ಆತಂಕದಲ್ಲಿ ಬಿಪಿಲ್ ಕಾರ್ಡ್ ದಾರರು* *ವಾರ್ಷಿಕ ವರಮಾನ 5 ಲಕ್ಷ ಮಿತಿಗೊಳಿಸಿ* *ಬಿಪಿಎಲ್ ಕಾರ್ಡ್ ರದ್ದು ಪಟ್ಟಿಗೆ ತಡೆಯೊಡ್ಡಲು ಶಾಂತವೇರಿ ಟ್ರಸ್ಟ್ ಒತ್ತಾಯ*
*ಆತಂಕದಲ್ಲಿ ಬಿಪಿಲ್ ಕಾರ್ಡ್ ದಾರರು*
*ವಾರ್ಷಿಕ ವರಮಾನ 5 ಲಕ್ಷ ಮಿತಿಗೊಳಿಸಿ*
*ಬಿಪಿಎಲ್ ಕಾರ್ಡ್ ರದ್ದು ಪಟ್ಟಿಗೆ ತಡೆಯೊಡ್ಡಲು ಶಾಂತವೇರಿ ಟ್ರಸ್ಟ್ ಒತ್ತಾಯ*
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಾರ್ಷಿಕ 1.20 ಲಕ್ಷ ಹಾಗೂ 100 ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನಗಳನ್ನು ಹೊಂದಿರುವವರ ಬಿ.ಪಿ.ಎಲ್. ಪಡಿತರ ಚೀಟಿಗಳ ಮಾನದಂಡವನ್ನು ಕೂಡಲೇ ರಾಜ್ಯ ಸರ್ಕಾರ ಬದಲಾಯಿಸಿ, ವಾರ್ಷಿಕ ವರಮಾನವನ್ನು ಕನಿಷ್ಠ 5 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಹಾಗೂ ರಾಜ್ಯದ ಆಹಾರ ಸಚಿವರಾದ ಕೆ.ಹೆಚ್. ಮುನಿಯಪ್ಪರವರನ್ನು ಒತ್ತಾಯಿಸುತ್ತದೆ ಎಂದು ಕಲ್ಲೂರು ಮೇಘರಾಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು,ಬಿಪಿಎಲ್ ಕಾರ್ಡ್ ಹೊಂದಲು, ಕೇಂದ್ರದ ನೀತಿ ಆಯೋಗವು ರೂಪಿಸಿರುವ ಮಾನದಂಡಗಳ ಅನ್ವಯ ರಾಜ್ಯದಲ್ಲಿ ಸರಿಸುಮಾರು 4,56.575 ಬಿ.ಪಿ.ಎಲ್. ಕಾರ್ಡ್ ಗಳು ರದ್ದಾಗಿವೆ. ಇದು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮರ್ಮಾಘಾತವಾಗಿದೆ ಎಂದರು.
ಬಿ.ಪಿ.ಎಲ್. ಕಾರ್ಡ್ ಪಡೆಯಲು 120 ವಾರ್ಷಿಕ ಆದಾಯ ಮಿತಿಯನ್ನು ಆಳವಡಿಸಿರುವುದರಿಂದ ರಾಜ್ಯದಲ್ಲಿ ಲಕ್ಷಾಂತರ ದುಡಿಯುವ ವರ್ಗದ ಹಾಗೂ ಬಡ ಕುಟುಂಬಗಳ ಅನ್ನದ ತುತ್ತನ್ನೇ ಕಿತ್ತುಕೊಂಡಂತಾಗುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎಸ್.ಎಫ್.ಎಸ್.ಎ) ಅನ್ವಯ ರಾಜ್ಯದಲ್ಲಿ ನಿಗದಿಗಿಂತ ಹೆಚ್ಚುವರಿಯಾಗಿ 14 ಲಕ್ಷ ಬಿಪಿಎಲ್ ಕಾರ್ಡ್ ಗಳಿವೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳ ಮಾಹಿತಿ ತಿಳಿಸುತ್ತದೆ. ಆದರೆ, ವಾಸ್ತವವಾಗಿ ಈ ಹೆಚ್ಚುವರಿ ಬಿ.ಪಿ.ಎಲ್. ಕಾರ್ಡ್ ಗಳಿಗೂ ಹಾಗೂ ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ರದ್ದಾಗಿರುವ 4,56.675 ಬಿ.