ಚಿಕ್ಕ ಚಿಕ್ಕ ಜಾತಿಗಳನ್ನು ಪಕ್ಷದ ನೆಲೆಯೊಳಗೆ ತಂದು ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿ-ಡಾ.ಮಂಜುನಾಥ ಭಂಡಾರಿ…*  *ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಡಾ.ಮಂಜುನಾಥ ಭಂಡಾರಿಯವರಿಗೆ ಕೃತಜ್ಞತೆ ಸಲ್ಲಿಸಿದ ಜಿಲ್ಲಾ ಓಬಿಸಿ ಅಧ್ಯಕ್ಷ ರಮೇಶ್ ಶಂಕರಘಟ್ಟ.*

 *ಚಿಕ್ಕ ಚಿಕ್ಕ ಜಾತಿಗಳನ್ನು ಪಕ್ಷದ ನೆಲೆಯೊಳಗೆ ತಂದು ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿ-ಡಾ.ಮಂಜುನಾಥ ಭಂಡಾರಿ…*

 *ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಡಾ.ಮಂಜುನಾಥ ಭಂಡಾರಿಯವರಿಗೆ ಕೃತಜ್ಞತೆ ಸಲ್ಲಿಸಿದ ಜಿಲ್ಲಾ ಓಬಿಸಿ ಅಧ್ಯಕ್ಷ ರಮೇಶ್ ಶಂಕರಘಟ್ಟ.*

ಪಕ್ಷದಿಂದ ದೂರ ಉಳಿದಿರುವ ಚಿಕ್ಕ ಚಿಕ್ಕ ಜಾತಿಯ ಜನರನ್ನು ಪಕ್ಷದ ನೆಲೆಯೊಳಗೆ ತಂದು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಸಂಘಟಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿಗಳು ಆದ ಡಾ.ಮಂಜುನಾಥ ಭಂಡಾರಿಯವರು ನೂತನವಾಗಿ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗಕ್ಕೆ ಅಧ್ಯಕ್ಷರಾಗಿ ನೇಮಕವಾಗಿರುವ ಎಂ.ರಮೇಶ್ ಶಂಕರಘಟ್ಟರವರಿಗೆ ಸೂಚಿಸಿದರು.

ಶಿವಮೊಗ್ಗಕ್ಕೆ ಆಗಮಿಸಿದ್ದ ಡಾ.ಭಂಡಾರಿಯವರನ್ನು ಭೇಟಿ ಮಾಡಿ ಜಿಲ್ಲಾ ಓಬಿಸಿ ವಿಭಾಗಕ್ಕೆ ಅಧ್ಯಕ್ಷರಾಗಿ ನೇಮಿಸಿರುವುದಕ್ಕೆ ಕೃತಜ್ಞತೆಯನ್ನು ಅರ್ಪಿಸಿದ ಸಂದರ್ಭದಲ್ಲಿ ಅವರಿಗೆ ಕಿವಿಮಾತು ಹೇಳಿದರು.

ನೂತನ ಪದಾಧಿಕಾರಿಗಳನ್ನು ನೇಮಿಸುವ ಸಂದರ್ಭದಲ್ಲಿ ಎಲ್ಲಾ ವರ್ಗಗಳ ಜನರಿಗೂ ಪ್ರಾತಿನಿಧ್ಯ ನೀಡಬೇಕು. ಅತೀ ಹಿಂದುಳಿದ ವರ್ಗದ ಪ್ರತಿನಿಧಿಗಳಿಗೆ ಆದ್ಯತೆ ನೀಡಿ ಅವರು ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಮಾಡುವ ಹೊಣೆಗಾರಿಕೆ ನಿಮ್ಮ ಮೇಲಿದೆ. ಜಿಲ್ಲೆಯಲ್ಲಿ ವಾಯ್ಸ್ ಆಫ್ ಓಬಿಸಿ-100 ಸಮಾವೇಶಗಳ ಯಶಸ್ವಿಗೊಳಿಸಲು ಜಿಲ್ಲೆಯಾದ್ಯಂತ ಪ್ರವಾಸ ಕೈಗೊಳ್ಳಲು ಸೂಚಿಸಿದರಲ್ಲದೇ, ಪಕ್ಷ ಸಂಘಟನೆಗಾಗಿ ಹಲವಾರು ಸಲಹೆ-ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಓಬಿಸಿ ಕೋಆರ್ಡಿನೇಟರ್ ಜಿ.ಡಿ.ಮಂಜುನಾಥ್, ಕೃಷಿ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ನಿರ್ದೇಶಕರಾದ ಶಶಾಂಕಗೌಡ, ಕೆಪಿಸಿಸಿ ಕೋಆರ್ಡಿನೇಟರ್ ಆರ್ ಮೋಹನ್, ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಮತ್ತಿತರರು ಇದ್ದರು.