ರಾಜ್ಯ ಕೈಮಗ್ಗ ಮೂಲಸೌಕರ್ಯ ಮಂಡಳಿ ಅಧ್ಯಕ್ಷರಾಗಿ ಚೇತನ್ ಯಾಕೆ ಇವರಿಗೆ ಈ ಪಟ್ಟ?

ರಾಜ್ಯ ಕೈಮಗ್ಗ ಮೂಲಸೌಕರ್ಯ ಮಂಡಳಿ ಅಧ್ಯಕ್ಷರಾಗಿ ಚೇತನ್

ಯಾಕೆ ಇವರಿಗೆ ಈ ಪಟ್ಟ?

ರಾಜ್ಯ ಕಾಂಗ್ರೆಸ್​ ಸರ್ಕಾರ ಪಕ್ಷದಲ್ಲಿ ಕೆಲಸ ಮಾಡಿದ ಕಾರ್ಯಕರ್ತರಿಗೆ ಅರ್ಹಸ್ಥಾನಮಾನ ನೀಡುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ. ಒಟ್ಟಾರೆ 39 ನಿಗಮ ಮಂಡಳಿಗೆ ಅಧ್ಯಕ್ಷರನ್ನ ಆಯ್ಕೆ ಮಾಡಿದೆ. ಈ ಪಟ್ಟಿಯಲ್ಲಿ ಶಿವಮೊಗ್ಗದಲ್ಲಿ NSUI ಹಾಗೂ ಯೂತ್ ಕಾಂಗ್ರೆಸ್​ನಲ್ಲಿ ಸಕ್ರೀಯ ಕಾರ್ಯಕರ್ತನಾಗಿ ಕೆಲಸ ಮಾಡಿದ ಚೇತನ್​ ಕೆ ಯುವರನ್ನ ರಾಜ್ಯ ಕೈಮಗ್ಗ ಮೂಲಸೌಕರ್ಯ ಮಂಡಳಿ karnataka state handloom and infrastructure power loom ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.ಸದ್ಯದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ.

ಚೇತನ್​ ಮೂಲತಃ NSUI ನಿಂದ ವಿದ್ಯಾರ್ಥಿ ಹೋರಾಟಕ್ಕೆ ಪ್ರವೇಶ ಪಡೆದರು. 2005 ರಲ್ಲಿ ನ್ಯಾಷನಲ್​ ಪಿಯು ಕಾಲೇಜಿನಲ್ಲಿ ಓದುತ್ತಿದ್ದಾಗ, ಆ ಸಂದರ್ಭದಲ್ಲಿ NSUIನಲ್ಲಿ ಜಿಲ್ಲಾಧ್ಯಕ್ಷರಾಗಿದ್ದ ಮಧುಸೂಧನ್​ ಸಂಪರ್ಕಕ್ಕೆ ಬಂದ ಚೇತನ್​ ಅಲ್ಲಿಂದ ಸತತ ನಾಲ್ಕು ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ NSUI ಸಂಘಟನೆಯನ್ನು ಪ್ರಬಲ ಹಾಗೂ ವಿದ್ಯಾರ್ಥಿ ಪರ ಸಂಘಟನೆಯನ್ನಾಗಿ ರೂಪುಗೊಳಿಸುವಲ್ಲಿ ಸಕ್ರಿಯವಾಗಿ ದುಡಿದರು. ಇವರ ಸೇವೆಗೆ ಪ್ರತಿಫಲವಾಗಿ 2009 ರಲ್ಲಿ NSUI ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಚೇತನ್​ ಆನಂತರ ಎರಡು ವರ್ಷ NSUI ನಗರಾಧ್ಯಕ್ಷರಾಗಿ ಕೆಲಸ ಮಾಡಿದರು. ಈ ವೇಳೆ ದೆಹಲಿಯಲ್ಲಿ ನಡೆಯುವ NSUI ಪದಾಧಿಕಾರಿಗಳ ತರಭೇತಿ ಶಿಬಿರದಲ್ಲಿ ಅತ್ಯುತ್ತಮ ಜಿಲ್ಲಾಧ್ಯಕ್ಷ ಎಂಬ ಗೌರವಕ್ಕೆ ಪಾತ್ರರಾದರು. ವಿಶೇಷ ಅಂದರೆ ಇಡೀ ದೇಶದಲ್ಲಿ ಕೇವಲ 11 ಪದಾಧಿಕಾರಿಗಳಿಗೆ ಈ ಗೌರವ ಲಭಿಸಿತ್ತು.ಆ ಪೈಕಿ ಚೇತನ್ ಸಹ ಒಬ್ಬರು ಎಂಬುದು ಇವರ ಸಾಧನೆಗೆ ಸಾಕ್ಷಿಯಾಗಿದೆ.ಅಲ್ಲದೆ ಸ್ವತಃ ಎಐಸಿಸಿ ವರಿಷ್ಟ ರಾಹುಲ್ ಗಾಂಧಿಯವರು ಚೇತನ್​ ರಿಗೆ ಅತ್ಯುತ್ತಮ ಜಿಲ್ಲಾಧ್ಯಕ್ಷ ಗೌರವ ನೀಡಿ, ಚೇತನ್​ ರ ಸೇವೆಯನ್ನ ಮೆಚ್ಚಿ ಸ್ಮರಿಸಿದ್ದರು.

