ಶಿವಮೊಗ್ಗ ಮಹಾ‌ನಗರ ಪಾಲಿಕೆಯ ಆಶ್ರಯ ವಿಭಾಗದ ಅಧಿಕಾರಿ ಶಶಿಧರ್ ಲೋಕಾಯುಕ್ತ ಬಲೆಗೆ 10 ಸಾವಿರ ರೂ.,ಗಳ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿ ಏನಿದು ಪ್ರಕರಣ?

ಶಿವಮೊಗ್ಗ ಮಹಾ‌ನಗರ ಪಾಲಿಕೆಯ ಆಶ್ರಯ ವಿಭಾಗದ ಅಧಿಕಾರಿ ಶಶಿಧರ್ ಲೋಕಾಯುಕ್ತ ಬಲೆಗೆ

10 ಸಾವಿರ ರೂ.,ಗಳ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿ

ಏನಿದು ಪ್ರಕರಣ?

ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಮನೆಯ ಖಾತೆ ಮಾಡಿಕೊಡಲು 10 ಸಾವಿರ ರೂ.,ಗಳ ಲಂಚ ಪಡೆಯುತ್ತಿದ್ದ ಆಶ್ರಯ ವಿಭಾಗದ ಸಮುದಾಯ ಸಂಘಟನಾ ಅಧಿಕಾರಿ ಶಶಿಧರ್ ನನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ್ದು, ಜೈಲು ಕಂಬಿಗಳ ಹಿಂದೆ ಕಳಿಸಿದ್ದಾರೆ.

ಪಿದ್ಯಾದುದಾರರಾದ ಮೊಹಮದ್ ಆಸೀಫ್ ಉಲ್ಲಾ ತಂದೆ ಅಬ್ದುಲ್ ಮಜೀದ್ ಟೈಲ್ಸ್ ಕೆಲಸ, ವಾಸ: ಆಶ್ರಯ ಬಡಾವಣೆ, ಬೊಮ್ಮನಕಟ್ಟೆ, ಶಿವಮೊಗ್ಗ ರವರು ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಮನೆಯನ್ನು ಅಮ್ಜದ್ ಅಲಿ ರವರಿಂದ ಖರೀದಿಸಿದ್ದ. ಈ ಮನೆಯನ್ನು ತನ್ನ ಹೆಸರಿಗೆ ಖಾತೆ ಮಾಡಿಕೊಡಲು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ವಿಚಾರವಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ಆಶ್ರಯ ವಿಭಾಗದ ಸಮುದಾಯ ಸಂಘಟನಾಧಿಕಾರಿಯಾದ ಶಶಿಧರ ರವರನ್ನು ಭೇಟಿ ಮಾಡಿ ವಿಚಾರಿಸಿದಾಗ, ಸ್ಥಳ ಮಹಜರ ನಡೆಸಿ, ದಾಖಲಾತಿಗಳನ್ನು ಪರಿಶೀಲನೆ ಮಾಡುವುದಾಗಿ ತಿಳಿಸಿ, ಪಿರ್ಯಾದಿ ಹೆಸರಿಗೆ ಖಾತೆ ಮಾಡಿಕೊಡಲು 10,000/-ರೂಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ.

ಈ ಸಂಭಾಷಣೆಯನ್ನು ಪಿರ್ಯಾದಿ ಮಹ್ಮದ್ ಆಸೀಪ್ ಉಲ್ಲಾ ರವರು ವಾಯ್ಸ್ ರೇಕಾರ್ಡ್ ಮಾಡಿಕೊಂಡಿದ್ದರು. ಪಿರ್ಯಾದುದಾರರಿಗೆ ಅವರ ಹೆಸರಿಗೆ ಮನೆ ಖಾತೆ ಮಾಡಿಕೊಡಲು ಶಶಿಧರ್ ರವರಿಗೆ ಲಂಚದ ಹಣ ನೀಡಲು ಇಷ್ಟವಿಲ್ಲದೆ ಇದ್ದುದ್ದರಿಂದ ಸದರಿ ಸಮುದಾಯ ಸಂಘಟನಾಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇಂದು ನೀಡಿದ ದೂರಿನ ಮೇರೆಗೆ ಕಲಂ:7(3) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯಿದೆ-2018) ರೀತ್ಯಾ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇಂದು ಸಂಜೆ 04.15 ಗಂಟೆಗೆ ಶಿವಮೊಗ್ಗ ನಗರದ ನೆಹರೂ ರಸ್ತೆಯ ನೇತಾಜಿ ಸುಭಾಷ್ ಚಂದ್ರ ಬೋಸ್ ವಾಣಿಜ್ಯ ಸಂಕೀರ್ಣದ ಮೂರನೆ ಮಹಡಿಯಲ್ಲಿರುವ ಆಶ್ರಯ ಕಛೇರಿಯಲ್ಲಿ ಅಧಿಕಾರಿ ಶಶಿಧರ್ ಪಿರ್ಯಾದಿಯಿಂದ 10.000/-ರೂ ಲಂಚದ ಹಣವನ್ನು ಪಡೆದುಕೊಂಡ ಸಮಯದಲ್ಲಿ ಟ್ರ್ಯಾಪ್ ಮಾಡಲಾಗಿದೆ.

