ಶಿವಮೊಗ್ಗದಲ್ಲಿ ಚಿತ್ರೀಕರಣಕ್ಕೆ ಸಿದ್ಧವಾಗಿದೆ ಹಾರರ್ ಸಿನೆಮಾ ಆಧ್ಯಾತ್ಮ* *ಶಿವಮೊಗ್ಗದ ಎಸ್.ಎಂ. ಪ್ರಜ್ವಲ್ ಶೆಟ್ಟಿ ನಿರ್ಮಾಪಕರು* *ಸೆ.22 ರಂದು ದ್ರೌಪದಮ್ಮ ದೇವಸ್ಥಾನದಲ್ಲಿ ಮುಹೂರ್ತ*

*ಶಿವಮೊಗ್ಗದಲ್ಲಿ ಚಿತ್ರೀಕರಣಕ್ಕೆ ಸಿದ್ಧವಾಗಿದೆ ಹಾರರ್ ಸಿನೆಮಾ ಆಧ್ಯಾತ್ಮ*

*ಶಿವಮೊಗ್ಗದ ಎಸ್.ಎಂ. ಪ್ರಜ್ವಲ್ ಶೆಟ್ಟಿ ನಿರ್ಮಾಪಕರು*

*ಸೆ.22 ರಂದು ದ್ರೌಪದಮ್ಮ ದೇವಸ್ಥಾನದಲ್ಲಿ ಮುಹೂರ್ತ*

ಅನು ಪ್ರೊಡಕ್ಷನ್ಸ್ ಬ್ಯಾನರಡಿ ಎಸ್. ಎಂ.ಪ್ರಜ್ವಲ್ ಶೆಟ್ಟಿ ನಿರ್ಮಿಸುತ್ತಿರುವ `ಆಧ್ಯಾತ್ಮ’ ಚಲನ ಚಿತ್ರದ ಮುಹೂರ್ತ ಕಾರ್ಯಕ್ರಮ ಸೆ.22ರಂದು ಬೆಳಗ್ಗೆ9ಕ್ಕೆ ಗೋಪಾಳದ ದ್ರೌಪದಮ್ಮ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಎನ್. ಎಸ್ ರಾಣಾ ತಿಳಿಸಿದ್ದಾರೆ.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂಲತಃ ಶಿವಮೊಗ್ಗದವರೇ ಆದ ಪ್ರಜ್ವಲ್ ಶೆಟ್ಟಿ , ಅನು ಶೆಟ್ಟಿ ಸೇರಿದಂತೆ ಸಮಾನ ಮನಸ್ಕರು ಸೇರಿ ಈಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಕನ್ನಡ ದ ಸಿನಿಮಾ ಮಲೆನಾಡಿನ ದೃಶ್ಯ ವೈಭವದ ಒಂದೊಳ್ಳೆಯಚಿತ್ರ ಉಣ ಬಡಿಸುವ ಉದ್ದೇಶ ನಮ್ಮದಾಗಿದೆ ಎಂದರು.

ಇದೊಂದು ಹಾರರ್ ಕಥಾ ಹಂದರದ ಚಿತ್ರ. ಅನೇಕ ಕುತೂಹಲದ ಅಂಶಗಳು ಚಿತ್ರದಲ್ಲಿವೆ. ಚಿತ್ರದಲ್ಲಿ ಮುಖ್ಯ ಪಾತ್ರವೇ ಕಥೆಯಾಗಿದೆ. ಅದರ ಸುತ್ತ ಅನೇಕ ಪಾತ್ರಗಳು ಬರುತ್ತವೆ . ಎರಡು ಹಾಡು ಚಿತ್ರದಲ್ಲಿದ್ದು, ಮಂದಿಪ್ ಗೌಡ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆಂದು ವಿವರಿಸಿದರು.

ಚಿತ್ರಕ್ಕೆ ಚಿತ್ರಕಥೆ ಬರೆದು, ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಅನು ಶೆಟ್ಟಿ ಮಾತನಾಡಿ, ಸೆ.22 ರಂದು ಬೆಳಗ್ಗೆ 9.11 ಕ್ಕೆ ಗೋಪಾಳದ ದೌಪ್ರದಮ್ಮ ವೃತ್ತದ ದ್ರೌಪದಮ್ಮ ದೇವಸ್ಥಾನದಲ್ಲಿ ಮೂಹರ್ತ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್, ಸೂಡಾ ಅಧ್ಯಕ್ಷ ಹೆಚ್. ಎಸ್.ಸುಂದರೇಶ್, ಡಿವೈಎಸ್‌ಪಿ ಅಂಜನಪ್ಪ ಬಾಬು ಹಾಗೂ ಸೈಬರ್ ಕ್ರೈಂ ಇನ್ಸ್ ಪೆಕ್ಟರ್ ದೀಪಕ್ ಎಂ. ಎಸ್ ಅವರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ಸೆ.22ರಿಂದಲೇ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಕುಂಸಿ, ಆಯನೂರು, ರಿಪ್ಪನ್ ಪೇಟೆ, ಬಾಳೆ ಹೊನ್ನೂರು, ಶಿವಮೊಗ್ಗ, ಭದ್ರಾವತಿ ರಸ್ತೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಶಿವಮೊಗ್ಗದಲ್ಲಿ ಚಿತ್ರದ ನಿರ್ಮಾಣಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗದವರೇ ಆದ ನಿರ್ಮಾಪಕ ಎಸ್.ಎಂ. ಪ್ರಜ್ವಲ್ ಶೆಟ್ಟಿ, ಕಲಾವಿದರಾದ ಯಶಸ್ವಿನಿ, ಹರ್ಷಿತಾ, ಸೂರಿ, ದಾನಂ, ಪೊಲೀಸ್ ಚಂದು ಸತೀಶ್, ಚಿರಂಜೀವಿ ಬಾಬು ಮತ್ತಿತರರು ಇದ್ದರು.