ಏನಂದ್ರು ಹೆಚ್.ಸಿ.ಯೋಗೇಶ್?* *ಏನಂದ್ರು ಸಿ.ಎಸ್.ಷಡಾಕ್ಷರಿ?*
*ಏನಂದ್ರು ಹೆಚ್.ಸಿ.ಯೋಗೇಶ್?*
*ಏನಂದ್ರು ಸಿ.ಎಸ್.ಷಡಾಕ್ಷರಿ?*


ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿಯವರು ಬಿಜೆಪಿ ಸದಸ್ಯತ್ವವನ್ನು ತೆಗೆದು ಕೊಳ್ಳುವುದು ಒಳಿತು ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೀಶ್ ಹೇಳಿದರು.
ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಆ.5ರಂದು ಸರ್ಕಾರಿ ವಿಕಾಸ ಕೇಂದ್ರದಲ್ಲಿ ನಡೆದ ಬಿ.ವೈ. ರಾಘವೇಂದ್ರ ರವರ ಜನ್ಮದಿನಾ ಚರಣೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರ ಹುಟ್ಟುಹಬ್ಬವನ್ನು ಹೇಗೆ ಆಚರಿಸಬೇಕು ಏನು ಮಾಡಬೇಕು ಎಂದು ಚರ್ಚೆ ಮಾಡಿದರು. ಒಂದು ರೀತಿ ಯಲ್ಲಿ ಸ್ಪಾನ್ಸರ್ ರೀತಿಯಲ್ಲಿ ಅವರ ಭಾಗವಹಿಸುವಿಕೆ ಇತ್ತು. ಒಬ್ಬ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಬಿಜೆಪಿ ಮುಖಂಡರ ಜೊತೆ ಬಹಿರಂಗ ವಾಗಿ ಗುರುತಿಸಿ ಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಮತ್ತು ನೌಕರರಲ್ಲಿ ಇದು ಗೊಂದಲ ಹುಟ್ಟಿಸುವಂತಾಗಿದೆ. ಆದ್ದರಿಂದ ಅವರು ತಮ್ಮ ಸ್ಥಾನಕ್ಕೆ ಮತ್ತು ಹುದ್ದೆಗೆ ರಾಜೀನಾಮೆ ಕೊಟ್ಟು ಬಿಜೆಪಿ ಪಕ್ಷವನ್ನು ಸೇರುವುದು ಒಳಿತು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಿನ್ನಪ್ಪ, ಬಾಬು, ನವೀನ್ ಕುಮಾರ್, ನಾಗರಾಜ್, ಶಿವ ಕುಮಾರ್, ವಿಶ್ವನಾಥ್ ಕಾಶಿ, ಯಮುನಾ ರಂಗೇಗೌಡ, ರಾಜು, ಮುನಾರ್ ಸೇರಿದಂತೆ ಹಲವರಿದ್ದರು.
*ಯೋಗೀಶ್ ಸಣ್ಣತನ ಬಿಡಲಿ*
ಹೆಚ್.ಸಿ. ಯೋಗೀಶ್‌ರವರು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿರುವುದಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಯೋಗಿಶ್ ಅವರು ಪತ್ರಿಕಾಗೋಷ್ಠಿಯ ನಂತರ ಬೇರೊಂದು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಷಡಾಕ್ಷರಿಯವರು ಪತ್ರಕರ್ತರ ಗಮನಕ್ಕೆ ಈ ವಿಷಯ ತಂದಾಗ, ಅವರು ಯೋಗೀಶ್ ಅವರು ಸಣ್ಣತನವನ್ನು ಬಿಡಲಿ ನಾನೊಬ್ಬ ರಾಜ್ಯಾಧ್ಯಕ್ಷ ನನಗೆ ಇತಿಮಿತಿಗಳು ಗೊತ್ತಿವೆ ಅವರು ಹೇಳಿದ ಸಭೆಯಲ್ಲಿ ನಾವು ಮಾತನಾಡಿದ್ದು ಶ್ರೀಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಅಕ್ಕಿ ಸಮರ್ಪಣೆ ಮಾಡುವ ವಿಷಯವಾಗಿದೆ. ಇದು ಜಾತ್ಯಾತೀತ, ಧರ್ಮಾತೀತ, ಪಕ್ಷಾತೀತವಾಗಿದೆ ಇದನ್ನು ಅರ್ಥಮಾಡಿಕೊಳ್ಳದೇ ಯೋಗೀಶ್‌ರವರು ಈ ರೀತಿ ಹೇಳಿಕೆ ನೀಡಿದ್ದಾರೆ. ಪ್ರಚಾರ ಪಡೆಯಲು ಕೂಡ ಈ ರೀತಿ ಮಾಡಿದ್ದಾರೆ ಎಂದರು.
ಸಭೆಯಲ್ಲಿ ಭಾಗವಹಿಸಿರಬಹುದು ಆದರೆ ಅಲ್ಲಿ ಯಾವುದೇ ಬ್ಯಾನರ್ ಇಲ್ಲ. ಯಾವುದೇ ಪಕ್ಷದವರ ಜೊತೆ, ಧರ್ಮದವರ ಜೊತೆ ಮಾತನಾಡಿದರೆ ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ, ಸಮರ್ಪಣೆ ಎಂಬ ಬಹುದೊಡ್ಡ ಕಾರ್ಯಕ್ರಮವನ್ನು ನಾವು ಮಾಡುತ್ತೇವೆ. ಅದರಲ್ಲಿ ಹೆಚ್.ಸಿ. ಯೋಗೀಶ್‌ರವರ ಹೆಸರೂ ಇದೆ. ಅವರ ಮನೆಗೆ ಹೋಗಿ ಆಮಂತ್ರಣ ಪತ್ರಿಕೆಯನ್ನು ಕೂಡ ನೀಡಿದ್ದೇವೆ. ಅಲ್ಲೇ ಕೇಳಿದ್ದರೆ ನಾನು ಉತ್ತರ ಕೊಡುತ್ತಿದ್ದೆ ಅದನ್ನು ಬಿಟ್ಟು ಹೀಗೆ ಸಣ್ಣತನದಿಂದ ಅವರ ವರ್ತಿಸಿದ್ದಾರೆ ಎಂದರು.