2016 ರಿಂದ 2020 ರ ಅವಧಿಯಲ್ಲಿ NSUI ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಚೇತನ್​ ರಾಜ್ಯದೆಲ್ಲೆಡೆ ವಿದ್ಯಾರ್ಥಿ ಸಂಘಟನೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸಿದರು. ನಂತರ 2023ವರೆಗೂ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯು ಶ್ರಮವಹಿಸಿದರಷ್ಟೆ ಅಲ್ಲದೆ ತಮಗೆ ವಹಿಸಿದ ಜವಾಬ್ದಾರಿಯಲ್ಲಿ ದಾವಣಗೆರೆ ಹಾಗೂ ಚಿಕ್ಕಮಗಳೂರಿನಲ್ಲಿ ಸಂಘಟನೆಯನ್ನು ಯಶಸ್ವಿಯಾಗಿ ನಿಬಾಯಿಸಿದ್ದರು. ಇದರ ನಡುವೆ ಪಕ್ಷದ ಸೂಚನೆ ಮೇರೆಗೆ ವಿಜಯಪುರದಲ್ಲಿ ಇಂದಿರಾಗಾಂಧಿ ಜಯಂತಿ ಪ್ರಯುಕ್ತ ಮಹಿಳಾ ವಿದ್ಯಾರ್ಥಿಗಳ ಸಮಾವೇಶ ಆಯೋಜನೆ ಉಸ್ತುವಾರಿ ಹೊತ್ತಿದ್ದಷ್ಟೆ ಅಲ್ಲದೆ ಸಮಾವೇಶವನ್ನು ಯಶಸ್ವಿಯಾಗಿ ಜರಗುವಂತೆ ನಿರ್ವಹಿಸಿದರು. ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅಂದು ಕೆಪಿಸಿಸಿ ಕಾರ್​ಯದರ್ಶಿಯಾಗಿದ್ದ ದಿನೇಶ್ ಗುಂಡೂರಾವ್​ ರವರು ಚೇತನ್​ ರವರ ಕಾರ್ಯಶ್ರಮವನ್ನು ಮೆಚ್ಚಿಕೊಂಡು ಶ್ಲಾಘಿಸಿದ್ದರು. 2021 ರಲ್ಲಿ ರಾಜೀವ್ ಗಾಂಧಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ರನ್​ ಫಾರ್​ ರಾಜೀವ್ ಓಟವನ್ನು ಆಯೋಜಿಸಿ ಯಶಸ್ವಿಗೊಳಿಸಿದ್ದರು.

ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ದುಡಿಯುವುದರ ಜೊತೆಜೊತೆಗೆ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದಲ್ಲಿ ಎರಡನೇ ಅವಧಿಗೆ ನಿರ್ದೇಶಕನಾಗಿ ಸೇವೆಸಲ್ಲಿಸುತ್ತಿರುವ ಚೇತನ್​ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಯುವ ವೇದಿಕೆಯ ಜಿಲ್ಲಾಧ್ಯಕ್ಷರಾಗಿ ಸಮುದಾಯದ ಯುವಕರನ್ನ ಗುರುತಿಸಿ ಅಭಿನಂದಿಸುವ ನಿಟ್ಟಿನಲ್ಲಿ ಪ್ರತಿವರ್ಷ ಸಮಾವೇಶ ಆಯೋಜನೆಯ ಉಸ್ತುವಾರಿಯನ್ನ ಹೊತ್ತು ಯಶಸ್ವಿಯಾಗಿ ನಿಬಾಯಿಸುತ್ತಿದ್ದಾರೆ.

ವಿದ್ಯಾರ್ಥಿಗಳ ನಡುವೆ ಚೇತು,,,ಚೇತು ಅಣ್ಣ ಅಂತಲೇ ಕರೆಸಿಕೊಳ್ಳುವ ಚೇತನ್​ ವ್ಯಕ್ತಿಗತವಾಗಿಯು ಸರಳ ಜೀವಿ.ವೇಷಭೂಷಣದಲ್ಲಿಯು ಸಿಂಪಲ್ ಆಗಿರುವ ಚೇತನ್​ ಸಂಘಟನೆಯ ವಿಚಾರದಲ್ಲಿ ದೊಡ್ಡಶಕ್ತಿ ಎಂಬ ಮಾತು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ ನಲ್ಲಿಯೇ ಕೇಳಿಬರುತ್ತದೆ. ಕೊರೊನಾ ಲಾಕ್​ಡೌನ್​ ಸಂದರ್ಭದಲ್ಲಿ ಯಾವ ನಿರೀಕ್ಷೆ ಇಟ್ಟುಕೊಳ್ಳದೆ ಹಾಗೂ ಸಂಭಾವ್ಯ ಅಪಾಯವನ್ನು ಲೆಕ್ಕಿಸದ ಚೇತನ್​ ತನ್ನ ಜೊತೆಗೊಂದಿಷ್ಟು ಹುಡುಗರ ದೊಡ್ಡ ತಂಡವನ್ನೆ ಕಟ್ಟಿಕೊಂಡು 55 ಮೆಗ್ಗಾನ್ ಆಸ್ಪತ್ರೆಯಲ್ಲಿ ಊಟ ವಿತರಿಸಿದ್ದರು. ಇವೆಲ್ಲದರ ನಡುವೆ 2017 ರಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ವಾರ್ಡ್​ 2 ರಲ್ಲಿ ಚುನಾವಣೆಗೂ ಸ್ಪರ್ಧಿಸಿದ್ದರು.

ಪಕ್ಷ ಹಾಗೂ ವಿದ್ಯಾರ್ಥಿ ಸಂಘಟನೆಗಾಗಿ ದುಡಿದ ಚೇತನ್ ರ ಸೇವೆಯನ್ನು ಗುರತಿಸಿ ಸದ್ಯ ಚೇತನ್​ ರಿಗೆ ನಿಗಮಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸದ ವಿಚಾರ.