ಶಿವಮೊಗ್ಗದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಜೆಡಿಎಸ್ ವತಿಯಿಂದ ಶಿಕ್ಷಕರಿಗೆ ವಿಶೇಷ ಸನ್ಮಾನ* ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್ ನೇತೃತ್ವದಲ್ಲಿ ನಡೆದ ಮಾದರಿ ಕಾರ್ಯಕ್ರಮ

*ಶಿವಮೊಗ್ಗದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಜೆಡಿಎಸ್ ವತಿಯಿಂದ ಶಿಕ್ಷಕರಿಗೆ ವಿಶೇಷ ಸನ್ಮಾನ*

ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್ ನೇತೃತ್ವದಲ್ಲಿ ನಡೆದ ಮಾದರಿ ಕಾರ್ಯಕ್ರಮ

ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿವಮೊಗ್ಗ ನಗರದ ವಿನೋಬನಗರ ವಾರ್ಡ್ ಸಂಖ್ಯೆ 18ರಲ್ಲಿ ಜನತಾದಳ (ಸೆಕ್ಯುಲರ್) ವತಿಯಿಂದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್  ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ಮಾಜಿ ಶಾಸಕರೂ ಆದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ  ಕೆ.ಬಿ. ಪ್ರಸನ್ನ ಕುಮಾರ್ ಅವರು ಉಪಸ್ಥಿತರಿದ್ದರು. ವಾರ್ಡ್ ಅಧ್ಯಕ್ಷ ಚಂದ್ರಶೇಖರ್ ಹಾಗೂ ವಾರ್ಡ್ ಸಮಿತಿ ಸದಸ್ಯರು ಸಹ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಾರ್ಡ್ ಸಂಖ್ಯೆ 18ರಲ್ಲಿ ಬಹಳ ವರ್ಷಗಳಿಂದ ವಾಸಿಸುತ್ತಿರುವ, ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಹಲವಾರು ಶಿಕ್ಷಕರ ಮನೆಗಳಿಗೆ ತೆರಳಿ ಜೆಡಿಎಸ್ ಸದಸ್ಯರು ಅವರನ್ನು ಸನ್ಮಾನಿಸಿದರು. ಸನ್ಮಾನಿತ ಶಿಕ್ಷಕರಲ್ಲಿ ಶ್ರೀಮತಿ ನೀತು ಎಸ್, ಶ್ರೀಮತಿ ಅರ್ಚನಾ ಪ್ರಕಾಶ್ ಭಟ್,  ಓಂಕಾರ್ ನಾಯಕ್, ಶ್ರೀಮತಿ ಶೈಲಜ ನಾಯಕ್,  ರಾಮಚಂದ್ರಪ್ಪ, ಶ್ರೀಮತಿ ಮಂಜುಳಮ್ಮ, ಶ್ರೀಮತಿ ಸವಿತಾ, ಶ್ರೀಮತಿ ಲಕ್ಷ್ಮಿ,  ಚಂದ್ರಶೇಖರ್, ಶ್ರೀಮತಿ ಮಮತ ಚಂದ್ರಶೇಖರ್,  ರವಿ ಕುಮಾರ್, ಮತ್ತು  ಪ್ರಕಾಶ್ ಅವರು ಸೇರಿದ್ದಾರೆ.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ತ್ಯಾಗರಾಜ್, ಸಂಗಯ್ಯ, ದಯಾನಂದ್ ಸಾಲಗಿ, ಶಂಕರ್, ಸುರೇಶ್, ಗೋಪಿ ಮೊದಲಿಯರ್, ವೆಂಕಟೇಶ್, ದೀಕ್ಷಿತ್, ಶರತ್, ಸಿದ್ದೇಶ್, ಹಾಗೂ ಮಹಿಳಾ ಮುಖಂಡರಾದ ಶ್ರೀಮತಿ ಆಶಾ, ಜ್ಯೋತಿ,ರಾಧಾ, ವಾಣಿ, ಮತ್ತಿತರರು ಉಪಸ್ಥಿತರಿದ್ದರು.