ಕೆ.ಇ.ಕಾಂತೇಶ್ ರಿಗೆ “ವಿಜಯರತ್ನ” ಪ್ರಶಸ್ತಿ*
*ಕೆ.ಇ.ಕಾಂತೇಶ್ ರಿಗೆ “ವಿಜಯರತ್ನ” ಪ್ರಶಸ್ತಿ*
ಮಲೇಶಿಯಾದಲ್ಲಿ ಭಾರತದ ಹೈಕಮೀಷನರಾಗಿ ಕಾರ್ಯ ನಿರ್ವಹಿಸುತ್ತಿರುವ ಬಿ.ಎನ್. ರೆಡ್ಡಿ ಹಾಗೂ ವಿಜಯವಾಣಿ ದಿನಪತ್ರಿಕೆಯ ಮುಖ್ಯಸ್ಥರಾದ ಆನಂದ್ ಸಂಕೇಶ್ವರ್ ಅವರು ಶಿವಮೊಗ್ಗ ಜಿ.ಪಂ. ಮಾಜಿ ಸದಸ್ಯರೂ ರಾಷ್ಟ್ರಭಕ್ತರ ಬಳಗದ ಪ್ರಮುಖರೂ ಆದ ಕೆ.ಇ.ಕಾಂತೇಶ್ ರವರಿಗೆ ವಿಜಯ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಸಾಮಾಜಿಕ ಸೇವಾಕ್ಷೇತ್ರದ ಸಾಧನೆಗಾಗಿ ನೀಡಲಾಗಿರುವ ಈ ಗೌರವ ಪ್ರಶಸ್ತಿಯನ್ನು ಕೆ.ಈ. ಕಾಂತೇಶ್ ಸ್ವೀಕರಿಸಿದರು.
ಈ ಪ್ರಶಸ್ತಿಯನ್ನು ಮಾರಿಕಾಂಬ ಮೈಕ್ರೋ ಫೈನಾನ್ಸಿನ ಶೈಕ್ಷಣಿಕ, ಮಹಿಳಾ ಸಬಲೀಕರಣ, ಸಾಂಸ್ಕೃತಿಕ ಸಾಧನೆಗಾಗಿ ನೀಡಲಾಗಿದೆ.