ಶಾಹಿ ಗಾರ್ಮೆಂಟ್ಸ್ ನಿಂದ ಶಾಲಾ ಮಕ್ಕಳಿಗೆ ಸೈಕಲ್, ಬ್ಯಾಗ್ ವಿತರಣೆ ನಾಳೆ

ನಾಳೆ ಶಾಹಿ ಎಕ್ಸ್ ಪೋರ್ಟ್ ನಿಂದ ಶಾಲಾ ಮಕ್ಕಳಿಗೆ ಸೈಕಲ್, ಕಿಟ್ ವಿತರಣೆ ಸೇರಿದಂತೆ ಮಹತ್ತರ ಸೇವಾ ಕಾರ್ಯಕ್ರಮ
ಶಿವಮೊಗ್ಗ,ಫೆ.19: ಮಾಚೇನಹಳ್ಳಿಯಲ್ಲಿರುವ ಶಾಹಿ ಎಕ್ಸ್ ಪೋರ್ಟ್ ಪ್ರವೈಟ್ ಲಿಮಿಟೆಡ್ ಸಾವಿರಾರು ಜನರಿಗೆ ಉದ್ಯೋಗ ನೀಡಿರುವ ಜೊತೆಜೊತೆಗೆ ಸಾಮಾಜಿಕ ಹೊಣೆಗಾರಿಕೆಯ ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿದೆ ಎಂದು ಶಾಹಿ ಎಕ್ಸ್ ಪೋರ್ಟ್ ನ ಕಮ್ಯುನಿಕೇಷನ್ ಮ್ಯಾನೇಜರ್ ಶ್ರೀಮತಿ
ನಿವೇದಿತಾ ತಿಳಿಸಿದರು.
ಇಂದು ಮದ್ಯಾಹ್ನ ಶಾಹಿ ಎಕ್ಸ್ ಪೋರ್ಟ್ ಆವರಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, ಅದರಂತೆ ಅನೇಕ
ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದೆ ಎಂದರು.
ಶಿವಮೊಗ್ಗ ಶಾಹಿ ಎಕ್ಸ್ ಪೋರ್ಟ್ಎಜಿಎಂ ಲಕ್ಷ್ಮಣ್ ಅವರು ಮಾತನಾಡುತ್ತಾ, ಇದರ ಅಂಗವಾಗಿ ಫೆ. 20 ರ ನಾಳೆ ಶಾಹಿ ಎಕ್ಸ್ ಪೋರ್ಟ್ ಸಂಸ್ಥೆಯ ಮುಖ್ಯಸ್ಥರು, ಶಿಕ್ಷಣ ಕ್ಷೇತ್ರದ ಅಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ
ಅಧಿಕಾರಿಗಳ ಸಮ್ಮುಖದಲ್ಲಿ 1ರಿಂದ 10ನೇ ತರಗತಿ ಮಕ್ಕಳಿಗೆ ಉಚಿತ ಶೈಕ್ಷಣಿಕ ಕಿಟ್ ಗಳ ವಿತರಣೆ, 7
ರಿಂದ 10ನೇ ತರಗತಿ ಮಕ್ಕಳಿಗೆ ಸೈಕಲ್ ವಿತರಣೆ, ಅಂಗನವಾಡಿ ಕೇಂದ್ರಗಳಿಗೆ ಅವಶ್ಯಕ ಸಾಮಾಗ್ರಿಗಳ
ವಿತರಣೆ, ಸರ್ಕಾರಿ ಶಾಲೆಗಳಿಗೆ ಟಿವಿ, ಕಂಪ್ಯೂಟರ್, ಪ್ರಿಂಟರ್, ಇನ್ನಿತರ ವಸ್ತುಗಳ ವಿತರಣೆ
ಕಾರ್ಯಕ್ರಮವನ್ನು ನಿಧಿಗೆ ಗ್ರಾಮದಲ್ಲಿ ಆಯೋಜಿಸಿದೆ ಎಂದು ತಿಳಿಸಿದರು.