ಅನುಮಾನಾಸ್ಪದ ವ್ಯಕ್ತಿಗಳು ಮತ್ತು 36 ಪ್ರಕರಣಗಳು

ದಿನಾಂಕಃ 19-02-2024 ರಂದು ಸಂಜೆ *ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ* ಮಾರ್ನಮಿ ಬೈಲು, ವಿಜಯ ಗ್ಯಾರೇಜ್ ಹತ್ತಿರ, ಸಾವರ್ಕರ್ ನಗರ, ಕೋಟೆ ರಸ್ತೆ, ವಾದಿಯೇ ಹುದ, ಅಂಬೇಡ್ಕರ್ ನಗರ *ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ* ಬಾಲರಾಜ್ ಅರಸು ರಸ್ತೆ, ಕೆಇಬಿ ವೃತ್ತ, ಜೆಹೆಚ್ ಪಟೇಲ್ ಬಡಾವಣೆ, ಹಾರ್ನಹಳ್ಳಿ, ಕುಂಸಿ *ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ* ಕೂಲಿ ಬ್ಲಾಕ್ ಶೆಡ್, ಹೊಳೆಹೊನ್ನೂರು ರಸ್ತೆ, ಸಂತೆ ಮೈದಾನ, ಹುಡ್ಕೋ ಕಾಲೋನಿ, ಸನ್ಯಾಸಿ ಕೊಡ್ಮಗ್ಗೆ *ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯ* ಜಾಕಿರ್ ಹುಸೇನ್ ರಸ್ತೆ ಶಿಕಾರಿಪುರ ಟೌನ್ *ಸಾಗರ ಉಪ ವಿಭಾಗ ವ್ಯಾಪ್ತಿಯ* ಸಾಗರ ಟೌನ್ ನ ಜನ್ನತ್ ನಗರ, ಬಳಸಗೋಡು, ಮಲಂದೂರು, ಕಾರ್ಗಲ್ *ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ* ಮಾಳೂರು, ಹೊಸನಗರ ಟೌನ್, ನಗರದಲ್ಲಿ *ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ* ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು *ಕಾಲ್ನಡಿಗೆ ವಿಶೇಷ ಗಸ್ತು (Foot Patrolling)* ಮಾಡಿ *Public Nuisance* ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ *ಒಟ್ಟು 36 ಲಘು* ಪ್ರಕರಣಗಳನ್ನು ದಾಖಲಿಸಿರುತ್ತಾರೆ.