಲಾ ಭೋಧನಾ ಆಸ್ಪತ್ರೆಯ ಆಡಳಿತ ಕಛೇರಿಯಲ್ಲಿ ಪಿರ್ಯಾದಿಯಿಂದ 1,500/-ರೂ ಲಂಚದ ಹಣವನ್ನು ಪಡೆದುಕೊಂಡ ಸಮಯದಲ್ಲಿ ಟ್ರ್ಯಾಪ್ ಮಾಡಲಾಗಿದೆ.

ಲಂಚದ ಹಣವನ್ನು ಜಪ್ತಿ ಪಡಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾದಿತ ಕ್ಲರ್ಕ್ ನೀಲಕಂಠೇಗೌಡ ಬಿನ್ ತಿಮ್ಮೇಗೌಡನನ್ನು ತನಿಖೆ ಸಂಬಂಧ ವಶಕ್ಕೆ ಪಡೆದು ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ವೀರಬಸಪ್ಪ ಎಲ್ ಕುಸಲಾಪುರ ರವರು ಕೈಗೊಂಡಿದ್ದಾರೆ.

ಈ ಟ್ರ್ಯಾಪ್ ಕಾರ್ಯಾಚರಣೆಯನ್ನು ಶಿವಮೊಗ್ಗ ಲೋಕಾಯುಕ್ತ ಡಿವೈಎಸ್ ಪಿ ಮಂಜುನಾಥ ಚೌಧರಿ.ಎಂ. ರವರ ಮಾರ್ಗದರ್ಶನದಲ್ಲಿ ಬಿ.ಪಿ. ಚಂದ್ರಶೇಖರ್. (ಪೊಲೀಸ್ ಉಪಾಧೀಕ್ಷಕರು)ರವರ ನೇತೃತ್ವದಲ್ಲಿ ಪೊಲೀಸ್‌ ಇನ್ಸ್ಪೆಕ್ಟರಾದ ವೀರಬಸಪ್ಪ ಎಲ್ ಕುಸಲಾಪುರ ರವರು ಟ್ಯಾಪ್ ಮಾಡಿದ್ದು, ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗಳಾದ ರುದ್ರೇಶ್ ಕೆ.ಪಿ, ಗುರುರಾಜ ಎನ್ ಮೈಲಾರ್ ಸಿಬ್ಬಂದಿಯವರಾದ ಯೋಗೇಶ್.ಜಿ.ಸಿ, ಸಿ.ಹೆಚ್.ಸಿ, ಮಂಜುನಾಥ.ಎಂ. ಸಿ.ಹೆಚ್.ಸಿ, ಟೀಕಪ್ಪ ಸಿಹೆಚ್‌ಸಿ, ಬಿ.ಟಿ. ಚನ್ನೇಶ್, ಸಿ.ಪಿ.ಸಿ, ಪ್ರಶಾಂತ್ ಕುಮಾರ್ ಹೆಚ್. ಸಿ.ಪಿ.ಸಿ. , ಪ್ರಕಾಶ್ ಬಾರಿಮರದ, ಸಿಪಿಸಿ, ಅರುಣ್ ಕುಮಾರ್.ಯು.ಬಿ.ಸಿ.ಪಿ.ಸಿ, ಆದರ್ಶ್ ಸಿ.ಪಿ.ಸಿ. ಶ್ರೀಮತಿ ಅಂಜಲಿ ಮ.ಪಿ.ಸಿ ಶ್ರೀಮತಿ ಚಂದ್ರಿಬಾಯಿ.ಎಸ್. ಮ.ಪಿ.ಸಿ ಪ್ರದೀಪ, ಎ.ಹೆಚ್.ಸಿ, ತರುಣ್ ಎಪಿಸಿ. ಗಂಗಾಧರ ಎಪಿಸಿ, ಆನಂದ. ಎ.ಪಿ.ಸಿ, ಗೋಪಿ ಎ.ಪಿ.ಸಿ ರವರು ಹಾಜರಿದ್ದರು.