ಲಂಚದ ಹಣವನ್ನು ಜಪ್ತಿ ಪಡಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾದಿತ ಅಧಿಕಾರಿಯಾದ ಶಶಿಧರ್ ಎ.ಪಿ ಬಿನ್ ಲೇಟ್ ಪರಮೇಶ್ವರಪ್ಪ,ಎನ್, 57ವರ್ಷ, ಸಮುದಾಯ ಸಂಘಟನಾ ಅಧಿಕಾರಿ, ಆಶ್ರಯ ಕಛೇರಿ, ಮಹಾನಗರ ಪಾಲಿಕೆ, ಶಿವಮೊಗ್ಗ ನನ್ನು ತನಿಖೆ ಸಂಬಂಧ ವಶಕ್ಕೆ ಪಡೆದುಕೊಂಡರು.

ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ರಾದ ರುದ್ರೇಶ್.ಕೆ.ಪಿ, ರವರು ಕೈಗೊಂಡರು.

ಈ ಟ್ರ್ಯಾಪ್ ಕಾರ್ಯಾಚರಣೆಯನ್ನು ಮಂಜುನಾಥ ಚೌಧರಿ.ಎಂ. (ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ) ರವರ ಮಾರ್ಗದರ್ಶನದಲ್ಲಿ ಬಿ.ಪಿ. ಚಂದ್ರಶೇಖರ್ (ಪೊಲೀಸ್ ಉಪಾಧೀಕ್ಷಕರು) ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರಾದ ರುದ್ರೇಶ್.ಕೆ.ಪಿ. ಟ್ರ್ಯಾಪ್ ಮಾಡಿದ್ದು, ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗಳಾದ ಗುರುರಾಜ ಎನ್ ಮೈಲಾರ್, ವೀರಬಸಪ್ಪ ಎಲ್ ಕುಸಲಾಮರ, ಸಿಬ್ಬಂದಿಯವರಾದ ಯೋಗೇಶ್.ಜಿ.ಸಿ, ಸಿ.ಹೆಚ್.ಸಿ, ಮಂಜುನಾಥ.ಎಂ. ಸಿ.ಹೆಚ್.ಸಿ, ಟೇಕಪ್ಪ ಸಿಹೆಚ್‌, ಸುರೇಂದ್ರ ಹೆಚ್.ಜಿ. ಸಿಹೆಚ್‌ಸಿ, ಪ್ರಶಾಂತ್ ಕುಮಾರ್ ಹೆಚ್. ಸಿ.ಪಿ.ಸಿ, ದೇವರಾಜ್.ವಿ. ಸಿಪಿಸಿ, ಪ್ರಕಾಶ್ ಬಾರಿಮರದ ಸಿಪಿಸಿ, ಅರುಣ್ ಕುಮಾರ್.ಯು.ಬಿ.ಸಿ.ಪಿ.ಸಿ, ಆದರ್ಶ್ ಸಿ.ಪಿ.ಸಿ, ಶ್ರೀಮತಿ ಚಂದ್ರಿಬಾಯಿ.ಎಸ್. ಮ.ಪಿ,ಸಿ ಪ್ರದೀಪ, ಎ.ಹೆಚ್.ಸಿ, ಗಂಗಾಧರ ಎಪಿಸಿ, ಆನಂದ. ಎ.ಪಿ.ಸಿ, ಗೋಪಿ ಎ.ಪಿ.ಸಿ ರವರು ಹಾಜರಿದ್ದರು