ಪಿ.ಎಲ್ ಕಾರ್ಡ್ ಗಳಿಗೂ ಸಂಬಂಧವೇ ಇಲ್ಲ. ಒಂದೊಮ್ಮೆ ಈ ರೀತಿ ಅರ್ಹತೆಯುಳ್ಳ ಬಿ.ಪಿ.ಎಲ್. ಕಾರ್ಡ್ ಗಳನ್ನು ರದ್ದು ಮಾಡಿದರೆ ಬಡ ಕುಟುಂಬಗಳು ಈಗ ಪಡೆಯುತ್ತಿರುವ ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ, ಯೋಜನೆ, ಗೃಹಭಾಗ್ಯ ಯೋಜನೆ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ. ಮನಸ್ವಿನಿ ಯೋಜನೆ ಮುಂತಾದ ಸಾಮಾಜಿಕ ಬದ್ಧತೆಯ ಯೋಜನೆಯ ಲಾಭವನ್ನು ಪಡೆಯುವಲ್ಲಿ ವಂಚಿತರಾಗುತ್ತಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರು, ಅನುದಾನಿತ, ಅನುದಾನರಹಿತ ಕಾಲೇಜುಗಳಲ್ಲಿ ಹಂಗಾಮಿಯಾಗಿ ಕೆಲಸ ಮಾಡುವವರು. ಬೀದಿ ಬದಿ ವ್ಯಾಪಾರಿಗಳು, ಅಸಂಘಟಿತ ಕಾರ್ಮಿಕರು, ಸರ್ಕಾರಿ ಸ್ವಾಮ್ಯದ ಉದ್ಯಮ/ ಮಂಡಳಿ/ ಸಹಕಾರ ಸಂಘ/ ನಿಗಮ ಮಂಡಳಿಗಳ ಹಂಗಾಮಿ ನೌಕರರನ್ನು ಸರ್ಕಾರ ಅನುಸರಿಸುತ್ತಿರುವ ಮಾನದಂಡದಿಂದ ಹೊರಗಿಡಬೇಕು.
ಒಬ್ಬ ವ್ಯಕ್ತಿ 100 ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನ ಹೊಂದಿದ್ದರೆ ಬಿ.ಪಿ.ಎಲ್ ಕಾರ್ಡ್ ಹೊಂದಲು ಅರ್ಹತೆ ಇಲ್ಲ ಎಂಬ ಸರ್ಕಾರದ ವಾದ ಸರಿಯಲ್ಲ.
ಈ ಹಿನ್ನಲೆಯಲ್ಲಿ ಸರ್ಕಾರ ಕಳೆದ 20 ವರ್ಷಗಳ ಹಿಂದಿನ ಅಂದರೆ ಓಬಿರಾಯ ಕಾಲದ ಬಿ.ಪಿ.ಎಲ್ ಕಾರ್ಡ್‌ಗಳನ್ನು ನೀಡಲು ನಿಗದಿ ಮಾಡಿರುವ ಮೇಲ್ಕಂಡ ಮಾನದಂಡವನ್ನು ಕೂಡಲೇ ಬದಲಿಸಿ ರಾಜ್ಯದಲ್ಲಿ ಅರ್ಹರಿಗೆ ಬಿ.ಪಿ.ಎಲ್. ಕಾರ್ಡ್‌ಗಳು ದೊರಕುವಂತೆ ಮಾಡಬೇಕೆಂದು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಆಹಾರ ಸಚಿವರನ್ನು ನಮ್ಮ ಸಂಘಟನೆಯು ಒತ್ತಾಯಿಸಿದೆ.
ಈ ಮೂಲಕ ರಾಜ್ಯಾದ್ಯಂತ 8 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ಗಳನ್ನು ಅವೈಜ್ಞಾನಿಕ ಮಾನದಂಡದಿಂದ ರದ್ದುಪಡಿಸಲಾಗುತ್ತಿದೆ ಎಂದು ಆಹಾರ ಇಲಾಖೆಯ ಮೂಲಕ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಿಗೆ ಅನರ್ಹ ಪಟ್ಟಿ ಮಾಡಿರುವುದನ್ನು ವಾಪಾಸ್ ಪಡೆಯಬೇಕೆಂದು ಸಂಘಟನೆಯು ಒತ್ತಾಯಿಸಿದೆ.