*ಅಮೂಲ್ ಗೆ ಓಡಿಸಿದ ಕೆ ಎಂ ಎಫ್ ನಂದಿನಿ!* *ಆರ್ ಸಿ ಬಿ ಜೆರ್ಸಿಯಲ್ಲಿ ನಮ್ಮ ನಂದಿನಿ ಬ್ರಾಂಡ್!!*

*ಅಮೂಲ್ ಗೆ ಓಡಿಸಿದ ಕೆ ಎಂ ಎಫ್ ನಂದಿನಿ!*

*ಆರ್ ಸಿ ಬಿ ಜೆರ್ಸಿಯಲ್ಲಿ ನಮ್ಮ ನಂದಿನಿ ಬ್ರಾಂಡ್!!*

ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ತನ್ನ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್), ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಜೊತೆ ಪ್ರಾಯೋಜಕತ್ವದ ಒಪ್ಪಂದವನ್ನು ಅನ್ವೇಷಿಸುತ್ತಿದೆ. ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ ಅಮುಲ್ ಕಳೆದ ವರ್ಷ ಆರ್‌ಸಿಬಿಯ ಪ್ರಾಯೋಜಕರಾಗಿದ್ದರು. ಡೈರಿ ಉತ್ಪನ್ನಗಳ ವಿಭಾಗದ ಅಡಿಯಲ್ಲಿ ಅಧಿಕೃತ ಆರ್‌ಸಿಬಿ ಪಾಲುದಾರರಾಗಿ ಎಂಟ್ರಿ ಆಗಲು ಕೆಎಂಎಫ್‌ ಪ್ರಯತ್ನ ಮಾಡುತ್ತಿದೆ. ಇದರ ಹಕ್ಕುಗಳನ್ನು ಹೊಂದಿರುವ ಏಜೆನ್ಸಿಯನ್ನು ನೇಮಿಲು ಕೆಎಂಎಫ್‌ ಇತ್ತೀಚೆಗೆ ಟೆಂಡರ್‌ ಕೂಡ ಕರೆದಿದೆ ಎನ್ನಲಾಗಿದೆ.

ಐಪಿಎಲ್ 2026 ಗಾಗಿ ನಾವು ಆರ್‌ಸಿಬಿ ಜೊತೆ ಅಧಿಕೃತ ಪಾಲುದಾರಿಕೆಯನ್ನು ನೋಡುತ್ತಿದ್ದೇವೆ. ಐಪಿಎಲ್, ಬಿಸಿಸಿಐ ಮತ್ತು ಫ್ರಾಂಚೈಸ್ ನಿಯಮಗಳಿಗೆ ಅನುಸಾರವಾಗಿ ಈ ಹಕ್ಕುಗಳನ್ನು ಪಡೆಯಲು ಮತ್ತು ಕಾರ್ಯಗತಗೊಳಿಸಲು ಏಜೆನ್ಸಿಗಳನ್ನು ತೊಡಗಿಸಿಕೊಳ್ಳಲು ಟೆಂಡರ್ ಕರೆಯಲಾಗಿದೆ” ಎಂದು ಕೆಎಂಎಫ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಮನಿಕಂಟ್ರೋಲ್‌ ವರದಿ ಮಾಡಿದೆ.

ಐಪಿಎಲ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ತಂಡವಾದ ಆರ್‌ಸಿಬಿ ಕೂಡ ಬಲವಾದ ಸೋಶಿಯಲ್‌ ಮೀಡಿಯಾ ಫಾಲೋವರ್ಸ್‌ಅನ್ನು ಹೊಂದಿದೆ ಮತ್ತು ವಿರಾಟ್ ಕೊಹ್ಲಿ ಜನಪ್ರಿಯ ಫೇಸ್‌. ನಾವು ಕೊಹ್ಲಿ ಮತ್ತು ಇತರ ಇಬ್ಬರು ಆಟಗಾರರನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಲು ನೋಡುತ್ತಿದ್ದೇವೆ. ಇದು ದೆಹಲಿ, ಮುಂಬೈ ಮತ್ತು ಉತ್ತರ ಪ್ರದೇಶದಂತಹ ಮಾರುಕಟ್ಟೆಗಳಲ್ಲಿ ನಂದಿನಿಯ ವಿಸ್ತರಣೆಗೆ ಸಹಕಾರಿಯಾಗುತ್ತದೆ. ಹಾಲು ಹೆಚ್ಚು ಪೌಷ್ಟಿಕವಾಗಿದೆ ಮತ್ತು ನಂದಿನಿ ತನ್ನ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ” ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ ತಿಳಿಸಿದ್ದಾರೆ.